ಹಿಂದಿಯ ಪ್ರಮುಖ ಕವಿಗಳ ಕವಿತೆಗಳನ್ನು ಕವಿ-ಅನುವಾದಕ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಅನುವಾದಿಸಿದ್ದಾರೆ. ಈ ಸಂಕಲನದಲ್ಲಿ 54 ಕವಿತೆಗಳಿವೆ. ಹಿಂದಿಯ ಪ್ರಸಿದ್ಧ ಕವಿಗಳಾದ ಅಜೇಯ್, ಹರಿವಂಶರಾಯ್ ಬಚ್ಚನ್, ದಿನಕರ್, ಧರ್ಮವೀರ್ ಭಾರತೀ, ನೀರಜ್ ಮುಂತಾದವರ ಕವಿತೆಗಳು ಇಲ್ಲಿವೆ. - ತಮ್ಮ ಸೃಜನಶೀಲ ಪ್ರತಿಭೆಯಿಂದ ಪಟ್ಟಣಶೆಟ್ಟರು ಹಿಂದಿಯ ಹಲವಾರು ಶ್ರೇಷ್ಠ ಕೃತಿಗಳನ್ನು ಅನುವಾದಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಆಯ್ಕೆಯ ಉತ್ಕೃಷ್ಟತೆಯ ಜೊತೆಗೆ ಅವರು ಮಾಡುವ ಅನುವಾದವು ಅನುಸೃಷ್ಟಿಯೇ ಆಗಿರುತ್ತದೆ. ಅವರು ಕನ್ನಡದ ಅತ್ಯಂತ ಸಂವೇದನಶೀಲ ಕವಿಯಾಗಿರುವುದರಿಂದ ಇಲ್ಲಿಯ ಕವಿತೆಗಳು ಕನ್ನಡದ್ದೇ ಅನ್ನಿಸುವಂತಿವೆ... '
ಭಾಷೆಯ ವಿಷಯದಲ್ಲಿ ಅವರು ವಹಿಸುವ ಎಚ್ಚರ, ನುಡಿಗಟ್ಟುಗಳ ಬಳಕೆ ಮತ್ತು ಅಭಿವ್ಯಕ್ತಿಯ ಅನನ್ಯತೆಯಿಂದಾಗಿ ಅನುವಾದಕ್ಕೆ ವಿಶೇಷ ಸೌಂದರ್ಯ ಸಿದ್ದಿಸುವುದಕ್ಕೆ ಪ್ರಸ್ತುತ ಕವಿತೆಗಳು ಸಾಕ್ಷಿಯಾಗಿವೆ. ಅಲ್ಲದೆ ಹಿಂದೀ ಭಾಷೆಯ ಲಯ ಬಾಧಿಸದಂತೆ, ಅದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಲಯ ವಿನ್ಯಾಸ ಕಟ್ಟಿಕೊಟ್ಟಿರುವುದು ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಸ್ಪೋಪಜ್ಞತೆಯಿಂದ ಮಾತ್ರ ಸಾಧ್ಯವಾಗಿದೆ.
©2025 Book Brahma Private Limited.