‘ನಡು ಬಗ್ಗಿಸದ ಎದೆಯ ದನಿ’ ಹಿಂದೂತ್ವವಾದಿಯ ಒಳಹೊರಗಿನ ಅನುಭವ ಕಥನ ಕೃತಿಯನ್ನು ಪತ್ರಕರ್ತ, ಲೇಖಕ ನವೀನ್ ಸೂರಿಂಜೆ ಅವರು ನಿರೂಪಿಸಿದ್ದಾರೆ. ಈ ಕೃತಿಗೆ ಡಾ.ಡೋಮಿನಿಕ್ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಈ ಬರಹವು, ಯುವಜನತೆಯ ನಡುವೆ ಹೊಸ ಸಂಚಲನವನ್ನು ಆರಂಭಿಸಿದ ಮಹೇಂದ್ರಕುಮಾರವರ ಬದಕನ್ನು ಕುರಿತದ್ದು. ಅವರ ಮಾತುಗಳೇ ಈ ಬರಹಕ್ಕೆ ಮುನ್ನುಡಿಯಂತ್ತಿವೆ – “ಇದು ನನ್ನೊಬ್ಬನ ಆತ್ಮಕತೆಯಲ್ಲ. ಕೋಮುವಾದದ ಅಮಲೇರಿಸಿಕೊಂಡು ಸತ್ತ ಮತ್ತು ನಿತ್ಯ ಸಾಯುತ್ತಿರುವ ಬಡ ಹಿಂದುಳಿದ ವರ್ಗಗಳ ಯುವಕರೆಲ್ಲರ ಆತ್ಮಕತೆ”. ಇಂತಹ ಒಳನೋಟ ಅಷ್ಟು ಸಲೀಸಾಗಿ ಸಿಗುವಂತಹದ್ದಲ್ಲ. ಬದುಕಿಗೆ ತನ್ನನ್ನು ತಾನೆ ಒಡ್ಡಿಕೊಂಡು, ಆ ಸವಾಲುಗಳಿಂದ ಕಂಡುಕೊಂಡಿರುವ ಹೊಸ ಒಳನೋಟವಾಗಿದೆ. ಅಂತಹ ಸವಾಲುಗಳು ಬಹುಜನಕ್ಕೆ ಉಂಟುಮಾಡುತ್ತಿರುವ ಹಿಂಸೆಯನ್ನು ಬಗೆಹರಿಸಿಕೊಳ್ಳಲು, ಕಕ್ಕುಲಾತಿಯಿಂದ ಮತ್ತಷ್ಟು ಮಾರ್ಗೋಪಾಯಗಳನ್ನು ಅನುಸರಿಸಿದ್ದರಿಂದ ಆ ನೋಟ ದೊರೆತಿದೆ ಎಂದಿದ್ದಾರೆ ಡಾ. ಡೋಮಿನಿಕ್.
©2024 Book Brahma Private Limited.