ಖ್ಯಾತ ಲೇಖಕಿ ಅನುಪಮಾ ನಿರಂಜನ ಅವರ ಆತ್ಮಕತೆ ’ನೆನಪು-ಸಿಹಿಕಹಿ’. ಈ ಪುಸ್ತಕದ ಬರಹಗಳು ಮೊದಲ ಬಾರಿಗೆ ’ತರಂಗ’ ವಾರಪತ್ರಿಕೆಯಲ್ಲಿ ಸರಣಿಯಾಗಿ ಪ್ರಕಟವಾಗಿದೆ. ಈ ಪುಸ್ತಕದ ಬಗ್ಗೆ ಅನುಪಮಾ ಅವರು ’1982ರಲ್ಲಿ ಎರಡನೆಯ ಬಾರಿಗೆ ಕ್ಯಾನ್ಸರ್‌ಗೆಂದು ನನಗೆ ಶಸ್ತ್ರಕ್ರಿಯೆ ಆದಾಗ ನೋವು, ದುಗುಡಗಳಿಂದ ನಾನು ಬಸವಳಿದಿದ್ದೆ. ಹೆಚ್ಚು ದಿನ ಬದುಕುವುದಿಲ್ಲ ಎಂಬ ಗ್ರಹಿಕೆಯಿತ್ತು. ಜೀವನದುದ್ದಕ್ಕೂ ಹೆಜ್ಜೆ ಹೆಜ್ಜೆಗೂ ಹೋರಾಟವೇ ನನಗಿದಿರಾಗಿತ್ತು. ವೈದ್ಯೆಯಾಗಿ, ಲೇಖಕಿಯಾಗಿ, ಪತ್ನಿಯಾಗಿ, ಮಾತೆಯಾಗಿ ನಾನು ಉಂಡ ಸಿಹಿ-ಕಹಿಗಳನ್ನು ನಾಲ್ಕು ಜನದ ಜೊತೆ ಹಂಚಿಕೊಂಡರೆ ನನ್ನ ಉಳಿದ ಬಾಳು ಸತ್ಯವಾಗಬಹುದೇನೋ ಎಂದು ತೋರಿತು. ಹಾಗೆ ಬರೆಯತೊಡಗಿದ್ದು ’ನೆನಪು: ಸಿಹಿ ಕಹಿ’.
ಅನುಪಮಾ ಅವರು ’ಬರಹಗಾರ್ತಿಯ ಬದುಕು’ ಎಂಬ ಮತ್ತೊಂದು ಪುಸ್ತಕ ಪ್ರಕಟಿಸಿದ್ದಾರೆ.
©2024 Book Brahma Private Limited.