ಲೇಖ -ಲೋಕ

Author : ವಿಜಯಾ ದಬ್ಬೆ

Pages 140

₹ 100.00




Year of Publication: 2010
Published by: ಕರ್ನಾಟಕ ಲೇಖಕಿಯರ ಸಂಘ(ರಿ
Address: ಚಾಮರಾಜಪೇಟೆ, ಬೆಂಗಳೂರು- 560 018

Synopsys

ಲೇಖಕಿ ವಿಜಯಾ ದಬ್ಬೆ ಅವರು ಸಂಪಾದಿಸಿರುವ ಕೃತಿ ಲೇಖ-ಲೋಕ. ಮಹಿಳಾ ಸಾಹಿತ್ಯ: ಒಂದು ಆತ್ಮಕಥನ ಎಂಬ ಉಪಶೀರ್ಷಿಕೆಯನ್ನು ಹೊಂದಿರುವ ಈ ಕೃತಿಯಲ್ಲಿ ಅನೇಕ ಹಿರಿಯ ಮಹಿಳಾ ಸಾಹಿತಿಗಳ ಆತ್ಮ ಕಥಾನಕಗಳಿವೆ. 1998ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ 2010ರಲ್ಲಿ ಎರಡನೇ ಮುದ್ರಣವನ್ನು ಕಂಡಿದೆ. ಡಾ|| ನಳಿನಿ ಮೂರ್ತಿ ಸ್ಮಾರಕ ಪುಸ್ತಕ ಮಾಲೆ : ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಅಪೂರ್ವವಾದ ಕೊಡುಗೆಯಿತ್ತಿರುವ ಡಾ॥ ನಳಿನಿ ಮೂರ್ತಿ ತಮ್ಮ ಜೀವನದ ಬಹುಭಾಗವನ್ನು ವಿದೇಶದಲ್ಲಿ ಕಳೆದರೂ ಕನ್ನಡಿಗರಿಗೆ ತಮ್ಮ ಬರವಣಿಗೆಯ ಮೂಲಕ ಸದಾ ಚಿರಪರಿಚಿತರಾಗಿ ಉಳಿದಿದ್ದರು. 1937ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ ನಳಿನಿ ಮೂರ್ತಿಯವರು 1957ರಷ್ಟು ಹಿಂದೆಯೇ ಇಂಜಿನಿಯರಿಂಗ್ ರಂಗವನ್ನು ಆಯ್ದುಕೊಂಡು ಹಲವಾರು ಪಥಮಗಳನ್ನು ಹಾಡಿದ ಯಶಸ್ವಿ ಮಹಿಳೆ, ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಹೆಸರನ್ನು ಭದ್ರವಾಗಿ ನೆಲೆಯೂರಿಸಿರುವ ನಳಿನಿ ಮೂರ್ತಿ ತಮ್ಮ ವೈಜ್ಞಾನಿಕ ಲೇಖನಗಳಿಂದ, ಕಥೆ ಕಾದಂಬರಿಗಳಿಂದ ಕನ್ನಡಿಗರಿಗೆ ಚಿರಪರಿಚಿತರು. ಬಿಸಿಲು ಮಳೆ, ಬೀಸಿ ಬಂದ ಬಿರುಗಾಳಿ, ಗಣಕಯಂತ್ರ ಎಂದರೇನು, ಗಣಕಯಂತ್ರದ ಕಥೆ, ಬಂಗಾರದ ಜಿಂಕೆ, ಊರ್ಮಿಳಾ, ಭೀಷ್ಮ ಮುಂತಾದ ರಚನೆಗಳ ಬರಹಗಾರ್ತಿಯಾದ ನಳಿನಿ ಮೂರ್ತಿಯವರ ಪ್ರತಿಭೆಯ ಇನ್ನೊಂದು ಮುಖ ಅವರು ಇಂಜಿನಿಯರಿಂಗ್ ರಂಗದಲ್ಲಿ ಗಳಿಸಿರುವ ಅಪಾರ ಯಶಸ್ಸು. ಮಹಿಳಾ ಜಾಗೃತಿ, ಮಹಿಳಾ ಸಂಘಟನೆಯ ಬಗ್ಗೆ ಪ್ರಗತಿಪರ ಚಿಂತನೆಯ ಧೋರಣೆಗಳನ್ನು ಹೊಂದಿದ್ದ ನಳಿನಿ ಮೂರ್ತಿ ಯವರು ಕರ್ನಾಟಕ ಲೇಖಕಿಯರ ಸಂಘದ ಸದಸ್ಯೆಯೂ ಆತ್ಮೀಯ ಹಿತೈಷಿಯೂ ಆಗಿದ್ದರು. ಅವರ ಸಾಹಿತ್ಯಕ ಚಟುವಟಿಕೆ ಮತ್ತು ವೃತ್ತಿಜೀವನವೆರಡಕ್ಕೂ ಸದಾ ಪ್ರೋತ್ಸಾಹದ ತಂಪೆರೆಯುತ್ತಲೇ ಸಹಭಾಗಿಯಾಗಿದ್ದ ಅವರ ಪತಿ ಶ್ರೀ ಎಸ್. ನರಸಿಂಹಮೂರ್ತಿಯವರು 20 ಅಕ್ಟೋಬರ್ 1992ರಂದು ಗತಿಸಿದ ತಮ್ಮ ಪತ್ನಿಯ ನೆನಪಿನಲ್ಲಿ ಸಂಘಕ್ಕೆ ನೀಡಿರುವ ದೇಣಿಗೆಯಿಂದ ಲೇಖಕಿಯರ ಸಂಘವು ಡಾ.ನಳಿನಿ ಮೂರ್ತಿ ಸ್ಮಾರಕ ಪುಸ್ತಕಮಾಲೆಯ ಯೋಜನೆಯನ್ನು ಆರಂಭಿಸಿದೆ. ಮಾಲೆಯಲ್ಲಿ ಹೊರತಂದ ಇನ್ನೊಂದು ಕೃತಿ 'ಲೇಖ-ಲೋಕ'.

