ಉರ್ದು ಕವಿ ಅಲಿ ಸರ್ದಾರ್ ಜಾಫ್ಹ್ರಿಯವರ ಉರ್ದು ಕವಿತೆಗಳನ್ನು ಕನ್ನಡಕ್ಕೆ ಜ.ನಾ.ತೇಜಶ್ರೀಯವರು ತಂದಿದ್ದಾರೆ. ಇವರೂ ಸ್ವತಃ ಕವಿಯಾಗಿರುವುದರಿಂದ ಅಲಿ ಸರ್ದಾರ್ ಜಾಫ್ರಿಯವರನ್ನು ಕನ್ನಡ ಜಾಯಮಾನಕ್ಕೆ ಸಲ್ಲುವಂತೆಯೂ, ಉರ್ದು ಭಾಷೆಯ ಕೆಲವು ಗುಣಗಳು ಕನ್ನಡಕ್ಕೆ ದಕ್ಕುವಂತೆಯೂ ’ಬೆತ್ತಲೆ ಫಕೀರ’ ಕೃತಿಯಲ್ಲಿ ಅನುವಾದಿಸಿದ್ದಾರೆ.
ಸಾಮಾನ್ಯವಾಗಿ ಉರ್ದು ಲೇಖಕರಿಗೆ ತಾವು ಭಾರತೀಯ ಲೇಖಕರೆಂಬುದೂ, ಏಷ್ಯಾ ಖಂಡಕ್ಕೆ ಸೇರಿದವರೆಂಬುದೂ ಲೇಖಕರಿಗಿಂತ ಹೆಚ್ಚು ಮುಖ್ಯವಾದ ಸಂಗತಿಯಾಗಿರುತ್ತದೆ. ಮಾರ್ಕ್ಸ್ ವಾದದಿಂದ ಪ್ರಭಾವಿತರಾದ ಪ್ರಗತಿಶೀಲ ಲೇಖಕ ಅಲಿ ಸರ್ದಾರ್ ಜಾಫ್ರಿಯವರಿಗಂತೂ ಹೋರಾಟಗಾರರ ಪರವಾಗಿರುವ ವಿಶ್ವಮಾನವತ್ವದ ಕಲ್ಪನೆ ಬಹಳ ಮುಖ್ಯವಾಗುವ ಹೊತ್ತಿಗೆ ಹುಟ್ಟಿದ ಅನೇಕ ರಚನೆಗಳು ಈ ಕೃತಿಯಲ್ಲಿದೆ.
©2025 Book Brahma Private Limited.