ಈ ಪುಸ್ತಕವು ಎನ್. ಸತ್ಯಪ್ರಕಾಶ್ ಅವರ ಜೀವನ ಯಶೋಗಾಥೆ. ತಮ್ಮ ಜೀವನದ ಏಳು ಬೀಳುಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಿದ್ಧಪಡಿಸಿದ್ದಾರೆ. ಈ ಕೃತಿಗೆ ಬೆಲೆಯನ್ನು ನಿಗದಿ ಪಡಿಸಿಲ್ಲ. ಕೃತಿಕೊಳ್ಳುವವರು ತಮ್ಮ ಕೈಲಾದಷ್ಟು ಹಣವನ್ನು ಪಾವತಿಸಬಹುದು. ಎನ್. ಸತ್ಯ ಪ್ರಕಾಶ್ ಅವರ ಚರಿತ್ರೆ ಮುಂದಿನ ಪೀಳಿಗೆಗೆ ಪ್ರಚೋದಕವಾಗಿರಬಹುದು ಅಥವಾ ಮಾದರಿಯಾಗಿರಲೂಬಹುದು. ಸಾಮಾನ್ಯವಾಗಿ ಜೀವನ ಚರಿತ್ರೆಯನ್ನು ದಾಖಲಿಸುವ ಸಂಧರ್ಭದಲ್ಲಿ ಸುಳ್ಳುಗಳು ಸುಳಿದಾಡುವ ಸಾಧ್ಯತೆಗಳು ಹೆಚ್ಚು. ಆದರೆ ಈ ಪುಸ್ತಕದಲ್ಲಿ ತಾವು ಮಾಡಿದ ತಪ್ಪುಗಳನ್ನು ಸವಿವರವಾಗಿ ದಾಖಲಿಸಿದ್ದಾರೆ ಎನ್ ಸತ್ಯಪ್ರಕಾಶ್. ಈ ಪುಸ್ತಕದಲ್ಲಿ ಕೇವಲ ಎನ್ ಸತ್ಯಪ್ರಕಾಶ್ ಅವರ ಜೀವನ ಚರಿತ್ರೆ ಮಾತ್ರವಲ್ಲದೇ, ಅವರ ಪ್ರೀತಿಯ ಶಿ್ಷ್ಯಂದಿರು ಬರೆದಂತಹ ಕೆಲವು ಲೇಖನಗಳು ಮನ ಸೆಳೆಯುತ್ತವೆ. ಶಿಕ್ಷಕ ವೃತ್ತಿಯಿಂದ ವಿರಾಮ ಪಡೆದುಕೊಳ್ಳುವ ಸಮಯದಲ್ಲಿ ತಮ್ಮ ಜೀವನಾನುಭವ ದಾಖಲಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಪ್ರಮಾಣಿಕವಾಗಿ ಬರೆದಿರುವಂತಹ ಈ ಪುಸ್ತಕದಲ್ಲಿ ಬರುವ ಪ್ರತಿಯೊಂದು ಅಂಶವು ಪ್ರತಿಯೊಬ್ಬ ಶಿಕ್ಷಕರಿಗೂ ಮಾರ್ಗದರ್ಶಿ. ತಮ್ಮ ಜೀವನದ ಜೊತೆಗೆ, ತಮ್ಮ ಜೀವನವನ್ನು ರೂಪುಗೊಳಿಸಿದ ಶಿಕ್ಷಕರ ಬಗ್ಗೆ ಕೂಡ ಬರೆದಿದ್ದಾರೆ ಎನ್ ಸತ್ಯಪ್ರಕಾಶ್. ಪುಸ್ತಕದ ‘ಗುರುವಂದನೆ’ ಎಂಬ ಅಧ್ಯಾಯದಲ್ಲಿ ಎನ್ ಸತ್ಯಪ್ರಕಾಶ್ರವರ ಶಿಕ್ಷಣ ವೃತ್ತಿಯ ಬಗ್ಗೆ ಬೆಳಕು ಚೆಲ್ಲುವಂತಹ ಅವರ ವಿದ್ಯಾರ್ಥಿಗಳ ಬರಹಗಳು ಇನ್ನೂ ಮುದ ನೀಡುತ್ತವೆ.
©2024 Book Brahma Private Limited.