ಕರ್ನಾಟಕದ ಲೇಖಕಿಯರ ಸಂಘದ ಅಧ್ಯಕ್ಷರು ನಾಗಮಣಿ ಎಸ್.ರಾವ್ ಅವರು ಈ ಕೃತಿಗೆ ಮೊದಲ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಮಹಿಳಾ ಸಾಹಿತ್ಯ ಚರಿತ್ರೆ ರಚನೆಯಾಗಬೇಕು: ಮಹಿಳೆಯರ ಸಾಹಿತ್ಯ ಕಾಣಿಕೆ ಸೂಕ್ತವಾಗಿ ದಾಖಲಾಗಬೇಕು – ಎಂಬುದು ಸಂಘದ ಹಿರಿಯಾಸೆ. ಈ ದಿಸೆಯಲ್ಲಿ ಪೂರಕ ಸಾಹಿತ್ಯವನ್ನು ಭದ್ರಗೊಳಿಸುವ ಕಾರ್ಯವನ್ನಂತೂ ಸಂಘ ತನ್ನ ಇತಿ-ಮಿತಿಗೆ ಒಳಪಟ್ಟಂತೆ ಮಾಡುತ್ತಿದೆ. ದಿವಂಗತರಾದ ಕೆಲವು ಹಿರಿಯ ಲೇಖಕಿಯರು ಹಾಗೂ ಅವರ ಕೃತಿಗಳನ್ನು ಕುರಿತ ಕೆಲವು ಪುಸ್ತಕಗಳನ್ನು ಸಂಘ ಈಗಾಗಲೇ ಪ್ರಕಟಿಸಿದೆ. ಇದರ ಜೊತೆಗೆ ಪ್ರಸ್ತುತ ನಮ್ಮೊಡನಿರುವ ಸಮಕಾಲೀನ ಪ್ರಮುಖ ಲೇಖಕಿಯರ ಬದುಕು ಹಾಗೂ ಸಾಹಿತ್ಯ ಕುರಿತು ಅವರಿಂದಲೇ ನೇರ ಮಾಹಿತಿ ಪಡೆದು ದಾಖಲಿಸಿದರೆ ಮುಂದಿನ ದಿನಗಳಲ್ಲಿ ಅದು ಮಹತ್ವದ ಅಧಿಕೃತ ಮಾಹಿತಿ ಮಾರ್ಗದರ್ಶನ ಕೃತಿ ಆಗಬಲ್ಲದು ಎಂಬ ದೃಷ್ಟಿಯಿಂದ ಕರ್ನಾಟಕ ಲೇಖಕಿಯರ ಸಂಘ 1996ರ ಮಾರ್ಚ್ ತಿಂಗಳಲ್ಲಿ ಮೈಸೂರಿನಲ್ಲಿ ಮಹಿಳೆ-ಪರಿಸರ-ಸಾಹಿತ್ಯ ಕುರಿತು ಎರಡು ದಿನಗಳ ಸಂವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು. ಕೆಲವು ಹೆಸರಾಂತ ಲೇಖಕಿಯರನ್ನು ಮಾಹಿತಿಗಾಗಿ, ಮತ್ತೆ ಕೆಲವು ಲೇಖಕಿ-ವಿಮರ್ಶಕರನ್ನು ಸಂವಾದಕ್ಕಾಗಿ ಆಹ್ವಾನಿಸಲಾಗಿತ್ತು. ಲೇಖಕಿಯರು ತಾವು ಬೆಳೆದ ಪರಿಸರ, ಸಾಹಿತ್ಯ ರಚನೆಗೆ ಪ್ರೇರಕವಾದ ಕ್ಷಣಗಳು, ಮೂಡಿಬಂದ ಕೃತಿ- ಈ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿ ಈ ಒಳಾವರಣದ ಕಾರ್ಯಕ್ರಮದಲ್ಲಿ ತಮ್ಮ ಆಪ್ತ ಬದುಕಿನ ಅನುಭವ ಹಂಚಿಕೊಂಡರು. ಅಂದಿನ ಎಲ್ಲ ಮಾತುಕತೆಗಳನ್ನು ಧ್ವನಿ ಮುದ್ರಿಸಿಕೊಂಡು ನಂತರ ಬರಹಕ್ಕಿಳಿಸಿ, ಪರಿಷ್ಕರಿಸಿ, ಈ ಕೃತಿ ರೂಪಕ್ಕಿಳಿಸಲಾಗಿದೆ ಎಂದಿದ್ದಾರೆ.

