’ನೀವೂ ದೇವರಾಗಿ’ ಹಿರಿಯ ಲೇಖಕ ಅರವಿಂದ ಮಾಲಗತ್ತಿ ಅವರ ಆತ್ಮಕಥನವಿದು. ಲೇಖಕರು ಭಾಗವಹಿಸಿದ ಚಳವಳಿಗಳನ್ನು ವಿವರಿಸುತ್ತಾ, ಬಿಸಿಯ ತಾಪವನ್ನು ವಿಶ್ಲೇಷಿಸುತ್ತಾ ಹೋಗುತ್ತಾರೆ. ದಲಿತ ಚಳವಳಿಯ ಸಂದರ್ಭದಲ್ಲಿ ನಡೆದ ಹೋರಾಟ ಅಲ್ಲಿಯ ವಿಚಾರಗಳನ್ನು ದಾಖಲಿಸಿದ್ದಾರೆ. ’ಹರಿಜನರಿಗೆ’ ಲೇಖಕರು ನೀವೂ ದೇವರಾಗಿ ಎನ್ನುತ್ತಾರೆ. ಗಾಂಧೀಜಿಯವರ ವಿಚಾರಗಳನ್ನು ಪ್ರಸ್ತುತಪಡಿಸುತ್ತಾ, ಅವರಿಗಿದ್ದ ಹರಿಜನರ ಗೌರವವನ್ನು ವಿವರಿಸಿದ್ದಾರೆ.
ಅರವಿಂದ ಮಾಲಗತ್ತಿ ಪುಸ್ತಕ ವಿಮರ್ಶೆ- ಅಸಾಮಾನ್ಯ ಸಾಮಾನ್ಯರ ಲೋಕ ’ನೀವೂ ದೇವರಾಗಿ’(ಕೃಪೆ ; ಪ್ರಜಾವಾಣಿ)
--
‘ಅಸಾಮಾನ್ಯ ಸಾಮಾನ್ಯರ ಲೋಕ’ ಕೃತಿಯ ವಿಮರ್ಶೆ
ದಲಿತೇತರ ಮನಸುಗಳು ದಲಿತ ಬದುಕಿನ ಅಸ್ಪೃಶ್ಯತೆಯಿಂದ ಅವರೆದುರಿಸುವ ಅವಮಾನ, ತುಂಬುತ್ತವೆ. ಆದರೆ ಸಾವಿರಾರು ವರ್ಷಗಳಿಂದ ಸಂಕಷ್ಟ, ಶೋಷಣೆಗಳನ್ನೆದುರಿಸಿಯೂ ತಮ್ಮದೇ ವಿವೇಕ, ಸಂಸ್ಕೃತಿ ಒಳನೋಟವನ್ನವರು ರೂಪಿಸಿಕೊಂಡಿರುವುದು, ತುಳಿತದ ನಡುವೆಯೇ ನೆಲಕ್ಕಂಟಿದ ಗರಿಕೆಯಂತ ತಲೆಯೆತ್ತಿ ಬದುಕಿರುವುದೂ ಗಮನಾರ್ಹ ಸಂಗತಿಗಳಾಗಿವೆ. ಸಾಮಾನ್ಯರೂ ಅಸಾಮಾನ್ಯವಾಗಿರುವ ಲೋಕವನ್ನು ಪ್ರೊ. ಅರವಿಂದ ಮಾಲಗತ್ತಿಯವರು ತಮ್ಮ ಆತ್ಮಕತೆಯ ಎರಡನೆಯ ಭಾಗ ನೀವೂ ದೇವರಾಗಿ'ಯಲ್ಲಿ ಅನಾವರಣಗೊಳಿಸಿದ್ದಾರೆ. ಮೊದಲ ಭಾಗ 'ಗೌರ್ಮೆಂಟ್ ಬ್ರಾಹ್ಮಣ'ವನ್ನು ಓದದಿದ್ದರೂ ಇದನ್ನು ಓದುತ್ತ ಹೋದಂತೆ ಬರದವರ ಬದುಕು, ವ್ಯಕ್ತಿತ್ವಗಳು ಬಿಚ್ಚಿಕೊಳ್ಳತೊಡಗುತ್ತವೆ.
ಅವಿಭಕ್ತ ಕುಟುಂಬದಲ್ಲಿ ಬೆಳೆದ ಹಳ್ಳಿಯ ಕಪ್ಪಕುಲದ ಹುಡುಗನೊಬ್ಬ ಹಲವಾರು ಇವೆ, ಇಲ್ಲಗಳ ನಡುವ ಗಾಳಿ, ನೀರು, ಬೆಳಕು, ಕತ್ತಲೆಗಳನ್ನು ಅರಗಿಸಿಕೊಳ್ಳುತ್ತಾ ಬಾಳಪಯಣದಲ್ಲಿ ದಾಖಲಿಸಿರುವ ಬರಹವಿದು. ವಿಜಯಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಅನುಕೂಲಸ್ಥ ಕೃಷಿ ಕುಟುಂಬದಲ್ಲಿ, ಚರ್ಮದ ವ್ಯವಹಾರ ಮಾಡುವ ಕುಲದಲ್ಲಿ ಹುಟ್ಟಿದ ಬಾಲಕ ತನ್ನ ಸುತ್ತಮುತ್ತ ಇರುವ ತನ್ನ ತಾನರಿದು ತಾನಾರೆಂದು ತಿಳಿದು ತಾನೇ ದೇವರಾದ' ಅಸಾಮಾನ್ಯ ವ್ಯಕ್ತಿತ್ವಗಳನ್ನು ಗಮನಿಸುತ್ತಾನೆ, ಅವರ ವಿವೇಕವನ್ನು ಒಳಗಿಳಿಸಿಕೊಳ್ಳುತ್ತಾನೆ. ತನ್ನ ಸೋಲು ಗೆಲುವು, ಸ್ವೀಕಾರ- ನಿರಾಕರಣೆಯ ಸಂಕಟಗಳು ಕೇವಲ ತನ್ನದಷ್ಟೇ ಅಲ್ಲ ಎಂಬ ಅರಿವಿನ ಬೆಳಕಿನಲ್ಲಿ ಬಾಳು ಕಟ್ಟಿಕೊಳ್ಳುತ್ತಾನೆ. ಅಸ್ಪೃಶ್ಯತೆಯ ಅವಮಾನಕರ ಗಾಯಗಳನ್ನು ದಾಟಲು ಶಿಕ್ಷಣ, ಹೋರಾಟಗಳಂತೆಯೇ ಈ ಗಟ್ಟಿ ಪಾತ್ರಗಳು ಕೊಡಮಾಡಿದ ವಿವೇಕವೂ ಕಾರಣವಾಗುತ್ತದೆ.
