ಡಾ. ಎನ್. ಆರ್. ರಮೇಶ ಅವರು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಭೂವಿಜ್ಞಾನದಲ್ಲಿ ಎಂ.ಎಸ್.ಸಿ. ಪದವಿಯೊಂದಿಗೆ ಚಿನ್ನದ ಪದಕ ಪಡೆದವರು. ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಂತರ ಅದೇ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕರಾಗಿ (2014) ನಿವೃತ್ತಿ ಹೊಂದಿದರು. ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಕರ್ನಾಟಕದವರ ಪೈಕಿ ಇವರೇ ಮೊದಲಿಗರು.
ಅನ್ವೇಷಣೆ, ಭೂವಿಜ್ಞಾನವನ್ನು ಸtತ ಅಧ್ಯಯನ ಮಾಡಿ ಚಿನ್ನ ಸೇರಿದಂತೆ ಭಾರತದ ಅನೇಕ ಕಡೆ ಖನಿಜಗಳ ನಿಕ್ಷೇಪಗಳನ್ನು ಪತ್ತೆ ಹಚ್ಚಿದರು. ‘ತ್ರಿಪುರಾದ ಕಲ್ಚರಲ್ ರಿಮೇನ್ಸ್’ ವಿಷಯದಲ್ಲಿ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದರು. ಭೂವಿಜ್ಞಾನ ವಿಷಯಕ್ಕೆ ಸಂಬಂಧಿಸಿ”ನ್ಯಾಷನಲ್ ಮಿನರಲ್ ಅವಾರ್ಡ್’ ಪಡೆದಿದ್ದಾರೆ. ಹೆಲಿಬೋರ್ನ್ ಭೂಭೌತಿಕ ಸರ್ವೀಸ್ ಸಿಸ್ಟಮ್ ಹಾಗೂ ಸಮುದ್ರ ರತ್ನಾಕರ ಎಂಬ ಅತ್ಯಾಧುನಿಕ ಸಂಶೋಧನಾತ್ಮಕ ಹಡಗನ್ನು ದೇಶಕ್ಕೆ ಸಮರ್ಪಿಸುವಲ್ಲಿ ಇವರ ಪಾತ್ರ ಮಹತ್ವದ್ದು.
ತ್ರಿಪುರ ರಾಜ್ಯ ಸುತ್ತಮುತ್ತ ಶಿಲಾಯುಗದ ಮಾನವರಿದ್ದರು ಎಂಬುದನ್ನು ಪತ್ತೆ ಹಚ್ಚಿದರು. ಭೂ ಉಪಗ್ರಹಗಳನ್ನು ಬಳಸಿ ಹೇಗೆ ಭೂ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುವುದು ಎಂಬುದರ ಮಾಹಿತಿ ನೀಡಿದವರು.