‘ಕೆಂಗುಲಾಬಿ’ ಪ್ರಖ್ಯಾತ ಇಂಗ್ಲಿಷ್ ಸಾಹಿತಿಗಳ ಕವಿತಾನುವಾದದ ಕೃತಿ. ವಿಜಯ್ ನಾಗ್ ಜಿ ಅವರು ಜಗತ್ತಿನ ಸುಪ್ರಸಿದ್ಧ ಕವಿಗಳ ಸತ್ವಪೂರ್ಣ ಕವಿತೆಗಳನ್ನು ಆರಿಸಿ ಕನ್ನಡಕ್ಕೆ ಅನುವಾದಿಸಿ ಎರಡು ಸಂಕಲನಗಳಲ್ಲಿ ಪ್ರಕಟಿಸಿದ್ದಾರೆ. ಉತ್ತಮ ಭಾವಭಾಷೆಗಳ ಸಮನ್ವಯತೆಯಿಂದಾಗಿ ಅವರ ಕವಿತೆಗಳು ಮನೋಹರವಾಗಿವೆ. ಪ್ರಾಸದ ಏಕತಾನತೆಯಿಂದ ಪಾರಾಗಿ ಅರ್ಥದ ಧ್ವನಿ ರಮ್ಯತೆಗೆ ಆದ್ಯತೆ ಹಾಗೂ ಮೂಲ ಕವಿತೆಯ ವಸ್ತು ನಿಷ್ಠತೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಮೂಲ ಕವಿತೆಯ ಇಂಗ್ಲಿಷ್ ರೂಪವನ್ನು ಒದಗಿಸಿರುವುದರಿಂದ ಅರ್ಥಾಂತರದ ಮಟ್ಟವನ್ನು ಅರಿಯಲು ಅನುವು ಮಾಡಿಕೊಟ್ಟಿದ್ದಾರೆ.
ಅಲೆಕ್ಸಾಂಡರ್ ಪುಷ್ಕಿನ್, ದೇಸಂಕ ಮಾಕ್ಸಿಮೋಮಿಕ್, ಫೆಡಿರಿಕೋ ಗಾರ್ಸಿಯಾ ಲೋರ್ಕಾ, ಗಾಬ್ರಿಯೆಲಾ ಮಿಸ್ಟ್ರಲ್, ಹರ್ಮನ್ ಹೆಸ್ಸೆ, ಜಾಕ್ವೆಸ್ ಪ್ರೀವರ್ಟ್, ಜಾರ್ಜ್ ಲೂಯಿಸ್ ಬೋರ್ಜಸ್, ಒಕ್ಟೇವಿಯೋ ಪಾಜ್ಹ್, ಪ್ಯಾಬ್ಲೋ ನೆರೂಡ, ರೂಮಿ, ಸೆರ್ಗೆಯ್ ಯೆಸ್ ನಿನ್ ಅಂತಹ ವಿಖ್ಯಾತ ಕವಿಗಳ ಕವಿತೆಗಳು ಅನುವಾದಗೊಂಡಿವೆ.
©2025 Book Brahma Private Limited.