ಪುಸ್ತಕದಲ್ಲಿ ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಆಕರವಾಗುಷ್ಟು ವಿಪುಲವಾಗಿ ದೈನಂದಿನಬ ಬದುಕಿನ ವಿವರಗಳಿವೆ. ಬ್ರಾಹ್ಮಣ ವಧುವಿನ ನಾಲಿಗೆಗೆ ಬರೆಹಾಕಿ ದಲಿತ ಜಾತಿಯೊಳಗೆ ತಂದುಕೊಂಡು ತಪ್ಪುದಂಡದ ಊಟ ಹಾಕಿಸಿದ ನಂತರ ಚಿಕ್ಕಪ್ಪನ ಮದುವೆ ಊರ್ಜಿತವಾದದ್ದು; ಮೆಹಬೂಬನು ಎಲ್ಲಮ್ಮ ಚಿಕ್ಕಪ್ಪನ ಮದುವೆ ದೀಕ್ಷೆ ಪಡೆದು ಜೋಗಾಡುವ ಬೂಬಮ್ಮ ಜೋಗತಿಯಾದದ್ದು; ಕುಳಬಾನ ಕಟ್ಟಲು ಹೆಂಡಿಯಾಗಿ ಎಮ್ಮೆದನಗಳ ಹಿಂದೆ ಸಗಣಿ ಹಿಡಿಯಲು ತಿರುಗಾಡಿದ್ದು; ಮುಂಬಯಿಗೆ ಮಗನನ್ನೊಯ್ಯಬೇಡ ಎಂದು ಅಜ್ಜಿ ಬಸ್ಸಿನದುರು ಮಲಗಿ ಡ್ರೈವರನನ್ನು ತಡೆಯುವುದು: ಮೈನೆರೆದ ಮದುವಣಗಿತ್ತಿಯನ್ನು ಮೆರವಣಿಗೆಯ ಎಮ್ಮೆಯ ಮೇಲೆ ಕೂರಿಸದೇ ಅದರ ಬಾಲ ಹಿಡಿಸಿ ನಡೆಸುವುದು ಆಗ ನಡೆಯುವ ತರಲೆಗಳು ;ಲೋಕದಕಣ್ಣಿಗೆ ತಿಳಿಸುವಂತೆ ‘ಮದುವೆ’ ಆಗದೇ ಸಂಗಾತಿ ಧರಣಿಯ ಜೊತೆ ಬದುಕು ಆರಂಭಿಸಿದಾಗ ಆಗುವ ಗೊಂದಲಗಳೇ ಮುಂತಾಗಿ ಹತ್ತಾರು ಪ್ರಸಂಗಗಳು ಹೊತ್ತಗೆಯಲ್ಲಿ ಬಂದುಹೋಗುತ್ತವೆ. ಕೆಲವು ನಕ್ಕುನಕ್ಕು ಕಣ್ಣೀರು ಬರಿಸಿದರೆ, ಉಳಿದವು ಅಚ್ಚರಿಗೆ ಕಣ್ಣರಳುವಂತೆ ಮಾಡುತ್ತವೆ. ಹಳ್ಳಿಯ ಬಡ ಹೆಣ್ಣುಮಕ್ಕಳ ಪೊರೆಯುವ, ಸಂಭಾಳಿಸುವ ಬಾವಣಿಕೆಯ ಗುಣಗಳು ಅರಿವಿಗೆ ನಿಲುಕುತ್ತವೆ.
ಕೆಲವೊಮ್ಮೆ ವಿಚಾರವಂತರೆಂದುಕೊಂಡು ನಮ್ಮ ಸರಿ-ತಪ್ಪು ಅಳತಪಟ್ಟಿಗೆ ತಕ್ಕಂತೆ ಬಂಧುಮಿತ್ರರನ್ನು, ಅಸ್ತೇಷ್ಟರನ್ನು ಅಳೆಯಹೊರಡುತ್ತೇವೆ. ಅದು ನಂಬಿಕೆಯ ಲೋಕಗಳ ನಡುವಿನ ವಿಚಿತ್ರ ಸಾಂಸ್ಕೃತಿಕ ಸಂಘರ್ಷ ಸೋಲುಗೆಲುವುಗಳಿರದ ಒಳಾವರಣಗಳು ರಣರಂಗವಾಗದಿರಲು, ಕದನ. ನಮ್ಮ ಎಲ್ಲರನ್ನೂ ಅವರಿರುವ ಹಾಗೆಯೇ ಅರಿತು ಒಳಗೊಳ್ಳಲು ಮೈತ್ರಿಯ ಕಣ್ಣು ಬೇಕಾಗುತ್ತದೆ. ಈ ದೃಷ್ಟಿಯಿಂದ ನಾಸ್ತಿಕ ಮಗ-ಆಸ್ತಿಕ ತಾಯಿಯ ನಡುವೆ ಕಸಿವಿಸಿಯುಂಟಾಗುವ ಪ್ರಸಂಗದಲ್ಲಿ 'ನೀವೂ ದೇವರಾಗಿ' ಒಂದು ಹೊಸ ವೈಚಾರಿಕ ಆಯಾಮವನ್ನು ಪ್ರವೇಶಿಸುತ್ತದೆ.
