ಕಾಶ್ಮೀರಿ ಸಾಹಿತ್ಯದ ಮೊದಲ ಕವಿ ಎಂದೇ ಖ್ಯಾತಿಯ ಲಾಲ್ ದೇಡ ಅವರ ಕವಿತೆಗಳನ್ನು ಲೇಖಕಿ ವಿಜಯಾ ಗುತ್ತಲ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಎಲ್ಲ ಎಲ್ಲೆ ಮೀರಿ. ಲಾಲ್ ದೇಡ, ಅಕ್ಕ ಮಹಾದೇವಿಯ ಜೀವನ ಚರಿತ್ರೆಯನ್ನು ಹೋಲುತ್ತದೆ. ಅವಳು ಕಾಶ್ಮೀರ ಶೈವ ಅಥವಾ ‘ತ್ರಿಕ’ ಸಂತಳು. ಅವಳ ವಾಕ್ಕುಗಳು ಕಾಶ್ಮೀರಿ, ಸೂಫಿ, ಇಸ್ಲಾಂ, ಸಿಖ್ ಸಂಪ್ರದಾಯದ ಅಂಶಗಳನ್ನು ಒಳಗೊಂಡಿವೆ. ವಿಮರ್ಶಕ ಡಾ. ಓ.ಎಲ್. ನಾಗಭೂಷಣ ಅವರು ಕೃತಿಗೆ ಮುನ್ನುಡಿ ಬರೆದು ‘ಸುಮಾರು 7 ಶತಮಾನ ಕಾಲ ಕಾಶ್ಮೀರಿ ಜನತೆಯ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದವಳನ್ನು ಅರಬ್-ಇಸ್ಲಾಂ ಧರ್ಮದ ಸನ್ಯಾಸಿ, ಹಿಂದೂ ಧರ್ಮದ ಯೋಗಿ ಎಂದು ಪರಸ್ಪರ ವಿರುದ್ಧವೋ ಎಂಬಂತೆ ಸೀಳಿ ನೋಡುವ ಹವ್ಯಾಸ ಬೆಳೆದಿರುವುದು ಶೋಚನೀಯ’ ಎಂದು ವಿಷಾದಿಸಿದ್ದಾರೆ.
©2025 Book Brahma Private Limited.