‘ಕಳೆದ ಕಾಲ ನಡೆದ ದೂರ’ ಕೃತಿಯು ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಅವರ ಆತ್ಮಕಥನವಾಗಿದೆ. ಕೃತಿಯ ಕುರಿತು ಲೇಖಕ ಗೊ.ರು ಚನ್ನಬಸಪ್ಪ ಹೀಗೆ ಹೇಳುತ್ತಾರೆ; ಈ ಆತ್ಮಕಥನದ ಉದ್ದಕ್ಕೂ ಹರಿದಿರುವ ಜೀವದ್ರವ್ಯವೆಂದರೆ , ವ್ಯಕ್ತಿಯ ಘನತೆ ಗೌರವ, ಪ್ರಾಮಾಣಿಕ ಪ್ರಯತ್ನ, ಸರಳ ಸಜ್ಜನಿಕೆ, ಸಹಿತ ಮೀರಿದ ಸೇವೆಯ ಹಂಬಲ, ನ್ಯಾಯನಿಷ್ಠೆ, ನಡೆ ನುಡಿಗಳ ಸಮನ್ವಯ ಇಂತಹ ಮಾನವೀಯ ಮೌಲ್ಯಗಳು. ನ್ಯಾ. ಶಿವರಾಜ ಪಾಟೀಲ ಅವರ ವ್ಯಕ್ತಿತ್ವ ಎಲ್ಲಿಂದಲೋ ಕೊಸರಿ ಬಂದ ಉಸಿರಲ್ಲ; ಅದು ಮಳೆ-ಮಣ್ಣಿನ ಸಂಯೋಗದಿಂದ ಹೊಮ್ಮಿದ ಸಹಜ ಉಸಿರು. ನ್ಯಾ. ಶಿವರಾಜ ಪಾಟೀಲ ಅವರು ತಮ್ಮ ಈ ಆತ್ಮಕಥನವನ್ನು ಮುಗಿಸುತ್ತಾ “ನನಗೆ ವಯಸ್ಸಾಗಿದೆ ಎಂದು ನಾನು ಭಾವಿಸುವುದಿಲ್ಲ. ಕಳೆದ ಶತಮಾನದಲ್ಲಿ ಹುಟ್ಟಿ, ಈ ಶತಮಾನದಲ್ಲಿ ಬದುಕಿರುವ ಸೇತುವೆಯಾಗುವ ಸಂತಸ-ಸಮಾಧಾನಗಳಿಂದ ಮುಂದಿನ ದಿನಗಳಲ್ಲಿ ಬದುಕುತ್ತೇನೆ” ಎಂದಿರುವ ಮಾತು ಅವರ ಜೀವವಿಶ್ವಾಸಕ್ಕೆ ಸಾಕ್ಷಿಯಾಗಿದೆ.
©2024 Book Brahma Private Limited.