ಮಗನ ನಂಬಿಕೆಗಾಗಿ ತನ್ನ ದೇವರುಗಳನ್ನು ಬಿಟ್ಟುಕೊಡಲಾಗದ ಅವ್ವ ಟ್ರಂಕಿನಲ್ಲಿ ದೇವರ ಪಟಗಳನ್ನು ಬಚ್ಚಿಟ್ಟು ಗುಟ್ಟಾಗಿ ಪೂಜೆ ಮಾಡುತ್ತಾ, ಮಗನ ಮದುವೆಯಾಗಲೆಂದು ಎಡಗೈಯಲ್ಲಿ ಊಟ ಮಾಡುವ ಹರಕೆಯೊಪ್ಪಿಸುತ್ತಾ ಮೌನ ಪ್ರತಿರೋಧ ಒಡ್ಡುತ್ತಾಳೆ. ಆಗ ತಾನು ನಂಬಿದ ವೈಚಾರಿಕತೆ, ಮಗನಾಗಿ ತಾಯಿಯ ಅಪೇಕ್ಷೆ ಪೂರೈಸಬೇಕಾದ ಜವಾಬ್ದಾರಿಗಳ ನಡುವ ಹೊಯ್ದಾಡುವ ಲೇಖಕರು, ಪ್ರಸಂಗವನ್ನು ನಿಭಾಯಿಸಿರುವ ಕ್ರಮವು ಚಿಂತನೆಗೆ ಹಚ್ಚುವಂತಿದೆ. ಹೀಗೆ ಬರೆದರೆ ಯಾರೇನೆಂದುಕೊಂಹಾರೋ ಎಂబ ಲೆಕ್ಕಾಚಾರವಿಲ್ಲದ ನಿರ್ಭೀತ, ಪಾರದರ್ಶಕ ಬರವಣಿಗೆ ಗಮನ ಸೆಳೆಯುತ್ತದೆ.
ದ್ವಿತೀಯಾ ವಿಭಕ್ತಿ, 'ಅನ್ನು'ವನ್ನು ಹೆಚ್ಚು ಬಳಸದ ಉತ್ತರ ಕರ್ನಾಟಕದ ಭಾಷಾಶೈಲಿ, ಮಡಿಕೆ (ಮಡಕೆ), ಹಲಿಗೆ (ಹಲಗೆ), ತಗೆಯುವುದು (ತೆಗೆಯುವುದು), ಕುದರೆ (ಕುದುರೆ), ಹೊಡೆತ (ಹೊಡೆತ) ಮುಂತಾದ 'ಶುದ್ಧ ಕನ್ನಡಿಗರು ಕಾಗುಣಿತ ದೋಷ ಎಂದು ಪರಿಗಣಿಸಿಬಿಡುವಂತಹ ಪದಗಳು: ಗದ್ಯದ ನಡುನಡುವೆಯಿರುವ ಕಾವ್ಯಮಯ ಬಿಜಾಪುರಿ ಕನ್ನಡದ ಸಾಲುಗಳು: ಕುತೂಹಲ ಕೆರಳಿಸುತ್ತ ಕಥೆಯಂತೆ ಓದಿಸಿಕೊಳ್ಳುವ ಶೈಲಿ: ಜವಾರಿ ಕನ್ನಡದ ಪದ, ಮಡಿಗಟ್ಟುಗಳು: ಸಾಲುಗಳ ನಡುಏನ ಮೌನ, ಖಾಲಿ ಜಾಗಗಳು ಪುಸ್ತಕದಲ್ಲಿ ಎದ್ದು ಕಾಣುತ್ತವೆ.
ತಮ್ಮ ವೈಯಕ್ತಿಕ ವಿವರಗಳನ್ನು ದಾಖಲಿಸುವ ಭರದಲ್ಲಿ ಕೆಲವು ಆತ್ಮಚರಿತ್ರೆಗಳು 'ನಾನು'ವಿನಲ್ಲೇ ವಿಜೃಂಭಿಸಿ ಇತರ ಪಾತ್ರ, ಘಟನೆ, ವಿವರಗಳನ್ನು ಮಸುಕಾಗಿಸುವುದಿದೆ. ನಿರೂಪಿಸುವ ಪ್ರತಿ ಘಟನೆ, ಚಿತ್ರಿಸಿದ ಪ್ರತಿ ಪಾತ್ರವೂ 'ನಾನು'ಎಗರಿಸುವ ಒಂದು ಹೂವಾಗಿ ತುರಾಯಿ, ಅಲಂಕರಿಸುವಂಥ ಬರವಣಿಗೆಯನ್ನು ನೋಡಿದ್ದೇವೆ. 'ನೀವೂ ದೇವರಾಗಿ'ಯಲ್ಲಿ ಆತ್ಮವಿಮರ್ಶೆ ಮೇಲುಗೈ ಪಡೆದಿರುವುದರಿಂದ ಸ್ವಪ್ರಶಂಸೆ, ಸ್ವಮರುಕಗಳು ಕಡಿಮೆಯಿರುವುದು ಒಳ್ಳೆಯ ಅಂಶವಾಗಿದೆ. ಹಾಗಾಗಿ ಬರಹವು ಓದುವವರನ್ನು ಸುಸ್ತು ಹೊಡೆಸದೇ ಸುಲಲಿತವಾಗಿ ಮುಂದಕ್ಕೊಯ್ಯುತ್ತದೆ. ಶೋಷಿತ ಗುರುತಿನ ಆಚೆಗೊಂದು ದಾಟುವಿಕೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಪುಸ್ತಕದಲ್ಲಿ ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಅಕರವಾಗುವಷ್ಟು ವಿಪುಲವಾಗಿ ದೈನಂದಿನ ಬದುಕಿನ ವಿವರಗಳಿವೆ. ಬ್ರಾಹ್ಮಣ ವಧುವಿನ ನಾಲಿಗೆಗೆ ಬರಹಾಕಿ ದಲಿತ ಜಾತಿಯೊಳಗೆ ತಂದುಕೊಂಡು ತಪ್ಪುದಂಡದ ಊಟ ಹಾಕಿಸಿದ. ನಂತರ ಚಿಕ್ಕಪ್ಪನ ಮದುವೆ ಊರ್ಜಿತವಾದದ್ದು: ಮೆಹಬೂಬನು ಎಲ್ಲಮ್ಮ ದೀಕ್ಷೆ ಪಡೆದು ಜೋಗಾಡುವ ಬೂಬಮ್ಮ ಜೋಗತಿಯಾದದ್ದು; ಕುಳಬಾವ ಕಟ್ಟಲು ಹಂಪಿಗಾಗಿ ಎಮೈದನಗಳ ಹಿಂದೆ ಸಗಣಿ ಹಿಡಿಯಲು ತಿರುಗಾಡಿದ್ದು,ನೀವೂ ದೇವರಾಗಿ' ಬಾಳಪಯಣದ ನಿರೂಪಣೆಗೆ ಒಂದು ಹೊಸ ಸಾಧ್ಯತೆಯನ್ನು ಸೂಚಿಸುವಂತಿದೆ. ಆತ್ಮಕತೆಯ ಬರವಣಿಗೆಯೆನ್ನುವುದು ಗಾಳಿಪಟ ಹಾರಿಸಿದಂತಲ್ಲ. ಆಗ ನಡೆಯುವ ತರಲೆಗಳು: ಲೋಕದ ಕಣ್ಣಿಗೆ ತಿಳಿಸುವಂತೆ 'ಮದುವೆ' ಆಗದೇ ಸಂಗಾತಿ ಧರಣಿಯ ಜೊತೆ ಬದುಕು ಆರಂಭಿಸಿದಾಗ ಆಗುವ ಗೊಂದಲಗಳೇ ಮುಂತಾಗಿ ಹತ್ತಾರು ಪ್ರಸಂಗಗಳು ಹೊತ್ತಗೆಯಲ್ಲಿ ಬಂದುಹೋಗುತ್ತವೆ. ಕೆಲವು ಅಭಿನಂದನೆಗಳು.
(ಕೃಪೆ ; ಪ್ರಜಾವಾಣಿ ಬರಹ; ಎಚ್.ಎಸ್ ಅನುಪಮಾ)
---
‘ನೀವೂ ದೇವರಾಗಿ’ ಕೃತಿಯ ವಿಮರ್ಶೆ; ಆಯಿ ಮತ್ತು ತಾಯಿ: ಹೆಣ್ಣು ಪ್ರಜ್ಞೆಯ ಅನಾದಿ ಸಾಮರ್ಥ್ಯ
‘ನಾವು ದೇವರು', 'ನಾನೇ ದೇವರು', 'ನೀವೂ ದೇವರಾಗಿ ಈ ಪದಗಳು ನನಗೆ ಸಂತರ ಜೀವಪ್ರೀತಿ, ವ್ಯಕ್ತಿಗೌರವ, ಸ್ವತಂತ್ರ ಮತ್ತು ಸ್ವ-ಅರಿದಿನ ವಿವೇಕವನ್ನು ನೆನಪಿಗೆ ತಂದವು. ವಿಶೇಷವಾಗಿ ಹದಿನೇಳು ಹದಿನೆಂಟನೇ ಶತಮಾನದಲ್ಲಿ ವ್ಯವಸ್ಥೆಯ ಕೇಂದ್ರೀಕೃತ ಹಾಗೂ ಸ್ಪಶಾಸ್ಪಶ್ಯತೆಯ ಮನೋಧರ್ಮದ ವಿರುದ್ಧ ಸಿಡಿದೆದ್ದ ಸಂತ ತುಕಾರಾಮ, ಪರೀಫ, ನಾಗಲಿಂಗ, ಮಂಟೇಸ್ವಾಮಿ, ಕೊಡೆಕಲ್ಲು ಬಸವಣ್ಣ ತಿಂತಿಣಿ ಮೌನಪ್ಪ ಇವರೆಲ್ಲರೂ ತಾವೇ ದೇವರಾಗುವ ಮತ್ತು ನೀವೂ ದೇವರಾಗಿ ಎನ್ನುವ ತತ್ವಬೋಧಿಸಿದವರು, ಶರಣರು ದೇಹವನ್ನು ಆಲಕರಿಸಿದರೆ ತತ್ವಪದಕಾರರು ದೇಹವನ್ನೇ ದೈವತ್ವಕ್ಕೇರಿಸಿದರು.
