‘ಪಲ್ಲವಿ ಅನುಪಲ್ಲವಿ’ ಆರ್. ಎನ್. ಜಯಗೋಪಾಲ್ ಆತ್ಮಕತೆ. ಈ ಕೃತಿಯನ್ನು ಪತ್ರಕರ್ತ, ಲೇಖಕ ಎನ್.ಎಸ್. ಶ್ರೀಧರಮೂರ್ತಿ ಅವರು ನಿರೂಪಿಸಿದ್ದಾರೆ. ಆರ್. ಎನ್. ಜಯಗೋಪಾಲ್ ಅವರ ಆತ್ಮಕತೆಯಲ್ಲಿ ಬರೆದುಕೊಳ್ಳುತ್ತ ಹೋದ ಕಾಲ ನನ್ನ ಜೀವನದ ಸಾರ್ಥಕಘಟ್ಟವೆಂದು ಭಾವಿಸುತ್ತೇನೆ ಎನ್ನುತ್ತಾರೆ. ಜಯಗೋಪಾಲ್ ಮಾಡಿಸಿದ ವ್ಯಕ್ತಿ-ಪ್ರಸಂಗಗಳ ಕುರಿತ ಅಂಕಿ-ಅಂಶಗಳನ್ನು ಅವರಿಗೆ ಸಿದ್ಧಪಡಿಸಿಕೊಡುತ್ತಿದ್ದೆ. ಆ ಕುರಿತು ನೆನಪುಗಳನ್ನು ಅವರು ಒಂದೋ ಹೇಳುತ್ತಿದ್ದರು ಇಲ್ಲವೇ ಬರೆದುಕೊಡುತ್ತಿದ್ದರು. ನಾನದನ್ನು ಉದ್ದೇಶಿತ ಸ್ವರೂಪದಲ್ಲಿ ರೂಪಿಸಿ ಮಲ್ಲಿಗೆಯಲ್ಲಿ ಪ್ರಕಟಿಸುತ್ತಿದ್ದೆ ಎಂದು ಕೃತಿಯ ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಜಯಗೋಪಾಲ್ ಅವರ ಜ್ಞಾಪಕಶಕ್ತಿ ಅತ್ಯಂತ ಸ್ಫುಟವಾದದ್ದು, ಕೊಂಚ ಎಳೆ ಸಿಕ್ಕರೂ ಸಾಕು. ಆ ಪ್ರಸಂಗವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದರು. ಎಷ್ಟೋ ಸಲ ಅದನ್ನು ಹಿಡಿಯಲು ಭಾಷೆ ಅತ್ಯಂತ ದುರ್ಬಲ ಮಾಧ್ಯಮ ಎನಿಸುತ್ತಿತ್ತು ಎಂದು ತಮ್ಮ ಅನುಭವಗಳ ಕುರಿತು ಬರೆದಿದ್ದಾರೆ. ಈ ಕೃತಿಯಲ್ಲಿ ಗಮನಿಸಬಹುದಾದರೆ ಜಯಗೋಪಾಲ್ ದಾಖಲಿಸಿರುವುದೆಲ್ಲ ಬೇರೆಯವರ ಕುರಿತ ನೆನಪುಗಳೆ ಎನ್ನುತ್ತಾರೆ ಲೇಖಕ ಶ್ರೀಧರಮೂರ್ತಿ.
©2024 Book Brahma Private Limited.