ದೇಶ ಕಂಡ ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ತಾನು ಗಲ್ಲಿಗೇರುವ ಕೆಲವೇ ದಿನಗಳ ಮೊದಲು ಡೈರಿಯೊಂದನ್ನು ಬರೆದರು. ಭಗತ್ ಅವರ ಆತ್ಮಕತೆಯಂತೆಯೂ, ಸಿಡಿದೆದ್ದ ಭಾರತದ ಜೀವನಚರಿತ್ರೆಯಂತೆಯೂ ಇರುವ ಆ ಡೈರಿಯನ್ನು ಸಂಪಾದಿಸಿದ್ದು ಚಮನ್ ಲಾಲ್. ಲೇಖಕಿ ಡಾ. ಎಚ್.ಎಸ್. ಅನುಪಮಾ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕೃತಿಯ ಕುರಿತು ಹಿರಿಯ ಚಿಂತಕ ಡಾ. ಜಿ. ರಾಮಕೃಷ್ಣ ಹೀಗೆ ಹೇಳುತ್ತಾರೆ: ಭಾರತವನ್ನು ದೋಚುವ ಮುನ್ನ ಬ್ರಿಟನ್ ಐರ್ಲೆಂಡನ್ನು ತುಳಿದು ಹಾಳುಗೆಡವಿತ್ತು, ಐರ್ಲೆಂಡಿನ ಅಜ್ಞಾತ ಲೇಖಕನೊಬ್ಬನ ಮಾತನ್ನು ಭಗತ್ ದಿನಚರಿಯಲ್ಲಿ ದಾಖಲಿಸಿದ್ದಾನೆ. ಕಾಂಗೋದಲ್ಲಿ ಬೆಲ್ಜಿಯಂ ನಡೆಸಿದ ಕ್ರೌರ್ಯವನ್ನು ಟೀಕಿಸುತ್ತಿದ್ದ ಇಟನ್ ಸ್ವತಃ ಐರ್ಲೆಂಡ್ ಮತ್ತು ಭಾರತ ದೇಶಗಳನ್ನು ಹಿಂಡಿ ಹಿಪ್ಪೇಕಾಯಿ ಮಾಡಿತ್ತು. ಭಗತ್ ದಾಖಲಿಸಿರುವ ಈ ಮಾತು ಇಂದಿನ ಅಮೆರಿಕಾದ ದುಷ್ಟ ನೀತಿಗಳಿಗೆ ಕನ್ನಡಿ ಹಿಡಿದಂತಿದೆ. ಮೆಕ್ಸಿಕೋ ದೇಶವನ್ನು 20ನೆಯ ಶತಮಾನದ ಆದಿಯಲ್ಲಿ ಆಕ್ರಮಿಸಿದ ಅಮೆರಿಕಾ ಅಮೇಲೆ ಸತತವಾ 'ಛಪ್ಪನ್ನಾರು ದೇಶಗಳನ್ನು ಧ್ವಂಸ ಮಾಡಿದೆ. ಅತ್ಯುರ ಭಯೋತ್ಪಾದಕ ರಾಷ್ಟ್ರವಾದ ಅಮೆರಿಕಾ ಭಯೋತ್ಪಾದನೆಯನ್ನು ಖಂಡಿಸುತ್ತದೆ, ಹಿಮ್ಮೆಟ್ಟಿಸಲು ಬದ್ಧವಾಗಿದೆ ಮತ್ತು ಮಾನವ ಹಕ್ಕುಗಳ ಪ್ರತಿಪಾದನೆ ಮಾಡುತ್ತದೆ! ಭಗತ್ ಸಿಂಗ್ ನ ದಿನಚರಿಯ ಪುಟಗಳು ಸಮತಾ ಅಲ್ಲಿನ ಸಂದರ್ಭದ ವಿಶ್ಲೇಷಣೆಗೆ ಸಾಮಗ್ರಿ ಒದಗಿಸುತ್ತವೆ. ಅರಿಸ್ಟಾಟಲನ ಒಂದು ನಿರೂಪಣೆಯನ್ನು ಭಗತ್ ಸಿಂಗ್ ದಾಖಲಿಸಿಕೊಂಡಿದ್ದಾನೆ. ಪ್ರಜೆಗಳ ದಮನ ಮಾಡುವ ಯಾವುದೇ ಸರ್ಕಾರವಾಗ೨ ಮತಧರ್ಮದಲ್ಲಿ ಶ್ರದ್ಧೆ ಬೆಳೆಸಿಕೊಳ್ಳಬೇಕೆಂದು ಪಣಿಗಳನ್ನು ಪ್ರೇರೇಪಿಸುತ್ತದೆ ಎಂಬುದು ಆ ನಿರೂಪಣೆ. ಭಾರತವೂ ಸೇರಿದಂತೆ ನಮ್ಮ ಸಮಕಾಲೀನ ಪ್ರಭುತ್ವಗಳು ಹೇಗೆ ಮತಧರ್ಮವನ್ನು ಹರಿತವಾದ ಕತ್ತಿಯನ್ನಾಗಿ ಮಾಡಿಕೊಂಡಿವೆ ಎಂಬುದನ್ನು ಗಮನಿಸಿದಾಗ ನಾಸ್ತಿಕನಾಗಿದ್ದ ಭಗತ್ ಸಿಂಗ್‌ನ ದೂರದೃಷ್ಟಿಯೇ ಅನನ್ಯವಾಗಿ ಕಾಣುತ್ತದೆ.
ಈ ವಿಸ್ತ್ರತವಾದ ಸಂಪದ್ಭರಿತ ದೇಶದ ಜನರನ್ನು ಎಚ್ಚರಿಸದ ಹೊರತು ಅವರು ಬಂದ ಕಷ್ಟಗಳನ್ನು ಹಾಗೇ ನುಂಗಿ ಸಹಿಸಿ ಬದುಕುವುದನ್ನು ರೂಢಿಸಿಕೊಳ್ಳುತ್ತಾರೆ; ಎಂದಿನ ಅವರ ಈ ಸ್ವಭಾವದಿಂದ ಹೊರಗೆಳೆದು ಹೋರಾಟಕ್ಕೆ ಅವರನ್ನು ಅಣಿಗೊಳಿಸಬೇಕು; ಅದರಲ್ಲೂ ನಾಳಿನ ಭವಿಷ್ಯವಾದ ಯುವಜನತೆ ದೇಶದ ಭವಿಷ್ಯ ಕಟ್ಟುವಲ್ಲಿ ಕ್ರಿಯಾಶೀಲರಾಗಬೇಕು.
*
ಈ ನೆಲದ ಶ್ರಮಜೀವಿಗಳೆಲ್ಲ ಒಂದಾಗಿ, ಈ ದೇಶದ ಸಂಪತ್ತನ್ನು ಸೂರೆಗೊಳ್ಳಲು, ಇಲ್ಲಿನ ಅನಕ್ಷರಸ್ಥ-ಬಡ-ಅಂತರ್ಯುದ್ದ ಪೀಡಿತ ಜನರನ್ನು ಶೋಷಿಸಲು ಬಂದ ಬಂಡವಾಳಶಾಹಿ, ಸಾಮ್ರಾಜ್ಯಶಾಹಿಗಳನ್ನು ದೇಶ ಬಿಟ್ಟು ಓಡಿಸಿ.
©2024 Book Brahma Private Limited.