ದೇವರಾಗುವುದೆಂದರೆ ನನ್ನ ಮಟ್ಟಿಗೆ ವ್ಯವಸ್ಥೆಯ ಎಲ್ಲ ವಿಷವೃತ್ತಗಳನ್ನು ವಿಸರ್ಜಿಸಿ ಹೊಸದನ್ನು ಕಟ್ಟುವ ವಿವೇಕ, ತನ್ನ ದಾರಿಯನ್ನು ತಾನೇ ಕಾಣುವ ಹಂಬಲ, ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸುತ್ತ ಭೇದವಿಲ್ಲದೆ ಬದುಕುವುದು ಎಂದರ್ಥ, ಪ್ರೊ. ಅರವಿಂದ ಮಾಲಗತ್ತಿಯವರು ತಮ್ಮು ಅವಕಣೆಯಲ್ಲಿ 'ನೀವೂ ದೇವರಾಗಿ' ಎಂದು ಹೇಳುವ ಮೂಲಕ ದಮನಿತ ಜೀವಗಳು ಎದೆ ಸೆಟೆಸಿ ನಿಲ್ಲಲು ಬೇಕಾಗಿರುವ ಸ್ವಾಭಿಮಾನದ ದಾರಿಗಳನ್ನು ತೆರೆದು ತೋರಿಸಿದ್ದಾರೆ. ಇಂದಿನ ಶಿಕ್ಷಣ ಮತ್ತು ಉದ್ಯೋಗಗಳಿಗೆ ತೆರೆದುಕೊಳ್ಳುತ್ತಿರುವ ಕುಲಕಸುಬು ಆಧಾರಿತ ಸಮುದಾಯದ ಹುಡುಗರಲ್ಲಿ ವೈಚಾರಿಕ ಕಸುವು ಬೆಳೆಯುತ್ತಿಲ್ಲ. ಅಕ್ಷರಕ್ಕೆ ತೆರೆದುಕೊಳ್ಳುತ್ತಿರುವ ಹೊಸ ತಲೆಮಾರು ಜೀವಶಕ್ತಿಯನ್ನೇ ಕಳೆದುಕೊಂಡವರಂತೆ ಜಡಗಟ್ಟುತ್ತಿದ್ದಾರೆ. ಜಾತಿಯ ಸಂಕಟಗಳು ವಿಮೋಚನೆಯ ಪ್ರಕ್ರಿಯೆಗಳಾಗದೆ ಮೇಲ್ದಾತೀಕರಣದ ಭ್ರಮೆಯಲ್ಲಿ ಸಮುದಾಯಗಳನ್ನು ಸಿಲುಕಿಸಿ ಏಕರೂಪಿಯಾಗಿದಲಾಗುತ್ತಿದೆ. ಇದೊಂದು ರೀತಿ ಸಹತ್ಯೆಯ ಪ್ರಕ್ರಿಯೆಯಾಗಿದೆ. 'ನೀವೂ ದೇವರಾ' ಎನ್ನುವ ದನಿ(ಧ್ವನಿ) ಇಂತಹ ಎಲ್ಲಾ ರಾಡಿಗಳಿಂದ ನಾವೇ ಎದ್ದು ಹೊರಗೆ ಬರಬೇಕು, ನಾವೇ ಜಾಗೃತರಾಗಬೇಕು, ನಾವೇ ಸ್ವ-ಅರಿವು ವರಾಗಬೇಕು. ನದ್ದು ಕಣ್ಣುಂದಿನ ಬೆಳಕನ್ನು ನಾವೇ ಕಾಣಬೇಕು ಎನ್ನುವ ಸ್ವಪ್ರಜ್ಞೆ ಹುಡುಕಾಟವಾಗಿದೆ.
ಈ ಸ್ವ ಅರಿವಿನ ಹುಡುಕಾಟ, ಸ್ವತಂತ್ರ ಪ್ರಜ್ಞೆ ಹಾಗೂ ಸ್ಥಾಭಿಮಾನಗಳು ಕೇವಲ ಶೈಕ್ಷಣಿಕ ನೆಲೆಗಳಲ್ಲಿ ಅಥವಾ ವ್ಯಕ್ತಿಗಳ ಕೂಗಾಟ, ಹಾರಾಟದಿಂದ, ಒಣ ಸಿದ್ಧಾಂತಗಳಿಂದ ಹೊರಗಿನಿಂದ ರೂಪಗೊಳ್ಳುವಂಥವಲ್ಲ, ಅವು ನನ್ನೊಡಲಿನಿಂದಲೇ ಒಡಮುರಿದು ಹುಟ್ಟಬೇಕು. ಮಾನವೀಯ ಅಂತು ಕರಣಗಳು ನಮ್ಮಲ್ಲಿ ಹುಟ್ಟಬೇಕಾದರೆ ಮೊದಲು ನಾವು ಭೇದವಿಲ್ಲದ ಭಾವದವರಾಗಬೇಕು, ಹೃದಯದಲ್ಲಿ ಆಯಿ ಹಾಗೂ ತಾಯಿತನದ ವಾತ್ಸಲ್ಯ ತುಂಬಿರಬೇಕು. "ನೀವೂ ದೇವರಾಗುವುದು ಅಂದರೆ ಅದೊಂದು ಸ್ಥ-ಅರಿವು ಮತ್ತು ಅನುಭೂತಿ, 'ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ' ಎನ್ನುವ ಮಾತಿಗೆ 'ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ, ನೀನೊಮ್ಮೆ ಒಡಲುಗೊಂಡು ನೋಡಾ' ಎನ್ನುವ ಪ್ರತ್ಯಕಾನುಭವದ ಒಡಲ ಕಿಡಿ, ಈ ಒಡಲ ಕಿಡಿ ಹುಟ್ಟುವುದು ಸಮುದಾಯ ಪ್ರಜ್ಞೆಯಲ್ಲಿ.
