ದಿಟದ ದೀಪಟಿಗೆ

Author : ಮಲ್ಲೇಪುರಂ ಜಿ. ವೆಂಕಟೇಶ್‌

Pages 536

₹ 595.00




Year of Publication: 2023
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ದಿಟದ ದೀಪಟಿಗೆ’ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಆತ್ಮಕಥನ. ಈ ಕೃತಿಗೆ ಪ್ರಕಾಶಕರಾದ ಪ್ರಕಾಶ್ ಕಂಬತ್ತಳ್ಳಿ ಅವರ ಬೆನ್ನುಡಿ ಬರಹವಿದೆ. ಪುಸ್ತಕದ ಕುರಿತು ಬರೆಯುತ್ತಾ ಪ್ರೊ. ಮಲ್ಲೇಪುರಂ ಹುಟ್ಟಿನಿಂದ ಶ್ರೀಮಂತರಲ್ಲ. ಸಿದ್ಧಗಂಗಾ ಮಠದಲ್ಲಿ ಓದಿ, ಮನೆಯವರ ಬೆಂಬಲವಿಲ್ಲದೆ ತಮ್ಮ ಬದುಕನ್ನು ತಾವೇ ರೂಪಿಸಿಕೊಂಡವರು. ಸ್ನೇಹಿತರು ಅವರಿಗೆ ಬೆಂಬಲವಾಗಿ ನಿಂತರು. ಮೂಲತಃ ಮಲ್ಲೇಪುರಂ ಅಸಾಮಾನ್ಯ ಪ್ರತಿಭಾವಂತರು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಅವರು ಗಳಿಸಿದ ಪಾಂಡಿತ್ಯ ಅವರ ಸಮಾಜದವರನ್ನೇ ಅಚ್ಚರಿಗೊಳಿಸಿತು. ಶಾಲಾ ಮಾಸ್ತರರಿಂದ ಕುಲಪತಿಯಾಗುವ ವರೆಗೆ ಹುದ್ದೆಗಳೇ ಅವರನ್ನು ಬೆಂಬತ್ತಿ ಬಂದವು. ಅಜಾತ ಶತ್ರುವಾಗಿ ಸದಾ ಮುಗುಲ್ನಗುತ್ತಾ ಯಾರೊಂದಿಗೂ ವಿರಸ ಕಟ್ಟಿಕೊಳ್ಳದೆ ಎಲ್ಲರೊಂದಿಗೂ ಅನ್ನೋನ್ಯತೆ ಸಾಧಿಸಿರುವುದೇ ಮಲ್ಲೇಪುರಂ ಅವರ ಹೆಗ್ಗಳಿಕೆ ಎಂದಿದ್ದಾರೆ.

ಸಾಮಾನ್ಯವಾಗಿ ಆತ್ಮಕಥನಗಳು ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುತ್ತಾ, ತಾವು ಮಾಡಿದ್ದೆಲ್ಲಾ ಸರಿ ಎಂಬ ಭಾವನೆಯನ್ನು ಉಂಟುಮಾಡುತ್ತವೆ. ಆದರೆ ಮಲ್ಲೇಪುರಂ ಕಥನ ಖುಲ್ಲಂ ಖುಲ್ಲಾ. ಸಾಂಸಾರಿಕ ವಿಷಯವೇ ಇರಲಿ, ವೃತ್ತಿ ಕಥಾನಕವೇ ಇರಲಿ, ಎಲ್ಲವನ್ನೂ ಓದುಗರ ಮುಂದೆ ತೆರೆದಿರಿಸಿದ್ದಾರೆ. ತಮಗೆ ನೆರವಾದವರನ್ನು ತುಂಬು ಹೃದಯದಿಂದ ಸ್ಮರಿಸುತ್ತಾರೆ. ಇರಿಸು ಮುರಿಸು ಮಾಡಿದವರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಸತತ ಓದುಗಾರಿಕೆ, ಪರಿಶ್ರಮ, ಸಾಹಿತ್ಯ, ಸಂಗೀತ – ಹೇಗೆ ಒಬ್ಬ ವ್ಯಕ್ತಿಯ ಆರೋಗ್ಯಕರ ಮನಃಸ್ಥಿತಿಗೆ ಇಂಬಾಗಿರಬಲ್ಲುದೆಂಬುದನ್ನು ಮಲ್ಲೇಪುರಂ ಕಥನ ಸಾಬೀತುಪಡಿಸುತ್ತದೆ. ಅಲಕ್ಷಿತ ವರ್ಗದಿಂದ ಬಂದು, ಕುಲಪತಿಯಂತಹ ಉನ್ನತ ಹುದ್ದೆಗೆ ಏರಿದ ಮಲ್ಲೇಪುರಂ ಆತ್ಮಕಥನ ಅನೇಕರ ಬದುಕಿಗೆ ಸ್ಫೂರ್ತಿಯಾಗಬಲ್ಲದು ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಮಲ್ಲೇಪುರಂ ಜಿ. ವೆಂಕಟೇಶ್‌
(05 June 1952)

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್‌ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ,  ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ‍್ಯಾಂಕಿನೊಡನೆ ಕುವೆಂಪು ಚಿನ್ನದ ...

READ MORE

Related Books