‘ಬಿರುಗಾಳಿಗಳೇ ಶಾಂತರಾಗಿರಿ’ ಕಾಶೀನಾಥ ಅಂಬಲಗೆ ಅವರ ಅನುವಾದಿತ ಗಜಲ್ ಸಂಕಲನ. ಜೀವನಪ್ರೀತಿಗೆ ಕಾವ್ಯಪ್ರೀತಿಯ ಶೃತಿ ಸೋಬತಿ ಇವರನ್ನು ಹಿಂದಿಯ ಸಂವೇದನಾಶೀಲ ಕವಿ ಕುಮಾರ ಬೇಚೈನ ಅವರ ಗಜಲ್ ಗಳನ್ನು ಕನ್ನಡಕ್ಕೆ ಅನುವಾದಿಸುವಂತೆ ಮಾಡಿದೆ.
ಗಜಲ್ ಉರ್ದು ಕಾವ್ಯಲೋಕದ ಹಣೆಮಣಿ. ಭಾರತೀಯರ ಉತ್ಕೃಷ್ಠ ಶೃಂಗಾರ ಭಾವಕ್ಕೆ ವಾಹಕವಾಗಿರುವ ಉರ್ದುವಿನ ಕಾವ್ಯಲೋಕದದ ರಸಯಾತ್ರೆಗೆ ಗಜಲ್ ಪ್ರಕಾರವೇ ಮುಖ್ಯ ಪಥಿಕ. ಕೈ ಮುಟ್ಟಿದರೆ ಮಾಸುತ್ತವೆ ಎಂಬಷ್ಟು ಮೃದು ಮಧುರ ಪದಬಂಧಗಳ ಜೀಕುವಿಕೆಯಲ್ಲಿ ಮನದಾಳದ ಅತಿಸೂಕ್ಷ್ಮ ಅವ್ಯಕ್ತ ಭಾವಗಳಿಗೆ ಆಕಾರ ಕೊಡಬಲ್ಲ ತಾಕತ್ತು ಉರ್ದುವಿನ ಗಜಲ್ ಗಳಿಗೆ ದಕ್ಕಿದಷ್ಟು ಇನ್ಯಾವುದೇ ಕಾವ್ಯ ಪ್ರಕಾರಗಳಿಗೆ ದಕ್ಕಿರಲಾರದು. ಉರ್ದುವಿನ ವೈಶಿಷ್ಟ್ಯವೇ ಇದಾಗಿದೆ. ಉರ್ದುವಿನ ಗಜಲ್ ಗಳನ್ನು ಕಾಶೀನಾಥ ಅಂಬಲಗೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.ಇಂಥದೊಂದು ಅನುಭವವನ್ನು ಕನ್ನಡ ಕಾವ್ಯಲೋಕಕ್ಕೆ ಒದಗಿಸುವ ಗಂಭೀರ ಪ್ರಯತ್ನವನ್ನುಮಾಡಿದ್ದಾರೆ. ಈ ಅನುವಾದಗಳ ಓದುವಿಕೆ ಕನ್ನಡದಲ್ಲಿ ಸ್ವತಂತ್ರ ಗಜಲ್ ರಚಿಸುವವರಿಗೆ ದಾರಿದೀಪವಾಗಬಲ್ಲದು.
©2024 Book Brahma Private Limited.