‘ಬಿಳಿಯ ಕೋಟು’ ಡಾ. ಜಿ.ಎಸ್. ಮುದಗಲ್ಲ ಅವರ ಆತ್ಮಕಥನ. ಈ ಕೃತಿಗೆ ಖ್ಯಾತ ಕಾದಂಬರಿಕಾರ ವಸುಧೇಂದ್ರ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಈ ಕೃತಿಯ ಕುರಿತು ಬರೆಯುತ್ತಾ ಡಾ.ಜಿ.ಎಸ್. ಮುದಗಲ್ಲ ಅವರು ಬರೆದಿರುವ ಈ ಆತ್ಮಕಥನ ಹೊಸ ಜಗತ್ತೊಂದನ್ನು ನಮ್ಮ ಮುಂದೆ ತೆರೆದಿಡುತ್ತದೆ ಎನ್ನುತ್ತಾರೆ. ಜೊತೆಗೆ ಉತ್ತರ ಕರ್ನಾಟಕದ ಗದಗದವರಾದ ಶ್ರೀಯುತರು ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಬಹುತೇಕ ಚಿಕ್ಕ ಪಟ್ಟಣಗಳಲ್ಲಿ ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ ಇವರು, ಅಲ್ಲಿಯ ಮಧ್ಯಮ ಮತ್ತು ಕೆಳಮಧ್ಯಮ ಜನರೊಡನೆ ಬೆರೆಯುವ ಅವಕಾಶವನ್ನು ಪಡೆದುಕೊಂಡಿದ್ದು, ಆ ಅನುಭವಗಳನ್ನೆಲ್ಲಾ ಅತ್ಯಂತ ಪ್ರಮಾಣಿಕವಾಗಿ ದಾಖಲಿಸಿದ್ದಾರೆ. ಕಥನವನ್ನು ರಮ್ಯಗೊಳಿಸುವ, ತಮ್ಮ ಹಿರಿಮೆಯನ್ನು ಮೆರೆಯುವ ಯಾವ ಒತ್ತಡಗಳನ್ನೂ ಹೇರಿಕೊಳ್ಳದೆ ಸಹಜವಾಗಿ ನಿರೂಪಣೆ ಮಾಡಿರುವುದರಿಂದ ಈ ಕಥನಕ್ಕೆ ಸಾತ್ವಿಕ ಪ್ರಭೆ ದಕ್ಕಿ ಎನ್ನುತ್ತಾರೆ ವಸುದೇಂದ್ರ. ಡಾ. ಜಿ.ಎಸ್. ಮುದಗಲ್ಲ ಅವರು ತಮ್ಮ ವೈದ್ಯವೃತ್ತಿಯ ಜೊತೆಗೆ ಕುಟುಂಬದ ಹಲವು ಸಂಗತಿಗಳನ್ನೂ ಹೇಳಿರುವುದರಿಂದ ಆ ಸೀಮೆಯ ಬದುಕಿನ ಪಾರ್ಶ್ವವೊಂದು ಗೋಚರಿಸುತ್ತದೆ.
©2024 Book Brahma Private Limited.