ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಅನುವಾದಿತ ಕವನಗಳ ಸಂಕಲನ ‘ನೆರಳಲ್ಲವೇ ಕವಿತೆ’.ಈ ಸಂಕಲನದಲ್ಲಿ ಭಾರತೀಯ ಭಾಷೆಗಳ ಒಟ್ಟು 63 ಕವಿತೆಗಳಿವೆ. ಅವುಗಳನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ನೆರವಿನಿಂದ ಕನ್ನಡಿಸಲಾಗಿದೆ. ಉತ್ತರ ಭಾರತದ ಆರ್ಯ ಭಾಷೆಗಳಲ್ಲಿ ಸಹ ಭೌಗೋಲಿಕ, ಪ್ರಾದೇಶಿಕ ಸಾಮ್ಯದ ಹೊರತಾಗಿಯೂ, ಎದ್ದು ಕಾಣುವ ಅವುಗಳ ಭಿನ್ನ ಸ್ವರೂಪ ಹಾಗೂ ಅಲ್ಲಲ್ಲಿಯ ಹಿರಿಮೆಯನ್ನೂ ಇಲ್ಲಿ ಗಮನಿಸಬಹುದು. ಕೃತಿಯ ಪರಿವಿಡಿಯಲ್ಲಿ ಮಲಯಾಳಂ ಕವಿತೆಗಳು, ಉರ್ದೂ ಕವಿತೆಗಳು, ಗುಜರಾತೀ ಕವಿತೆಗಳು, ಸಿಂಧೀ ಕವಿತೆಗಳು, ಹಿಂದೀ ಕವಿತೆಗಳು, ಪಂಜಾಬೀ ಕವಿತೆಗಳು, ಮರಾಠೀ ಕವಿತೆಗಳು, ತೆಲುಗು ಕವಿತೆ, ತಮಿಳು ಕವಿತೆ, ಡೋಗರೀ ಕವಿತೆ, ಉಡಿಯಾ ಕವಿತೆ, ಅಸಮೀ ಕವಿತೆಗಳು ಎಂಬ ಮುಖ್ಯಶೀರ್ಷಿಗಳಿವೆ.
©2025 Book Brahma Private Limited.