ಅಂಬಾಮಣಿಮೂರ್ತಿ ಅವರ ಆತ್ಮಕಥನ, ವ್ಯಕ್ತಿ ಚಿತ್ರಣ, ಕೃತಿವಿಮರ್ಶಾ ಸಂಕಲನ ಎಲ್.ಎನ್. ಮುಕುಂದರಾಜ್ ಸಂಪಾದಕತ್ವದ ಕೃತಿ ‘ಶಿರೋಮಣಿ’. ಈ ಕೃತಿಯಲ್ಲಿ ಲೇಖಕಿಯ ಜೀವನ, ಬಾಲ್ಯದ ನೆನಪುಗಳು, ಬೆಳವಣಿಗೆ, ಶಿಕ್ಷಣ, ವೃತ್ತಿ ಬದುಕು ಇತ್ಯಾದಿ ವಿಚಾರಗಳನ್ನು ಕಾಣಬಹುದು. ಅನಾರೋಗ್ಯ ಸಮಸ್ಯೆಯ ದಿನಗಳು, ಕ್ಯಾನ್ಸರ್ ಕುತ್ತಿನಿಂದ ಪಾರಾದ ಸನ್ನಿವೇಶ ಹೀಗೆ ಕೆಲವೊಂದು ಬರಹಗಳು ಮನಸ್ಸು ತಟ್ಟುತ್ತದೆ. ಕವನಗಳನ್ನು ಬರೆಯುತ್ತಿದ್ದ ಲೇಖಕಿ ಮುಂದೆ ಪ್ರಚಲಿತ ವಿಷಯಗಳ ಬಗ್ಗೆ ಪ್ರಬಲವಾಗಿ ಧ್ವನಿಯೆತ್ತುವ, ಅನ್ಯಾಯದ ವಿರುದ್ಧ ಪ್ರತಿಭಟಿಸುವ, ಸಿಡಿದೇಳುವ ಗುಣವನ್ನು ಬೆಳೆಸಿಕೊಂಡದನ್ನು ಕಾಣಬಹುದು. ಅಷ್ಟೇಅಲ್ಲದೇ ನಾಡಿನ ಗಣ್ಯರ, ಖ್ಯಾತನಾಮರ, ಮಠಾಧೀಶರ ನುಡಿಗಳೂ ಕೃತಿಯಲ್ಲಿ ಪಾಲುಪಡೆದುಕೊಂಡಿದೆಎ. ಇಲ್ಲಿನ ಹಲವು ಲೇಖನಗಳು ಅಂಬಾಮಣಿ ಅವರ ಕೃತಿಗಳನ್ನು, ಮಾಧ್ಯಮ ಬರಹಗಳನ್ನು ಪೂರ್ಣ ಓದಿ ಬರೆದಂತಿವೆ. ಹಿರಿಯ ಲೇಖಕಿಯೊಬ್ಬರ ಜೀವನಗಾಥೆಯನ್ನು ಕಟ್ಟಿಕೊಡುವ ನೆಪದಲ್ಲಿ ಹಲವು ವೈಚಾರಿಕ ಹೊಳಹುಗಳನ್ನು ನಾಡಿನ ಪ್ರಮುಖ ಬರಗಾರರ ಮೂಲಕ ತೆರೆದಿಟ್ಟಿದೆ ಈ ಕೃತಿ. ಒಟ್ಟಾರೆಯಾಗಿ ಶಿರೋಮಣಿ ಕೃತಿಯು ವ್ಯಕ್ತಿ ಚಿತ್ರಣದ ಜೊತೆಗೆ ಓದುಗರಿಗೆ ಸ್ಪೂರ್ತಿ ತುಂಬುವ ಹಲವಾರು ವಿಚಾರಗಳನ್ನು ಒಳಗೊಂಡಿದೆ.
ಶಿರೋಮಣಿ - ಬದುಕಿನ ಮಜಲು ಕಾಣಿಸುವ ಮಣಿ(ಪ್ರಜಾವಾಣಿ 2022 ಜನವರಿ 22)
©2024 Book Brahma Private Limited.