ಪ್ರೊ, ಅರವಿಂದ ಮಾಲಗತ್ತಿಯವರ ಆಯಿ ಮತ್ತು ಅವ್ವ ಇಂತಹ ಒಡಲ ಕಿಡಿಯನ್ನು ತಮ್ಮ ಕೌಟುಂಬಿಕ ಹೊಣೆಗಾರಿಕೆಯಲ್ಲಿ ಒಡಲ ಅನುಭವ ಆಗಿಸಿದವರು. ನಮ್ಮ ಒಡಲೇ ನಮ್ಮ ರಾಗ, ದ್ವೇಷಗಳ ಕಡಲು, ಆಯಿ ಮತ್ತು ಅವರ ಕೂಡು ಬಾಳಿನ ಕರ್ತವ್ಯಗಳಲ್ಲಿ ಈ ಒಡಲ ಕಿಡಿ ಕರಗಿ ಪ್ರೀತಿಯ ಒರಡೆಯಾಗಿತ್ತು. ಅರವಿಂದ ಮಾಲಗತ್ತಿಯವರ ವ್ಯಕ್ತಿತ್ವದ ರೂಪಿಕೆಯಲ್ಲಿ ಈ ಪ್ರೀತಿಯ ಒರತೆಯ ಪಾತ್ರ ಹಿರಿದಾದುದು. ಯಜಮಾನ್ಯಶಾಹಿ ವ್ಯವಸ್ಥೆಯಲ್ಲಿ ಹೆಣ್ಣು ಅಧಿಕಾರ ವಿಹೀನಳು ಹಾಗೂ ಪರಾಧೀನೆ. ಆದರೆ ಅರವಿಂದ ಮಾಲಗತ್ತಿಯವರು ಕಟ್ಟಿಕೊಡುವ ಹೆಣ್ಣಿನ ಜಗತ್ತು ಈ ಅಧೀನ ಸಂಸ್ಕೃತಿಗಿಂತ ಬದಲಿಯಾದದ್ದು. ಅದರಲ್ಲೂ ಮಾಲಗತ್ತಿಯವರು ಕಟ್ಟಿಕೊಡುವ ಮುದುಕಿಯರ ಪಾತ್ರಗಳು ಸ್ವತಂತ್ರ ಮತ್ತು ಅಪಾರ ಕೌಟುಂಬಿಕ ಕಾಳಜಿವಳವ, ಗಂಡಸರೆಲ್ಲ ಉದ್ಯೋಗ ಅರಸಿ ಅಥವಾ ತಾವೇ ತಯಾರು ಮಾಡಿದ ಚರ್ಮದ ಉತ್ಪನ್ನಗಳನ್ನು ಮಾರಾಟ ಮಾಡುತ್ತಾ ಮನೆಯ ಹೊರಗೆ ಉಳಿದಾಗ ನೆಲಕಚ್ಚಿ ಕುಟುಂಬವನ್ನು ಕಾಯುವವರು ಈ ಮುದುಕಿಯರೇ, ಮುದುಕಿಯರೆಂದರೆ ಒಂದು ನೈತಿಕ ಶಕ್ತಿ. ಅದೊಂದು ಛಿದ್ರವಾಗದ ಕೌಟುಂಬಿಕ ಆರ್ಥಿಕ ಶಕ್ತಿಯೂ ಹೌದು, ತನ್ನ ಆಣೆ ಲೆಕ್ಕದ ಆರ್ಥಿಕ ನಂಬಿಕೆಯನ್ನೇ ಹುಸಿಗೊಳಿಸಲು ಪ್ರಯತ್ನಿಸಿದ 'ಪೈಸೆ ಲೆಕ್ಕದ ಊರ ಛೇರ್‌ಮನ್‌ನ ಕೆನ್ನೆಗೆ ಬಾರಿಸಿ ದಕ್ಕಿಸಿಕೊಂಡ ಲೇಖಕರ ಆಯಿ ಕೇವಲ ಹಣದ ಪ್ರಶ್ನೆಯನ್ನು ಮಾತ್ರ ಮುಂದಿಡದೆ, ವೃತ್ತಿ ಮತ್ತು ವ್ಯಕ್ತಿಗೌರವದ ಪ್ರಶ್ನೆಗಳನ್ನು ಹಾಗೂ ಬದಲಾಗುತ್ತಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಭಾಷೆ ಹಾಗೂ ಪರಿಕಲ್ಪನೆಗಳನ್ನು ಮುನ್ನೆಲೆಗೆ ತರುತ್ತಾಳೆ.
'ನೀವೂ ದೇವರಾಗಿ, ಆತ್ಮಕಥನ ಮುಖ್ಯವಾಗಿ ಎರಡು ಭಾಗಗಳಲ್ಲಿ ಬೆಳೆದಿದೆ. ಮೊದಲ ಭಾಗ ಲೇಖಕರ ಬಾಲ್ಯವನ್ನು ರೂಪಿಸಿದ ಹಾಗೂ ಪ್ರಭಾವಿಸಿದ ಸಂಗತಿಗಳನ್ನು ಒಳಗೊಂಡಿದ್ದರೆ, ಎರಡನೇ ಭಾಗದಲ್ಲಿ ಲೇಖಕರ ಕಾಲೇಜು ಶಿಕ್ಷಣ, ನೌಕರಿ, ಪ್ರಗತಿಪರ ಚಳವಳಿ ಹಾಗೂ ಬದುಕಿನ ಏಳುಬೀಳುಗಳ ಚಿತ್ರಣವಿದೆ. ಮೊದಲ ಭಾಗದಲ್ಲಿ ಪ್ರಾಣಿಲೋಕ, ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳ ಪಟ್ಟಿ ಅನುಭವವಿದೆ. ಇಲ್ಲಿ ಎಲ್ಲವೂ ಎಲ್ಲರೂ ಆಯಿ ಮತ್ತು ಅವನ ಉಡಿಯೊಳಗಿನ ಶಿಶುಗಳು, ಆದರೆ ಸ್ವತಂತ್ರ ಅಸ್ತಿತ್ವವುಳ್ಳವರು ದನ, ಬೆಕ್ಕು, ಹೋತದಂತಹ ಪ್ರಾಣಿಗಳ ಭಾವನೆಗಳನ್ನು ಅರಿಯಬಲ್ಲಷ್ಟು ಸೂಕ್ಷ್ಮ ಸಂವೇದನಶೀಲರು, ಎರಡನೇ ಭಾಗದಲ್ಲಿ ಶಿಕ್ಷಣ ಹಾಗೂ ಉದ್ಯೋಗ ನಿಮಿತ್ತ ಮನುಷ್ಯ ಸಂಬಂಧ ಹಾಗೂ ನಂಬಿಕೆಗಳಲ್ಲಿ ಹುಟ್ಟುವ ಸಡಿಲತೆಯನ್ನು ಕಾಣುತ್ತೇವೆ. ಇಲ್ಲಿ ಆಯಿ ಮತ್ತು ಅವರು ಅತಂತ್ರರು, ಆದರೆ ಅಬಲೆಯರಲ್ಲ, ಶಿಕ್ಷಣ ಹಾಗೂ ಉದ್ಯೋಗದಿಂದ ಬಂದ ಸಾಮಾಜಿಕ ಪ್ರಜ್ಞೆ ಅರಿವು ಹಾಗೂ ಎಚ್ಚರಗಳು ತಾನು ಬದುಕುತ್ತಿರುವ ಸಮಾಜದ ಆಲೋಚನೆಗೆ ಒಗ್ಗದೆ, ಅದರ ಹಿಡಿತದಿಂದ ಬಿಡಿಸಿಕೊಳ್ಳಲು ಆಗದ ಸಂದಿಗ್ಧತೆಯನ್ನು ಆದರೆ ಅದೇ ಹೊತ್ತಿಗೆ ನಾನು ಮಾಡಿದ್ದು ಸರಿ ಎನ್ನುವ ದೃಢತೆಯನ್ನು ಅದೇ ಶಿಕ್ಷಣ ನೀಡಿದ ಪರಿಯನ್ನೂ ಸ್ವತಃ ಲೇಖಕರೇ ಸ್ವಯಂ ವೇದ್ಯವಾಗಿ ತೋಡಿಕೊಂಡಿದ್ದಾರೆ.
