ಕಾಡತೊರೆಯ ಜಾಡು

Author : ಅಕ್ಷತಾ ಹುಂಚದಕಟ್ಟೆ

Pages 292

₹ 200.00




Year of Publication: 2011
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಲೇಖಕಿ ಅಕ್ಷತಾ ಕೆ ಅವರ ಸಂಪಾದಿಸಿರುವ ಕರತಿ ’ಕಾಡ ತೊರೆಯ ಜಾಡು’. ಈ ಪುಸ್ತಕವು ರೈತ ಮುಖಂಡರಾದ ಕಡಿದಾಳು ಶಾಮಣ್ಣ ಅವರ ಜೀವನ ಚಿತ್ರಣವನ್ನು ಪರಿಚಯಿಸುವಂತದ್ದು.

ಅಪಾರವಾದ ತಾಳ್ಮೆ, ಅಪ್ಪಟ ಪ್ರಾಮಾಣಿಕತೆ, ಆರೋಗ್ಯಕರವಾದ ನಿಲುವು, ಎಂಥ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸಮಾಧಾನಿಸುವ ಅವರ ಹಾಸ್ಯಪ್ರವೃತ್ತಿಯನ್ನು ಹೊಂದಿರುವ ಕಡಿದಾಳು ಶಾಮಣ್ಣ ಅವರ ವ್ಯಕ್ತಿತ್ವವನ್ನು ಕುರಿತಾದ ಈ ಪುಸ್ತಕ ಓದುಗರ ಕೈ ಸೇರಿದೆ.

ಕಡಿದಾಳು ಶಾಮಣ್ಣರ ಬದುಕು, ಶೈಲಿ, ವ್ಯಕ್ತಿತ್ವ ಚಿತ್ರಣ, ಕ್ಯಾಮೆರಾ ನಡುವಿನ ಅವರ ಒಡನಾಟ, ಸಾಹಿತ್ಯದ ನಂಟು, ಹೋರಾಟದ ಬದುಕು 1980 ರ ದಶಕದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಅಸ್ತಿತ್ವಕ್ಕೆ ಬಂದಾಗ ಪ್ರಮುಖರಾಗಿದ್ದ ಶಾಮಣ್ಣರ ದಿನಗಳು, ಇನ್ನೂ ಮುಂತಾದವುಗಳ ಬಗ್ಗೆ ಕುತೂಹಲ ಹುಟ್ಟಿಸುವ ಸಂಗತಿಗಳನ್ನು ಈ ಕೃತಿಯಲ್ಲಿ ಲೇಖಕಿ ಅಕ್ಷತಾ ಅವರು ಸಂಪಾದಿಸಿದ್ದಾರೆ.

About the Author

ಅಕ್ಷತಾ ಹುಂಚದಕಟ್ಟೆ

ಅಕ್ಷತಾ ಹುಂಚದಕಟ್ಟೆ ಅವರು ಹುಟ್ಟಿದ್ದು 1980ರಲ್ಲಿ, ತೀರ್ಥಹಳ್ಳಿ ತಾಲೋಕಿನ ಪುಟ್ಟ ಗ್ರಾಮ ಹುಂಚದಕಟ್ಟೆಯ ಕೆ.ವಿ.ಕೃಷ್ಣಮೂರ್ತಿಯವರ ಮೊದಲ ಮಗಳು. ತಾಯಿ ಶೈಲಾ ಅವರಿಂದ ಸಾಹಿತ್ಯಾಭಿರುಚಿ ಹತ್ತಿಸಿಕೊಂಡ ಅಕ್ಷತಾ, ಕನ್ನಡ ಸಾಹಿತ್ಯಲೋಕದಲ್ಲಿ ಲೇಖಕಿಯಾಗಿ, ಪ್ರಕಾಶಕಿಯಾಗಿ ತಮ್ಮದೇ ಹೆಸರು ಗಳಿಸಿದ್ದಾರೆ . ಅಕ್ಷತಾ ಕೆ. ಎಂಬ ಹೆಸರಿನಲ್ಲಿ ಪರಿಚಿತರಾದ ಇವರು  ಈಗ ಸಾಹಿತ್ಯ ವಲಯಕ್ಕೆ ಅಕ್ಷತಾ ಹುಂಚದಕಟ್ಟೆ ಎಂದೇ ಚಿರಪರಿಚಿತರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಓದಿದ ಅವರು, ಅಲ್ಲಿನ ಸಾಹಿತ್ಯಿಕ ವಾತಾವರಣದಿಂದ ಪ್ರೇರೇಪಣೆಗೊಂಡು ಕವಿತೆ ಬರೆಯಲು ಶುರುಮಾಡಿದರು. ಅಕ್ಷತಾ ಕಾಲೇಜುದಿನಗಳಲ್ಲೇ  ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಪ್ರಶಸ್ತಿ ಪಡೆದವರು, ‘ರೆಕ್ಕೆ ಬಿಚ್ಚಿ ...

READ MORE

Awards & Recognitions

Related Books