ಹಿರಿಯ ಸಾಹಿತಿ ಹೀ.ಚಿ. ಶಾಂತವೀರಯ್ಯ ಅವರ ಬದುಕು-ಬರಹ ಕುರಿತ ಕೃತಿ. ಕನ್ನಡ ಕವಿ ಚರಿತ್ರೆ ಸಂಪುಟ-1` ಹಾಗೂ 2, ಕನ್ನಡ ನಾಡಿನ ಪರಿಚಯ, ನೊಳಂಬರ ಶಾಸನಗಳು, ಒಗಟಿನಾಗರ ಹೀಗೆ ಶಾಸ್ತ್ರೀಯವಾಗಿ ಕೃತಿಗಳನ್ನು ರಚಿಸಿದ್ದು, ಅವರ ಸಮಗ್ರ ಬರಹಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಕನ್ನಡ ನಾಡು ನುಡಿಯ ಬಗ್ಗೆ ತಿಳಿಯಲು ನಾಡಿನಾಧ್ಯಂತ ಸಂಚರಿಸುತ್ತಿದ್ದ ಅವರು ಧಾರ್ಮಿಕ ಸಭೆ, ಶರಣ ಸಾಹಿತ್ಯ ಗೋಷ್ಠಿ, ಸಾಂಸ್ಕೃತಿಕ ಗೋಷ್ಠಿ, ಸಮ್ಮೇಳನ ಸಮಾವೇಶಗಳಲ್ಲಿ, ಸಂಶೋಧನಾತ್ಮಕ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಮಹತ್ವದ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕನ್ನಡಪರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಅವರು ನೊಳಂಬ ವೀರಶೈವ ಸಂಘ, ಅಖಿಲ ಕರ್ನಾಟಕ ವೀರಶೈವ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವ ಕಲ್ಯಾಣ ಮಿಷನ್, ಮನುವನ ನಿವಾಸಿ ಸಂಘ, ಮಿತ್ರ ವೃಂದ, ಅಖಿಲ ಭಾರತ ನಗೆ ಬರಹಗಾರರ ಸಂಘ, ಬಿ.ಎಂ.ಶ್ರೀ. ಪ್ರತಿಷ್ಠಾನ ಮುಂತಾದೆಡೆ ಸದಸ್ಯರಾಗಿ, ವೀರಶೈವ ಮಠಗಳ ಆಸ್ಥಾನ ವಿದ್ವಾಂಸರಾಗಿ, ಶಿಕ್ಷಣ ಸಂಸ್ಥೆಗಳ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಅರವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದು, ಕನ್ನಡ ನಿಘಂಟು, ಸಾವಿರದ ಕೋಶ, ಹರಭಕ್ತಿಸಾರ, ಗಾದೆಗಳ ಸಾರ, ಒಗಟಿನಾಗರ, ಶಾಸನ ಪರಿಚಯ, ಶರಣ ಸಂಪದ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ಸಂಪಾದಿಸಿದ್ದಾರೆ. ತಮಗೆ ಸಾಹಿತ್ಯಕ ಪ್ರೇರಣೆ ಕುರಿತೂ ವ್ಯಕ್ತಪಡಿಸಿದ ಭಾವನೆಗಳನ್ನು ಇಲ್ಲಿ ದಾಖಲಿಸಿದ್ದಾರೆ.
©2024 Book Brahma Private Limited.