ಚಾರ್ಲ್ಸ್ ಬೋದಿಲೇರ್ ಅವರ ಫ್ರೆಂಚ್ ಕೃತಿ-‘ಲೇ ಫ್ಯೂರ್ ದು ಮಾಲ್’ ಅನ್ನು ಲೇಖಕ ಪಿ. ಲಂಕೇಶ ಅವರು ಕನ್ನಡೀಕರಿಸಿದ ಕೃತಿ-ಪಾಪದ ಹೂವುಗಳು. ಮೋಹ-ಪ್ರೀತಿ-ಪ್ರೇಮ-ಕಾಮ ಹೀಗೆ ವೈವಿಧ್ಯಮಯವಾಗಿ ತನ್ನ ಭಾವನೆಗಳಿಗೆ ತೀವ್ರವಾಗಿ ಪ್ರತಿಕ್ರಿಯತಿಸಿದ ಬೋದಿಲೇರನ ಕವಿತೆಗಳು ಓದುಗರನ್ನು ಬೆಚ್ಚಿ ಬೀಳಿಸುತ್ತವೆ. ಹೀಗೆ ಬೆಚ್ಚಿ ಬೀಳಿಸುವಂತಹದ್ದೂ ಸಹ ಉತ್ತಮ ಸಾಹಿತ್ಯದ ಸೆಳೆತವೇ ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ. ಸಭ್ಯ ಜಗತ್ತಿನ ಸಾಹಿತ್ಯವನ್ನು ಓದುತ್ತಾ ಬಂದಿದ್ದ ಓದುಗರಿಗೆ ಬೋದಿಲೇರನ ಇಂತಹ ಕವಿತೆಗಳು ಸಾಹಿತ್ಯದ ಹೊಸ ಕ್ಷಿತಿಜವನ್ನು ವಿಸ್ತರಿಸಿದವು. ಓದುಗ ಆಸಕ್ತರು ಇಂತಹ ಸಾಹಿತ್ಯದೆಡೆಗೆ ಆಕರ್ಷಿತರಾದರು. ಕನ್ನಡದಲ್ಲೂ ಇಂತಹ ಕೃತಿ ಅನುವಾದಗೊಂಡಿದೆ ಎಂದು ತಿಳಿದಾಗಲೂ ಮೊದಮೊದಲು ಸಾಹಿತ್ಯಾಸಕ್ತರು ಸಂಶಯದಿಂದಲೇ ನೋಡುತ್ತಿದ್ದರು ಎಂಬುದು ಹೊಸದಲ್ಲ.
©2025 Book Brahma Private Limited.