ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಆತ್ಮಕತೆಯ ಸಂಪುಟಗಳು. ಈ ಕೃತಿಯು ಡಾ. ಶಿವರಾಮ ಕಾರಂತ ಅವರು ತಮ್ಮ ಸಾಹಿತ್ಯಕ ಬದುಕಿನ ಸಾರ್ಥಕ 60 ವರ್ಷಗಳ ಸುದೀರ್ಘ ಅನುಭವಗಳನ್ನು ಸರಣಿ ಕೃತಿಗಳಲ್ಲಿ ದಾಖಲಿಸಿದ್ದಾರೆ. ಮಿತ್ರರೊಬ್ಬರು ತಮ್ಮ ಜೀವನಚರಿತ್ರೆ ಬರೆಯುವ ಉತ್ಸಾಹ ತೋರಿದಾಗ “ನೀವು ನನ್ನನ್ನು ಕೊಲ್ಲಬೇಕಿಲ್ಲ; ನನ್ನ ಆತ್ಮಹತ್ಯೆಯನ್ನು ನಾನೇ ಮಾಡಿಕೊಳ್ಳುತ್ತೇನೆ” ಎಂದು ಪರಿಹಾಸದಿಂದ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಈ ನಿಷ್ಠುರ ನುಡಿ, ನಿಲುವಿನ ವ್ಯಕ್ತಿ ಮೇಲಿನ ಪುಸ್ತಕಗಳಲ್ಲಿ ವಸ್ತುನಿಷ್ಠವಾಗಿ ಅಂತಹ ಪ್ರಯತ್ನ ಮಾಡಿದ್ದಾರೆ. ಆರಂಭಿಕ “ಬಾಳ್ವೆಯೇ ಬೆಳಕು’ ಕೃತಿಯಲ್ಲಿ ತಮ್ಮಜೀವನದೃಷ್ಟಿಯನ್ನು ಪ್ರತಿಪಾದಿಸಿದ್ದರೆ, 1950ರವರೆಗಿನ ಚಟುವಟಿಕೆ-ಅನುಭವಗಳನ್ನು “ಹುಚ್ಚು ಮನಸ್ಸಿನ ಹತ್ತು ಮುಖದ ಮೊದಲ ಆವೃತ್ತಿಯಲ್ಲಿ, ನಂತರದ ದಶಕದ ಅನುಭವಗಳನ್ನು ಎರಡನೇ ಆವೃತ್ತಿಯಲ್ಲಿ ಬರೆದು ಪ್ರಕಟಿಸಿರುವುದು ಕಾರಂತ ಅಧ್ಯಯನಕ್ಕೆ ಒಂದು ಬಹು ಮುಖ್ಯ ಆಕರ ಒದಗಿಸಿದೆ. ಅವರ ಕಾದಂಬರಿಗಳಷ್ಟೇ ಅಥವಾ ಅದಕ್ಕಿಂತಲೂ ಒಂದು ಕೈ ಮಿಗಿಲಾದ ಜನಪ್ರಿಯತೆಯನ್ನು ಈ ಆತ್ಮಕಥನಗಳು ಉಳಿಸಿಕೊಂಡಿದೆ. ಕಾರಂತರ ಎಂದಿನ ಆಕರ್ಷಕ ಶೈಲಿಯು ಓದುಗರ ಗಮನ ಸೆಳೆಯುತ್ತದೆ.
©2024 Book Brahma Private Limited.