ಈ ಆತ್ಮಕಥನದ ವಿಶೇಷವೆಂದರೆ ಎಲ್ಲರನ್ನೂ ಎಲ್ಲವನ್ನೂ ಒಳಗೊಂಡು ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು, ಅದಕ್ಕಾಗಿ ನೀವೂ ದೇವರಾಗಬೇಕು, ಅದಕ್ಕೆ ಸ್ವಚ್ಛ ಮತ್ತು ಬಿಟ್ಟು ಮನಸ್ಸು ಬೇಕು ಎಂದು ಹೇಳುವುದರಲ್ಲಿ, ಹೊಲ, ಹಠ, ಗುಂಡಿ, ಗುಡಿ, ಸಂದಿ, ಹಂದಿ, ಕೊಂಚುಟ್ಟಾ, ಸಣ್ಣ ಪುಟ್ಟ ಕಳು, ಮೀನು ಹಿಡಿಯುವುದು, ಬಾವಿಯಲ್ಲಿ ಈಜುವುದು, ಆಟ, ಪಾಠ, ನೋಟ, ಹೊಡೆತ, ಬಡಿತ, ಓತಿಕ್ಯಾತದ ಬೇಟಿ, ಜಗಳ, ರಾಜಿ, ಬಹಿಷ್ಠಾರ, ಶಾಲೆ ಕಾಲೇಜುಗಳ ಆಗಮನ, ಸಂತ, ದನ, ವ್ಯಾಪಾರ, ಹೆಣ್ಣು ಗಂಡು, ಅವಿಭಾ ಕುಟುಂಬ, ಹಾವು, ಚೇಳು, ಬೆಕ್ಕು, ಹೋತ, ದೇವರು, ಭಕ್ತರು ಪಂಥಾಹ್ವಾನ, ಆಚರಣೆ, ಸಂಪ್ರದಾಯ, ಕಷ್ಟಕಾರ್ಪಣ್ಯಗಳು ಹೀಗೆ ತಾನಾಡಿ ಬೆಳೆದ ಪರಿಸರದ ಅನೇಕ ಜಟಿಲ ಮತ್ತು ಸಂಕೀರ್ಣ ಸಮಸ್ಯೆಗಳ ಸಜೀವ ಚಿತ್ರಣವನ್ನು ಯಾವ ಮುಲಾಜಿಲ್ಲದೆ, ಮುಜುಗರವಿಲ್ಲದೆ, ಸೆನ್ಸಾರ್ ಇಲ್ಲದೆ ಹೇಳುವಲ್ಲಿಯೇ ಈ ಆತ್ಮಕಥೆಯ ಜೀವಂತಿಕೆ ಅಡಗಿದೆ.
ವ್ಯಕ್ತಿ ಬೆಳೆದಂತೆ ತನ್ನನ್ನು ತಾನು ಸಿದ್ದ ಮಾದರಿಗೆ ಎತ್ತರಿಸಿಕೊಳ್ಳುವ ಹಾಗೂ ಬಗ್ಗಿಸಿಕೊಳ್ಳುವ ಚಟದಲ್ಲಿ ಅಳುಕಿನಿಂದಲೇ ಬದುಕಲು ಕಲಿಯುತ್ತಾನೆ. ಆದರೆ ಈ ಆತಕಥನ ಆತ್ಮರತಿಗೆ ಅವಕಾಶವನ್ನೇ ನೀಡದ ಲೇಖಕರನ್ನು ಒಳಗೊಂಡು ಬೆಳೆಯುವ ಸೀದಾ ಮತ್ತು ಸಾದಾ ಜನರ ಜೀವನಾನುಭದ ವಿಭಿನ್ನ ಕಥನವಾಗಿದೆ. ತನ್ನ ಕೇರಿಯಾಚೆಗಿನ ಸಭ್ಯಸ್ಥಜನರ ಸಮಸ್ಯೆಗಳನ್ನು ತಟಸ್ಥವಾಗಿ ನೋಡಿ, ಸಮರ್ಥವಾಗಿ ಎದುರಿಸಿ, ಸೃಜನಶೀಲ ಪ್ರತಿಕ್ರಿಯೆ ನೀಡಿದ ಕಾರಣ ಪ್ರೊ. ಅರವಿಂದ ಮಾಲಗತ್ತಿಯವರ ಆತ್ಮಕಥೆ ವಿಶಿಷ್ಟವಾಗಿ ಮೂಡಿ ಬರಲು ಕಾರಣವಾಗಿದೆ. ಪ್ರಗತಿಪರನೊಬ್ಬ ತಾಯಿಯ ದೈವ ನಂಬಿಕೆಯಿಂದ ಪ್ರಗತಿಪರ ಚಿಂತಕನಾಗಿ ಬದಲಾಗುವ ಒಂದು ಸಮೂಹ ಚಿಂತನ ಮಾದರಿಯನ್ನು ಇಲ್ಲಿ ಕಾಣುತ್ತೇವೆ. ಜನಪದರಲ್ಲಿ ದೈವಿ ನಂಬಿಕೆಯ ಆಚರಣೆ ಎನ್ನುವುದು ಧರ್ಮ, ಜಾತಿ ಹಾಗೂ ಆಡಂಬರವನ್ನು ಮೀರಿದ್ದು.
