ಮೇಜರ್ ಎಚ್.ಸಿ. ವೇಣುಗೋಪಾಲ್ ಸ್ವಾತಂತ್ರ್ಯ ಹೋರಾಟಗಾರರಾಗಿ ಅಸಾಧಾರಣ ಸಾಹಸಗಳನ್ನು ಮಾಡಿದರು, ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ ಭಾರತೀಯ ಸೇನೆಯ ಕಮಿಷನ್ಡ್ ಅಧಿಕಾರಿಯಾಗಿ ನಂತರ ಮೇಜರ್ ಪದವಿಗೆ ಏರಿದರು. ಅವರಿಗೆ 1973ರಲ್ಲಿ ಭಾರತ ಸರ್ಕಾರ ವಿಶಿಷ್ಟ ಸೇವಾಪದಕವನ್ನು ನೀಡಿ ಗೌರವಿಸಿತು. ಆ ಗೌರವ ಸಂದುದು ಅವರ ಯುದ್ಧಸಾಹಸಕ್ಕಿಂತ ಹೆಚ್ಚಾಗಿ ಸೇವಾ ಕಾರ್ಯಗಳಿಗೆ; ಆ ಮೂಲಕ ಸೈನಿಕರ ಬಗೆಗೆ ಇದ್ದ ದೊಡ್ಡ ಕೊರತೆಯೊಂದನ್ನು ನೀಗಿಸಿದ್ದಕ್ಕೆ. ಅವರು ತಮ್ಮ ಅನುಭವಗಳನ್ನು ಪ್ರಾಮಾಣಿಕವಾಗಿ ಸರಳವಾಗಿ ನೇರವಾಗಿ ಅಭಿವ್ಯಕ್ತಿಸಿದ್ದು ಇದೊಂದು ರಸವತ್ತಾದ ಸೈನಿಕನ ಆತ್ಮಕಥೆಯಂತಿದೆ. ಇಂಗ್ಲಿಷ್ ಮೂಲದ ಇದನ್ನು ಕನ್ನಡಕ್ಕೆ ಆರ್.ಎಲ್. ಅನಂತರಾಮಯ್ಯ ಅವರು ಅನುವಾದಿಸಿದ್ದರು ಲೇಖಕ ಪ್ರಣತಾರ್ತಿಹರನ್ ಸಂಪಾದಿಸಿದ್ದಾರೆ.
©2024 Book Brahma Private Limited.