ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಗೊದ್ದು ವೀರೇಶ್ ಅವರು ತಮ್ಮ ಜೀವನ ಚರಿತ್ರೆ ಬರೆದಿದ್ದೇ ಈ ಕೃತಿ-’ ಬಯಸದೆ ಬಂದದ್ದು.’
ಬೋಧನೆ ಹಾಗೂ ಸಂಶೋಧನೆ ಈ ಎರಡು ಅಂಶಗಳು ಕೃತಿಯ ಬಹುಭಾಗವನ್ನು ಆವರಿಸಿವೆ. ಗುರುವೂ ಇಲ್ಲದ, ಗುರಿಯೂ ಇಲ್ಲದ ವಿಧಿಯ ಕಾಲ್ಚೆಂಡಿನಂತೆ ಹಳ್ಳಿಯ ಅನಕ್ಷರಸ್ಥನೊಬ್ಬ, ಮಹಾಪ್ರಾಧ್ಯಾಪಕನಾಗಿ, ಮಹಾಸಂಶೋಧಕನಾಗಿ, ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಯಾಗಿ, ಪವಾಡ ಸದೃಶ್ಯವಾಗಿ ವಿಕಾಸ ಹೊಂದಿದ ಕಥೆಯೇ ’ಬಯಸದೆ ಬಂದದ್ದು’ ಎಂದು ಪ್ರೊ. ದೇಜಗೌ ಅವರು ಈ ಕೃತಿಯನ್ನು ಪ್ರಶಂಸಿಸಿದ್ದಾರೆ.
©2024 Book Brahma Private Limited.