About the Author

ನಾಟಕಕಾರ, ಕವಿ, ಗಮಕಿ ಜೋಳದರಾಶಿ ದೊಡ್ಡನಗೌಡರು 1910 ಜುಲೈ 27ರಂದು ಬಳ್ಳಾರಿ ಜಿಲ್ಲೆಯ ಜೋಳದರಾಶಿ ಗ್ರಾಮದಲ್ಲಿ ಜನಿಸಿದರು. ತಂದೆ ಪಂಪನಗೌಡರು, ತಾಯಿ ರುದ್ರಮ್ಮ. ಜೋಳದರಾಶಿಯಲ್ಲಿಯೇ ಶೀಕ್ಷಣ ಪಡೆದ ಇವರು ಬಯಲಾಟದಲ್ಲಿ ವೇಶಕಟ್ಟುವುದರಲ್ಲಿ ತೊಡಗಿಕೊಂಡರು. ಕನ್ನಡ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಕನಕದಾಸರ ಪಾತ್ರ ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದೆ. 

ಕನ್ನಡ ಮತ್ತು ತೆಲುಗು ಭಾಷೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ರಸವರ್ಷ, ಯಾತ್ರಿಕ, ನಮ್ಮ ಹಂಪೆ, ಗೌಡತಿ ಬರಲ್ಲಿಲ್ಲ, ರಾಮೇಶನ ವಚನಗಳು   ನೋಡ್ರವ್ವ ನಾಟಕ, ಅಭಯ, ಸಾಯದವನ ಸಮಾಧಿ, ಕ್ರಾಂತಿ ಪುರುಷ, ಕನಕದಾಸ ನಂದೇ ನಾನೋದಿದೆ ಆತ್ಮಕಥನ. ಗಮಕ ಕಲಾನಿಧಿ  ಮುಂತಾದವು ಇವರ ಪ್ರಮುಖ ಕೃತಿಗಳು. 

ಬಳ್ಳಾರಿ ಜಿಲ್ಲಾ ಕನ್ನಡ ಕಲಾ ಪರಿಷತ್ತು ಸ್ಥಾಪಿಸಿ ನಡೆಸಿದ ನಾಟಕ ಸಮ್ಮೇಳನಗಳನ್ನು ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರಿಗೆ ಕರ್ನಾಟಕ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಇವರು 1994 ಮೇ 10ರಂದು ನಿಧನರಾದರು. 

ಜೋಳದರಾಶಿ ದೊಡ್ಡನಗೌಡ

(27 Jul 1910-10 May 1994)