ಕವಿ ಸಿದ್ಧಲಿಂಗಯ್ಯ ಅವರ ಆತ್ಮಕಥನದ ಮೂರನೇ ಭಾಗ. ಸಿದ್ಧಲಿಂಗಯ್ಯ ಅವರ ತಮಾಷೆಯ ಪ್ರಸಂಗಗಳು ಮುದ ನೀಡುವಂತಿವೆ.
ಡಿ.ಆರ್. ನಾಗರಾಜ್ ಅವರು ’ಊರು ಕೇರಿ’ಯ ಮೊದಲ ಭಾಗದ ಬಗ್ಗೆ ಹೀಗೆ ಬರೆದಿದ್ದರು-
ಸಿದ್ಧಲಿಂಗಯ್ಯನವರ ಆತ್ಮಕತೆಯಲ್ಲಿ ದಲಿತ ಲೇಖಕರ ಕೃತಿಗಳಲ್ಲಿ ನಾವು ನಿರೀಕ್ಷಿಸಬಹುದಾದ ಅನೇಕ ಅಂಶಗಳಿವೆ. ಬಡತನ, ರೊಚ್ಚು, ಅವಮಾನ ಇತ್ಯಾದಿಗಳೆಲ್ಲ ಇವೆ. ಆದರೆ ಇಡೀ ಕೃತಿಯಲ್ಲಿ ಹೊಸದಾದ, ಅನಿರೀಕ್ಷಿತವಾದ ಒಂದು ಮುಖ್ಯಾಂಗವೂ ಇದೆ. ಅದು ಬಡತನ ಮತ್ತು ಹಿಂಸೆಯ ಬಗ್ಗೆ ಭೀತಿಯ ಗೈರುಹಾಜರಿ. ಈ ಕೃತಿಯ ವಸ್ತು ದಲಿತ ಕೃತಿಗಳಿಗೆ ಸಾಮಾನ್ಯವಾದದ್ದು, ಸಹಜವಾದದ್ದು. ಆದರೆ ಈ ವಸ್ತುವನ್ನು ನಿರ್ವಹಿಸುವ ಧ್ವನಿ ಭಿನ್ನವಾದದ್ದು, ಚೇತೋಹಾರಿಯಾದದ್ದು. ಬಡತನ, ಜಾತಿ, ಅವಮಾನಗಳ ಭೀತಿಗಳಿರದ ದಲಿತ ಕತೆ ಸುಳ್ಳು. ಆದರೆ ಅವನ್ನು ಪ್ರತಿಭೆಯಲ್ಲಿ ಲೇಖಕ ಗೆಲ್ಲುತ್ತಾನೆ ಎಂಬ ಮಾತು ನಿಜ. ತಮ್ಮ ಬದುಕಿನಲ್ಲಿನ ಹಸಿವು, ಅವಮಾನಗಳನ್ನು ಕೊಂಚ ವಕೀಕರಣಗೊಳಿಸುವ ಮೂಲಕ ಕವಿ ಸಿದ್ದಲಿಂಗಯ್ಯ ಅವನ್ನು ದಾಟುವ ಮಾರ್ಗಗಳನ್ನು ತೋರಿಸುತ್ತಾರೆ. ಈ ದೃಷ್ಟಿಯಿಂದ “ಊರುಕೇರಿ'ಯಲ್ಲಿ ದಲಿತ ವ್ಯಕ್ತಿತ್ವವನ್ನು ಹೊಸ ರೀತಿಯಲ್ಲಿ ಪ್ರತಿಮೀಕರಿಸುವ ಪ್ರಯತ್ನವಿದೆ.
©2024 Book Brahma Private Limited.