ಲಿಂಕನ್ ಕವಿತೆಗಳು

Author : ಬಿ.ಎ. ಸನದಿ

Pages 80

₹ 50.00




Published by: ಸಮತಾ ಪ್ರಕಾಶನ ಕುಮಟಾ

Synopsys

ಅಮೆರಿಕದ 16ನೆಯ ರಾಷ್ಟ್ರಾಧ್ಯಕ್ಷ ಅಬ್ರಹಾಂ ಲಿಂಕನ್ ವಿಶ್ವದ ಮಹಾ ಮುತ್ಸದ್ದಿಗಳ, ಸರ್ವಸಮತಾವಾದಿ ನಾಯಕರ ಹಾಗೂ ಅತ್ಯಂತ ಪ್ರಭಾವೀ ವಾಕ್ಷಟುಗಳ ಸಾಲಿನಲ್ಲಿ ನಿಂತ ನಾಯಕ. ಒಬ್ಬ ಸಹೃದಯವನ್ನು ಹೊಂದಿದ ನಾಯಕ, ಶೋಷಿತರ ಕಣ್ಮಣಿ. ಹಾಗೆಯೇ ಅವರು ತನ್ನ ಮಕ್ಕಳಿಗೆ ಒಳ್ಳೆಯ ತಂದೆಯೂ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಒಳ್ಳೆಯ ಕವಿಯೂ ಆಗಿದರು. ಅವರ ಮಾತುಗಾರಿಕೆಯಲ್ಲೇ ಕಾವ್ಯದ ಲಯವಿದೆ. ಹಾಗೆಯೇ ಅವರು ತನ್ನ ಮಕ್ಕಳಿಗೆ ಬರೆದ ಪತ್ರಗಳು ಆ ಕಾವ್ಯ ಗುಣವನ್ನು ನಾವು ಕಾಣಬಹುದು. ರಾಜಕೀಯ ನಾಯಕನ ಮರೆಯೊಳಗೆ ಬಚ್ಚಿಟ್ಟುಕೊಂಡ ಆ ಅಜ್ಞಾತ ಕವಿಯ ಮೂರು ದೀರ್ಘ ಕವನಗಳನ್ನು ಕನ್ನಡದ ಮಾನವ್ಯ ಕವಿ ಬಿ. ಎ. ಸನದಿಯವರು ಕನ್ನಡಕ್ಕಿಳಿಸಿದ್ದಾರೆ. ಇವುಗಳು ಕವಿಯ ಜೀವನ ದರ್ಶನದ ಗಾಢತೆಯನ್ನು ಸೂಚಿಸುತ್ತದೆ. ಒಬ್ಬ ರಾಜಕೀಯ ನಾಯಕನ ಆಳದಲ್ಲಿ ಇಂತಹದೊಂದು ಜೀವನ ದರ್ಶನದ ತೊರೆ ಹರಿಯುತ್ತಿತ್ತೇ ಎಂದು ಅಚ್ಚರಿ ಪಡುವಂತಹ ಸಾಲುಗಳು ಈ ಕೃತಿಯಲ್ಲಿವೆ.

About the Author

ಬಿ.ಎ. ಸನದಿ
(18 August 1933 - 31 March 2019)

ನಾಟಕಕಾರ, ಕಥೆಗಾರ, ಅನುವಾದಕ ಬಿ.ಎ. ಸನದಿ ಅವರು 1933 ಆಗಸ್ಟ್‌ 18ರಂದು ಬೆಳಗಾವಿ ಜಿಲ್ಲೆಯ ಸಿಂದೊಳ್ಳಿಯಲ್ಲಿ ಜನಿಸಿದರು. ತಂದೆ ಅಹಮ್ಮದ್‌, ತಾಯಿ ಆಯೆಷಾ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು.  ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ಪಂಚಾಯತ್ ರಾಜ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಖಾರಿಯಾಗಿ ಕೆಲಸ ಮಾಡಿ ನಿವೃತ್ತರಾದರು.  ಸನದಿಯವರ ತಾಜ್‌ ಮಹಲ್ ಮತ್ತು ಧೃವ ಬಿಂದು ಕವನ ...

READ MORE

Related Books