ಕನ್ನಡ-ಕನ್ನಡಿಗ-ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸಾಂಸ್ಕೃತಿಕವಾಗಿ ಒಂದಾಗಿಸಲು ಕರ್ನಾಟಕದ ಕುಲಪುರೋಹಿತ ಎಂದೇ ಖ್ಯಾತಿಯ ಆಲೂರು ವೆಂಕಟರಾಯರ ಕನಸು ಈವರೆಗೂ ಈಡೇರಿಲ್ಲ. ಇದಕ್ಕೆ ಕನ್ನಡಿಗರ ಅಭಿಮಾನ ಶೂನ್ಯತೆ, ಉದಾಸೀನತೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಹೀಗೆ ಏನೆಲ್ಲ ಕಾರಣಗಳಿರಬಹುದು. ಆದರೆ, ಸುಂದರ ಕರ್ನಾಟಕದ ಕನಸು ಕಂಡಿದ್ದ ಆಲೂರು ವೆಂಕಟರಾಯರ ಕಳಕಳಿ, ಶ್ರಮ, ಹೋರಾಟ ಕನ್ನಡಿಗರಾದ ಎಲ್ಲರಿಗೂ ಅಭಿಮಾನ ಮೂಡಿಸುವಂತಹದ್ದು. ಅವರ ಬದುಕು-ಬರೆಹಗಳು ಕನ್ನಡ ಭಾಷೆಯ ಉನ್ನತಿಗೆ, ಸಾಹಿತ್ಯ- ಸಂಸ್ಕೃತಿಯ ಪ್ರಸಾರಕ್ಕೆ ಮೀಸಲಾಗಿದ್ದವು. ವ್ಯಕ್ತಿಗತ ಸುಖವನ್ನು ಮರೆತು ಕನ್ನಡಿಗರ ಸುಭದ್ರ ಹಾಗೂ ನೆಮ್ಮದಿಯ ಜೀವನಕ್ಕಾಗಿ ಅವರು ಪಟ್ಟ ಶ್ರಮವನ್ನು ಸ್ಮರಿಸಲೇ ಬೇಕು. ಈ ನಿಟ್ಟಿನಲ್ಲಿ ಆಲೂರು ವೆಂಕಟರಾಯರ ಜೀವನ ವೃತ್ತಾಂತವನ್ನುಲೇಖಕ ಸಂಗಮೇಶ ತಮ್ಮನಗೌಡ್ರ ಅವರು ತೀರಾ ಸರಳವಾಗಿ ವಿವರಿಸಿದ ಕೃತಿ ಇದು.
©2024 Book Brahma Private Limited.