ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ ಕಾರ್ನಾಡ ಅವರ ಆತ್ಮಕತೆ ’ಆಡಾಡತ ಆಯುಷ್ಯ’. ಬೇಂದ್ರೆಯವರ ಕವಿತೆಯ ಸಾಲನ್ನು ಕಾರ್ನಾಡರು ತಮ್ಮ ಆತ್ಮಕತೆಯ ಶೀರ್ಷಿಕೆ ಮಾಡಿದ್ದಾರೆ.
ಶಿರಸಿಯಲ್ಲಿ ಬಾಲ್ಯ ಕಳೆದ ಕಾರ್ನಾಡ ಅವರು ಧಾರವಾಡದ ಕಾಲೇಜು, ಆಕ್ಸಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕವಿಯಾಗಬೇಕು ಅಂದು ಕೊಂಡಿದ್ದ ಕಾರ್ನಾಡರು ಹರಯದ ದಿನಗಳಲ್ಲಿ ಚಿತ್ರ ಬಿಡಿಸಿ ಅದನ್ನು ಗಣ್ಯರಿಗೆ ಕಳಿಸಿ ಅವರ ಹಸ್ತಾಕ್ಷರ ಸಂಗ್ರಹಿಸುವ ಪರಿಪಾಠ ಇಟ್ಟುಕೊಂಡಿದ್ದರು.
ನಾಟಕಕಾರ, ನಟ, ನಿರ್ದೇಶಕ, ರಂಗತಜ್ಞ, ಆಡಳಿತಗಾರ ಹೀಗೆ ಹತ್ತು ಹಲವು ರೀತಿಯಲ್ಲಿ ಅನಾವರಣಗೊಂಡಿರುವ ಕಾರ್ನಾಡರ ವ್ಯಕ್ತಿತ್ವ ಅವರದೇ ಮಾತುಗಳಲ್ಲಿ ಓದುಗ ಸೊಗಸು ಈ ಪುಸ್ತಕದಿಂದ ದೊರೆಯುತ್ತದೆ. ವಿಶಿಷ್ಟ ಅನುಭವಗಳನ್ನು ಮನಮುಟ್ಟುವ ರೀತಿಯಲ್ಲಿ ಕಾರ್ನಾಡರು ದಾಖಲಿಸಿದ್ದಾರೆ.
©2024 Book Brahma Private Limited.