ತೆಲುಗು ಕವಿ ಆಶಾರಾಜು ಅವರ ಕವಿತೆಗಳ ಕನ್ನಡಾನುವಾದ ‘ಚಾರ್ ಮಿನಾರ್ ಮತ್ತು ಇತರ ಕವಿತೆಗಳು’ ಆರ್. ರತ್ನಯ್ಯ ಶಿವಮೊಗ್ಗ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆಶಾರಾಜರ ಕಾವ್ಯದ ಸೆರಗಿನಿಂದ, ಗಲ್ಲಿಯಿಂದ ಮೊಹಲ್ಲಾದವರೆಗೂ ಗೊಲ್ಗೊಂಡದ ಬಗಿಲಿನಿಂದ ಜೂಬ್ಲಿ ಹಿಲ್ಸ್ ಸುರಂಗವರೆಗೂ, ಮೂಸಿನದಿಯ ಹರಿತವನ್ನು ಟ್ಯಾಂಕ್ ಬಂಡ್‌ನ ಮೇಲೆ ಉದ್ದಕ್ಕೂ ನಿಲ್ಲಿಸಿರುವ ಪ್ರತಿಮೆಗಳಂತೆ ಈಗಷ್ಟೆ ತಲೆ ಎತ್ತುತ್ತಿರುವ ಗಗನ ಚುಂಬಿ ಅಪಾರ್ಟ್‌ಮೆಂಟ್‌ಗಳಂತೆ ತನ್ನ ಪಾಗಲ್ ಶಾಯಿರಿಗಳನ್ನು ಹೈದ್ರಾಬಾದ್‌ನ ನಿಜಾಮರು ಬಿಟ್ಟುಹೋಗಿರುವ ಪಳೆಯುಳಿಕೆ ಗಳ ಮೇಲೆ ಹುಸೇನ್ ಸಾಗರದ ನೀರು ಚಿಮ್ಮಿ, ತೇವಗೊಂಡಿರುವ ಗುರುತುಗಳು ಚಿಗುರೊಡೆದು ಕನ್ನೆಯಂತೆ ಕಂಗೊಳಿಸುತ್ತಿದೆ. ಹೈದ್ರಾಬಾದ್ ತನ್ನ ಕೊರಳಲ್ಲಿ ಮುತ್ತಿನ ಹವಳದ ಹಾರವನ್ನು ಕೈಗೆ ಬಣ್ಣ-ಬಣ್ಣದ ಬಳೆಗಳನ್ನು ಹಾಕಿಕೊಂಡು ಪನ್ನೀರಿನ ಪರಿಮಳವನ್ನು ಪಾಗಲ್‌ನಲ್ಲಿ ತೆರೆದಿಟ್ಟಿದ್ದಾರೆ. ಇವೆಲ್ಲಾ ಒಮ್ಮೊಮ್ಮೆ ಚಾರ್ ಮಿನಾರ್‌ನಂತೆ ಎತ್ತರ, ಗೊಲ್ಗೊಂಡದಂತೆ ವಿಶಾಲವಾಗಿ ಬಚ್ಚಿಟ್ಟುಕೊಂಡಿರುವ ನವಾಬರ ಬೆತ್ತಲೆಯ ಇತಿಹಾಸವನ್ನು ಸಾಲಾರ್‌ಜಂಗ್ ಮ್ಯೂಸಿಯಂನ ಸಂಪತ್ತನ್ನು ತಾಯಿ ಕಂದನನ್ನು ಸಾಕುವ ರೀತಿ ಹೈದ್ರಾಬಾದನ್ನು ಹುಚ್ಚನಂತೆ ಎದೆಗವಚಿಕೊಂಡು, ಇಂಚಿಂಚು ಆಳ ಅಗಲಗಳನ್ನು ಪದೇ ಪದೆ ಎದುರು ಬೀಳುವ ಬಜಾರುಗಳನ್ನು ತೆಲುಗಿನಲ್ಲಿ ಕೆತ್ತಿದ ಆಶಾರಾಜು, ಅದಕ್ಕೆ ಕನ್ನಡದಲ್ಲಿ ಬಣ್ಣ ಬಳಿದ ರತ್ನಯ್ಯನವರು ಪ್ರತಿಷ್ಟಾಪಿಸಿದ ಪಾಗಲ್ ಶಾಯಿರಿಗಳು, ನೆನಪಿನಿಂದ ದೂರವಾಗದ ಕೃತಿಯಾಗಿದೆ.
©2024 Book Brahma Private Limited.