About the Author

ವಿಜಯಾ ದಬ್ಬೆ
(03 June 1952 - 23 February 2018)

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ದಬ್ಬೆಯಲ್ಲಿ 1952ರ ಜೂನ್ 3ರಂದು ಜನಿಸಿದ ವಿಜಯಾ ಅವರು ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಲವಾರು ವರ್ಷ ಪ್ರಾಧ್ಯಾಪಕರಾಗಿದ್ದರು. ಉತ್ತಮ ಲೇಖಕಿ. ಮೊದಲ ಸ್ತ್ರೀವಾದಿ ವಿಮರ್ಶಕಿ ಎಂದು ಅವರನ್ನು ಗುರುತಿಸಲಾಗುತ್ತದೆ. ಇರುತ್ತವೆ (1975), ನೀರುಲೋಹದ ಚಿಂತೆ (1985), ತಿರುಗಿ ನಿಂತ ಪ್ರಶ್ನೆ (19995), ಇತಿಗೀತಿಕೆ (ಸಮಗ್ರ 1999) ಕವನ ಸಂಕಲನಗಳು. ಉರಿಯ ಚಿಗುರು ಉತ್ಕಲೆ (1998) ಅವರ ಪ್ರವಾಸ ಸಾಹಿತ್ಯ ಕೃತಿ; ನಯಸೇನ (1977), ನಾಗಚಂದ್ರ ಒಂದು ಅಧ್ಯಯನ (1983), ಹಿತೈಷಿಣಿಯ ಹೆಜ್ಜೆಗಳು (1992), ಸಾರಸರಸ್ವತಿ (1996) ಶ್ಯಾಮಲಾ ಸಂಚಯ (1989) ...

READ MORE

Related Books