ಆಫ್ರಿಕನ್ ಖ್ಯಾತ ಕವಿಗಳ ಕವಿತೆಗಳನ್ನು ಎಚ್.ಎಸ್. ರಾಘವೇಂದ್ರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನೋವನ್ನೇ ಉಂಡು ಬೆಳೆದ ಆಫ್ರಿಕಾದ ಕವಿಗಳು ನೋವಿನೆಳೆ ಹಿಡಿದೇ ನೇಯುವ ಕಾವ್ಯದ ಘಮಲಿಗೆ ಅದರದೇ ಆದ ಮಹತ್ವವಿದೆ. ಆದರೆ ಕನ್ನಡಕ್ಕೆ ಇಂಗ್ಲಿಷ್ ನಿಂದ ಬಂದ ಸಾಹಿತ್ಯದಷ್ಟು ಆಫ್ರಿಕನ್ ಸಾಹಿತ್ಯ ಬಂದದ್ದು ಅತೀ ಕಡಿಮೆ. ಸಂಸ್ಕೃತದಿಂದ ಅನುವಾದಗೊಂಡ ಸಾಹಿತ್ಯದಷ್ಟು ಸಹ ಆಫ್ರಿಕಾ ಸಾಹಿತ್ಯ ಕನ್ನಡಕ್ಕೆ ಅನುವಾದಗೊಂಡಿಲ್ಲ. ಆಫ್ರಿಕಾ ಮತ್ತು ನಮ್ಮ ಹಾಡುಪಾಡುಗಳಲ್ಲಿ ಎಷ್ಟೋ ಹೋಲಿಕೆಗಳಿವೆ. ಆದರೆ, ಅವರ ನೋವು-ನಷ್ಟಗಳು ನಮ್ಮದಕ್ಕಿಂತ ಗಾಢವಾದವು, ಹಾಗಾಗಿಯೇ ಆಫ್ರಿಕನ್ ಸಾಹಿತ್ಯಕ್ಕೆ ಮತ್ತಷ್ಟು ಸತ್ವವಿದೆ. ಆ ಕಾರಣದಿಂದಲೇ ಆಫ್ರಿಕನ್ ಪ್ರಮುಖ ಕವಿಗಳ ಕವಿತೆಗಳನ್ನು ’ಕಪ್ಪು ಕವಿತೆ’ ಕೃತಿಯಲ್ಲಿ ಎಚ್.ಎಸ್.ರಾಘವೇಂದ್ರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.