ಸೋತು ಗೆದ್ದ ಮನುಷ್ಯ

Author : ಮಲ್ಲಾರೆಡ್ಡಿ

Pages 120

₹ 115.00




Year of Publication: 2017
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001
Phone: 08022203580/01

Synopsys

ಮಾನಸಿಕ ಖಿನ್ನತೆ ಆಧುನಿಕ ದಿನಗಳ ದೊಡ್ಡ ಸವಾಲಾಗಿ ಬೆಳೆಯುತ್ತಿದೆ. ದೈಹಿಕ ರೋಗಗಳ ಕುರಿತಂತೆ ಇರುವ ಮೌಡ್ಯಗಳು ಸರಿಯುತ್ತಿವೆಯಾದರೂ, ಮಾನಸಿಕ ಕಾಯಿಲೆಯ ಕುರಿತ ಮೌಡ್ಯಗಳು ಇನ್ನೂ ದಟ್ಟವಾಗಿ ಉಳಿದುಕೊಂಡಿವೆ. ಇಂದಿಗೂ ಈ ಕಾಯಿಲೆಯ ಬಗ್ಗೆ ತಪ್ಪು ಕಲ್ಪನೆಗಳಿವೆ. ಈ ಕಾಯಿಲೆಯನ್ನು ಒಪ್ಪಿಕೊಳ್ಳಲು, ಹೇಳಿಕೊಳ್ಳಲು ಹಿಂಜರಿಯುವ ದೊಡ್ಡ ಸಂಖ್ಯೆ ಇರುವುದರಿಂದಲೇ ಈ ಕಾಯಿಲೆ ಕುಟುಂಬವನ್ನೂ, ಸಮಾಜವನ್ನು ತೀವ್ರವಾಗಿ ಕಾಡತೊಡಗಿದೆ. ಜೊತೆಗೆ ಕಾಯಿಲೆ ಪೀಡಿತನನ್ನು ನೋಡುವ ಸಮಾಜದ ದೃಷ್ಟಿಯೂ ಬದಲಾಗಿಲ್ಲ.

ಈ ಸಂದರ್ಭದಲ್ಲಿ ಒಬ್ಬ 'ಸ್ಕಿಜೋಫ್ರೀನಿಯಾ'ದಂತಹ ಮಾನಸಿಕ ಕಾಯಿಲೆಗೆ ಸಿಕ್ಕಿ, ಅದರೊಳಗೆ ನರಳಿ, ಅದನ್ನು ಎದುರಿಸಿ ಗೆದ್ದವನು ತನ್ನ ಅನುಭವವನ್ನು ತೋಡಿಕೊಂಡರೆ ಹೇಗಿರುತ್ತದೆ? ಸಾಹುಕಾರ ರೈತ ಕುಟುಂಬದಲ್ಲಿ ಜನಿಸಿದ ಮಲ್ಲಾರೆಡ್ಡಿಯವರು ಬಹುಕಾಲ ಸ್ಕಿಜೋಫ್ರೀನಿಯಾ ಎಂಬ ಮಾನಸಿಕ ರೋಗಕ್ಕೆ ತುತ್ತಾಗಿ ಸೂಕ್ತ ಚಿಕಿತ್ಸೆಯಿಂದ ಚೇತರಿಸಿಕೊಂಡವರು. ಕಾನೂನನ್ನು ಅಭ್ಯಸಿಸಿ, ಹಲವು ಪ್ರಾಂತಗಳಲ್ಲಿ ಸಂಚರಿಸುತ್ತಾ ಅಲ್ಜೀರಿಯಾ ದೇಶಕ್ಕೂ ಹೋಗಿ ಇಂಗ್ಲಿಷ್ ಅಧ್ಯಾಪಕರಾಗಿ ಉದ್ಯೋಗ ನಿರ್ವಹಿಸಿದ್ದ ಇವರು ಮಾನಸಿಕ ಕಾಯಿಲೆಯಿಂದ ಹೇಗೆ ಜರ್ಜರಿತರಾಗಿ  ವರ್ತಮಾನದಿಂದ ದೂರ ತಳ್ಳಲ್ಪಡುತ್ತಾರೆ ಮತ್ತು ಕೊನೆಗೂ ಅದನ್ನು ಗೆದ್ದು ಹೇಗೆ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಯಿತು ಎನ್ನುವುದನ್ನು ಸೋತು ಗೆದ್ದ ಮನುಷ್ಯ ಕೃತಿ ವಿವರಿಸುತ್ತದೆ. 

Related Books