ರಾಮದಾಸ್ ಅವರು ಹುಟ್ಟಿದ್ದು 01-02-1940 ರಲ್ಲಿ. ಅವರ ವಿದ್ಯಾಭ್ಯಾಸ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗುಂಡ್ಲುಪೇಟೆ, ಟಿ.ನರಸೀಪುರ, ವಿದ್ಯೋದಯ ಶಾಲೆ ಟಿ.ನರಸೀಪುರ, ಯುವರಾಜಾಸ್ ಕಾಲೇಜು ಮೈಸೂರು, ಮಹಾರಾಜಾಸ್ ಕಾಲೇಜು, ಈಸೂರು, ಮಾನಸ ಗಂಗೋತ್ರಿ, ಮೈಸೂರು, ಎಂ.ಎ. ಮಾಡಿದ್ದಾರೆ. ಮುಲ್ಕಿ ವಿಜಯ ಕಾಲೇಜಿನಲ್ಲಿ ಮೂರು ವರ್ಷ ಕನ್ನಡ ಉಪನ್ಯಾಸಕರಾಗಿ, ಪೂರ್ಣ ಪ್ರಜ್ಞಾ ಕಾಲೇಜು, ಉಡುಪಿ-ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ.
ಪ್ರಕಟಿತ ಕೃತಿಗಳು: ಕಾವ್ಯ: ಋತಗೀತಾಮೃತ. ಕವನಗಳು- ಸ್ವಾತಂತ್ರೆಶ್ವರ ವಚನಗಳು, ಭಸ್ಮಾಸುರ, ಹದಿಹರೆಯದ ಹುಡುಗರು, ಹನಿಮಿನಿ, ಹಾಡು-ಪಾಡು. ನಾಟಕಗಳು: ಇದು ಭಾರತ, ಹೇಡಿಗಳು, ಬೆದರುಬೊಂಬೆ, ತಲೆದಂಡ, ಗರುಡಗಂಬ, ಸಾಕ್ಷಾತ್ಕಾರ, ಜೀವದಯಾಷ್ಟಮಿ ಮತ್ತು ಇತರ ನಾಟಕಗಳು. ಕಥಾ ಸಂಕಲನ: ಸೇಡು, ಹತ್ತು ಕತೆಗಳು. ಕಾದಂಬರಿ: ಕರ್ತಾರನ ಕಮ್ಮಟ, ಇವಳು ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಇವರ ಸಾಹಿತ್ಯ ಕ್ಷೇತ್ರದ ಸಾಧನೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 'ಇದು ಭಾರತಕ್ಕೆ ಅತ್ಯುತ್ತಮ ನಾಟಕ ಬಹುಮಾನ, 'ಭಸ್ಮಾಸುರ' ಕವನ ಸಂಕಲನಕ್ಕೆ ಕಡೆಂಗೋಡ್ಲು ಸ್ಮಾರಕ ಬಹುಮಾನ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.