ಹೊತ್ತ ಮುಳಗಿದರೇನ ಕತ್ತಲಾದರು ಏನ
ಅಪ್ಪ ನಿನ ಗುಡಿಗೆ ಬರುವನು ಗುಡ್ಡದ ಸಿದ್ಧ
ಮುತ್ತೀನ ಬಾಗೀಲ ತೆರೆದಿಡೊ
ಅಥವಾ ಕಳಸ ಕಂಡಲ್ಲಿ ಕೈ ಮುಗಿವೆ ಎನ್ನುವ ಹೆಣ್ಣಿನ ದೈವೀ ನಂಬಿಕೆಯು ಕರ್ತವ್ಯಪ್ರಜ್ಞೆ ಹಾಗೂ ಬದುಕಿನ ಶ್ರದ್ಧೆಯ ರೂಪದ್ದು. ಅದೊಂದು ಆತ್ಮವಿಶ್ವಾಸವೇ ಹೊರತು ಅಳುಬುರುಕುತನವಲ್ಲ. ಶುಷ್ಕ ಆರಾಧನೆಯೂ ಅಲ್ಲ, ಲೇಖಕರ ತಾಯಿಯ ದೈವಿ ಪ್ರಜ್ಞೆ ಮೂಢನಂಬಿಕೆ ಸ್ವರೂಪದ್ದಲ್ಲ. ಮಗನ ಮದುವೆಯಾಗಬೇಕು. ಎಡವಟ್ಟ ಮಗ ಸಾತ್ವಿಕನಾಗಬೇಕು ಎನ್ನುವ ಸಂಕಲ್ಪ ರೂಪದ್ದು ಹಾಗೂ ಮಾನವೀಯ ಕಳಕಳಿಯುಳ್ಳದ್ದು, ತನ್ನ ಮೇಲೆ ತನಗೆ ನಂಬಿಕೆ ಹಾಗೂ ಭರವಸೆಗಳನ್ನು ಹೆಚ್ಚಿಸುವುದು ಮತ್ತು ಬದುಕಿನ ನಂಬಿಕೆ ಹಾಗೂ ಮಾನವೀಯತೆಗಳು ಮಗನಲ್ಲಿ ಬೆಳೆಯುವಂತೆ ಆತಿಸುವುದು. ಕಾಲದ ಏರುಗತಿಯಲ್ಲಿ ಮಾನಸಿಕವಾಗಿ, ದೈಹಿಕವಾಗಿ ಆಯಿ ಮತ್ತು ತಾಯಿಯ ಉಡಿಯಿಂದ ಉರುಳಿ ಹೋಗುತ್ತಿರುವ ಬದುಕನ್ನು ತಡೆಯಲು ಕೇರಿಯಿಂದ ಊರಿಗೆ (ಮಂಗಳೂರಿಗೆ) ತೆರಳುವ, ಊರಿನಿಂದ ಕೇರಿಗೆ ಹೊರಳುವ ಈ ಉರುಳಾಟ ಮತ್ತು ಹೊರಳಾಟ ಕಾಲ ಮತ್ತು ಸ್ಥಳವನ್ನು ಮೀರಿದ್ದು ಹಾಗೂ ನಿಯಮ ರಹಿತವಾದದ್ದು. ಅಳುಕದ ಆತ್ಮವಿಶ್ವಾಸ ಮತ್ತು ನೈತಿಕ ಪ್ರಜ್ಞೆಗಳು ಆಯಿ ಮತ್ತು ತಾಯಿಯರ ಹೆಣ್ಣು ಪ್ರಜ್ಞೆಯ ಅನಾದಿ ಸಾಮರ್ಥ್ಯಗಳಾಗಿವೆ.
ನೀವೂ ದೇವರಾಗುವುದೆಂದರೆ ಒಳ ಹೊರಗಿನ ರಾಜ್ಯ ಮತ್ತು ದಮನಿತ ಸ್ಥಿತಿಯಿಂದ ಹೊರ ಬಂದು ವಿವೇಕಶೀಲರಾಗುವುದು, ಎದೆ ಮತ್ತು ಮೆದುಳಿಗೆ ಭಾರವಾಗದ ನಿರೂಪಣೆ, ಸರಳ ಮತ್ತು ಸಹಜ ಭಾಷೆ, ಅಂತರಂಗ ತಟ್ಟಿ ವಿವೇಕದ ಕಣ್ಣು ತೆರೆಸುವ, ಸಾಕ್ಷಿ ಪ್ರಜ್ಞೆಯನ್ನು ಬಡಿದೆಬ್ಬಿಸಿ ಭರವಸೆಯ ಭಾವನೆಗಳನ್ನು ಅರಳಿಸುವ ವಿಶಿಷ್ಟ ಕೃತಿ ‘ನೀವೂ ದೇವರಾಗಿ’.
©2024 Book Brahma Private Limited.