‘ಚಿನ್ನದ ಜಿಂಕೆಯ ಬೆನ್ನ ಹಿಂದೆ’ ಕೆ.ಆರ್. ನಾಯಕ್ ಅವರ ಆತ್ಮ ಕಥನವಾಗಿದೆ. ಹೋರಾಟವನ್ನೇ ಜೀವನವನ್ನಾಗಿಸಿಕೊಂಡು, ಶ್ರದ್ಧೆಯಿಂದ ಕಾರ್ಮಿಕ ಸಂಘಟನೆಗಳಲ್ಲಿ, ಸಾಮಾಜಿಕ ಚಳವಳಿಗಳಲ್ಲಿ ಭಾಗವಹಿಸುತ್ತ ಅತ್ಯಂತ ಕ್ರಿಯಾಶೀಲವಾದ ಬದುಕನ್ನು ತನ್ನದಾಗಿಸಿಕೊಂಡ ಕೆ.ಆರ್. ನಾಯಕ್ ರ ಅನುಭವ ಕಥನವಿದು. ಅತ್ಯಂತ ಶಿಸ್ತಿನ ಕಮ್ಯುನಿಸ್ಟರಾಗಿದ್ದು ಇನ್ನೊಬ್ಬರಿಗೆ ದಾರಿದೀಪ ವಾಗುವಂತಹ ಅವರ ನಡೆವಳಿಕೆ ತುಂಬ ಬೆಲೆಬಾಳುವಂಥದು. ಕಮ್ಯೂನಿಸಂ ಕಾಲ ಮುಗಿಯಿತೆ೦ದು ಗಾರ್ದಭಗಾನ ಹಾಡುವವರಿಗೆ ಈ ಪುಸ್ತಕದಲ್ಲಿ ಒಳ್ಳೆಯ ಉತ್ತರವಿದೆ.
©2024 Book Brahma Private Limited.