ಬೀನಾ ದಾಸ್ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ದಿಗಂತದಲ್ಲಿ ಪ್ರಜ್ವಲಿಸುತ್ತಿರುವ ಮಿನುಗು ತಾರೆ. ಅವಳ ಸಮಕಾಲೀನರಿಂದ 'ಅಗ್ನಿಕನ್ಯೆ' ಯೆಂದು ಕರೆಸಿಕೊಂಡ ಈಕೆ ವಿದೇಶಿ ಆಳ್ವಿಕೆಯ ವಿರುದ್ಧ ಸಿಡಿದೆದ್ದ ಸಾಕ್ಷಿಪ್ರಜ್ಞೆ, ಕ್ರಾಂತಿಕಾರಿ ಹೋರಾಟದ ಮೂಲಕ ತನ್ನ ಜೀವನವನ್ನು ಆರಂಭಿಸಿದ ಬೀನಾ ದಾಸ್‌ಗೆ ಸುಭಾಷ್ ಚಂದ್ರ ಬೋಸರಷ್ಟೇ ಮಹಾತ್ಮ ಗಾಂಧಿಯೂ ಆದರಣೀಯರು. ಈಕೆ ಬದುಕಿನ ಹತ್ತು ವರ್ಷಗಳ ಕಾಲ ಸೆರೆಮನೆಯಲ್ಲಿದ್ದಳು. ಶಸ್ತ್ರಾಸ್ತ್ರ ಹೋರಾಟದಿಂದ ಆರಂಭಿಸಿದ ಅವಳ ಜೀವನ ಪಯಣ ಗಲಭೆಯೆದ್ದ ನೌಖಾಲಿಯಲ್ಲಿ ಗಾಂಧಿಯವರೊಂದಿಗೆ ಪಾದಯಾತ್ರೆ ಕೈಗೊಳ್ಳುವ ಕಾಂಗ್ರೆಸ್ ನೇತಾರಳಾಗುವವರೆಗೂ ಸಾಗುತ್ತದೆ.
ಬೀನಾ ದಾಸ್‌ಳ ಆತ್ಮಕತೆ 'ಶೃಂಖಲ್ ಝಂಕಾರ್' ಅವಳೊಬ್ಬಳ ಕತೆ ಮಾತ್ರವಾಗದೆ, ಆ ಕಾಲದ ಹೋರಾಟದ ಹಲವು ಮುಖಗಳನ್ನು ಬಿಚ್ಚಿಡುತ್ತದೆ. ಅಂತಹ ಮಹತ್ವದ ಕೃತಿಯನ್ನು ಲೇಖಕಿ ಎನ್. ಗಾಯತ್ರಿ ಕನ್ನಡೀಕರಿಸಿದ್ದಾರೆ.
(ಹೊಸತು, ನವೆಂಬರ್ 2013, ಪುಸ್ತಕದ ಪರಿಚಯ)
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದಿಟ್ಟತನ ಮೆರೆದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದವರಲ್ಲಿ ಬಂಗಾಳದ ಮಹಿಳೆ ಬೀನಾ ದಾಸ್ ಹೆಸರು ಎದ್ದು ಕಾಣುತ್ತದೆ. ಈಕೆ. ಕಲ್ಕತ್ತಾದ ಕಾಂತಿಕಾರಿ, ಸಶಸ ಹೋರಾಟದ ಗುಂಪಿನೊಂದಿಗೆ ಗುರುತಿಸಿಕೊಂಡವರು, ಅಂದಿನ ಬಂಗಾಳದ ಗವರ್ನರ್ ಸ್ಥಾನ ಜಾಕ್‌ಸನ್ ಅವರು ಈಕೆ ಹಾರಿಸಿದ ಗುಂಡು ವಿಫಲವಾಗಿ ಪೊಲೀಸರ ಕೈಗೆ ಸಿಕ್ಕಿ ಸೆರೆಮನೆವಾಸ ಅನುಭವಿಸಬೇಕಾಯ್ತು. ಬ್ರಿಟಿಷ್ ಪತ್ರಿಕೆಗಳು ಸಹ ಇವರನ್ನು ಭಾರತದ ಜೋನ್ ಆಫ್ ಆರ್ಕ್ ಎಂದು ಬಣ್ಣಿಸಿದ್ದವು. ಅಷ್ಟೇ ಅಲ್ಲ, ಸಮಕಾಲೀನರು ಅವರನ್ನು ಆಗ್ನಿಕನೈಯೆಂದೇ ಕರೆದಿದ್ದರು. ಈ ಕೃತಿಯಲ್ಲಿ ಬೀನಾ ದಾಸ್ ತಾನು ಅನುಭವಿಸಿದ ಸೆರೆಮನೆಯ ಬದುಕಿನ ವಿವರಗಳು ಧಾರಾಳವಾಗಿ ಬರೆಯಲ್ಪಟ್ಟಿವೆ. ಸ್ವಾತಂತ್ರ್ಯ ಹೋರಾಟಗಾರರನ್ನು ದೇಶದ್ರೋಹಿಗಳೆಂದೇ ಅಂಗ್ಲ ಅಧಿಕಾರಿಗಳು ತಿಳಿದಿದ್ದರು. ಸೆರೆಮನೆವಾಸ, ಅಲ್ಲಿನ ಅಧಿಕಾರಿಗಳ ದರ್ಪ, ಯಾವುದೇ ಹೊಂದಾಣಿಕೆಗೆ - ಬದಲಾವಣೆಗೆ ಕಿವಿಗೊಡದ ಅಸಂಬದ್ಧ ಜೈಲಿನ ಕಾನೂನುಗಳು, ನಿಯಮಗಳು ಮುಂತಾದವೆಲ್ಲ ಮಾನವೀಯತೆಗೂ ಜೈಲುತಿಕ್ಷೆಗೂ ಇರುವ ಭಾರಿ ಅಂತರವನ್ನು ಹೇಳುತ್ತವೆ. ಶೃಂಖಲೆಯ ಸದ್ದು ಝೇಂಕಾರವಾಗಿರದ ಕೂರ ಕರ್ಕಶ ಝಣಕಾರವಾಗಿದೆ ಆಕೆಯ ಬದುಕಿನಲ್ಲಿ|
©2024 Book Brahma Private Limited.