ಲೇಖಕ ಭಿ.ಪ. ಕಾಳೆ ಅವರು ಬರೆದ ಸಾಮಾಜಿಕ ಹಾಗೂ ಕೌಟುಂಬಿಕ ಕಾದಂಬರಿ ರೂಪದ ಆತ್ಮಕಥೆ-ನನ್ನ ಗೃಹಿಣಿ. ಸಂಸಾರವು ಕ್ಲೇಶಮಯವೂ ; ದುಃಖದಾಯಕವೂ ಆಗಿದೆ ಎಂದು ಹೇಳುವವರೇ ಸಂಸಾರವನ್ನು ಉಳಿದೆಲ್ಲರಿಗಿಂತ ಹೆಚ್ಚಾಗಿ ತಬ್ಬಿಕೊಂಡಿರುತ್ತಾರೆ. ಸಂಸಾರದ ಬಗ್ಗೆಯೇ ಅತೀ ಹೆಚ್ಚು ಚಿಂತಿತರಾಗಿರುತ್ತಾರೆ. ಹೆಣ್ಣುಮಕ್ಕಳು ಗಂಡುಮಕ್ಕಳಿಗಿಂತ ಹೆಚ್ಚಾಗಿ ಸಂಸಾರ ತೂಗಿಸಿಕೊಂಡು ಹೋಗುತ್ತಿರುತ್ತಾರೆ ಎಂಬುದನ್ನು ಒಂದು ಅರ್ಥದಲ್ಲಿ ತಮ್ಮ ಆತ್ಮಚರಿತ್ರೆಯ ಶೈಲಿಯಲ್ಲಿ ಬರೆದ ಕಾದಂಬರಿ ಇದು.
©2024 Book Brahma Private Limited.