ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗಳು ಮತ್ತು ನನ್ನ ಅವಲೋಕನದ ಮಾತುಗಳು-ಈ ಕೃತಿಯು ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಆತ್ಮಚರಿತ್ರೆಯ 6ನೇ ಭಾಗವಾಗಿದೆ. ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ (2016 ಫೆಬ್ರವರಿ) ಲೇಖಕರು, ಆ ಅನುಭವದ ಹಿನ್ನೆಲೆಯಲ್ಲಿ ಪರಿಷತ್ತು ಹೇಗೆ ತನ್ನ ಪ್ರಭಾವವನ್ನು ಮಸುಕಾಗಿಸಿಕೊಳ್ಳುತ್ತಿದೆ. ಪರಿಷತ್ ಸದಸ್ಯರು ಈ ಬಗ್ಗೆ ಎಷ್ಟು ಚಿಂತಿತರಾಗಿದ್ದಾರೆ? ಇತ್ಯಾದಿ ಚಿಂತನೆಗಳು ಮೂಡಿದ್ದು, ಈ ಎಲ್ಲ ಅಂಶಗಳು ತಮ್ಮ ಆತ್ಮಚರಿತ್ರೆ ಭಾಗ-6 ರಚನೆಗೆ ಕಾರಣ ಎಂದು ಲಖಕರು ಹೇಳಿದ್ದಾರೆ.
ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಹಾಗೂ 8 ತಿಂಗಳಳ್ಲಿ ನಾನು ಪಡೆದ ಅನುಭವಗಳು, ಸ್ವಾಮೀಜಿಗಳಿಗೇಕೆ ಕನ್ನಡ ಸಾಹಿತ್ಯ ಪರಿಷತ್ ರಾಜಕಾರಣ?, ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ನಾನು ಕಂಡಂತೆ ಕಾರ್ಯಕರ್ತರ ವಿಶ್ವಾಸದ ಕೊರತೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಒಬ್ಬ ಮಹಿಳಾ ಅಧ್ಯಕ್ಷರಾಗಿಲ್ಲವೇಕೆ? , ಸಾಹಿತಿಗಳಲ್ಲಿ ಗುಂಪುಗಾರಿಕೆ ಮತ್ತು ಸಾಮರಸ್ಯದ ಕೊರತೆ, ಸದಸ್ಯರಲ್ಲಿ ಕೆಲವರು ಮತ ಹಾಕಲು ಉದಾಸೀನ ತೋರುವರೇಕೆ? ಇಂತಹ ಹಲವು ಪ್ರಶ್ನೆಗಳ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಕಟ್ಟುವ ಬೆಳೆಸುವ ಚಿಂತನೆಗಳ ಸಂಗ್ರಹವಿದು.
©2024 Book Brahma Private Limited.