ಶೈಶವ

Author : ಮೈ.ಶ್ರೀ. ನಟರಾಜ

₹ 100.00




Year of Publication: 2022
Published by: ಅಭಿನವ ಪ್ರಕಾಶನ
Address: # 17, 18 - 2, ಮೊದಲನೇ ಮುಖ್ಯ ರಸ್ತೆ, ಮಾರೇನಹಳ್ಳಿ, ಪಿ.ಎಫ್ ಲೇಔಟ್, ವಿಜಯನಗರ, ಬೆಂಗಳೂರು- 560040
Phone: 9448804905

Synopsys

‘ಶೈಶವ’ ಕೃತಿಯು ಮೈ.ಶ್ರೀ ನಟರಾಜ ಅವರ ಅನುವಾದಿತ ಕವನಗಳ ಸಂಕಲನವಾಗಿದೆ. ಈ ಕೃತಿಯ ಮೂಲ ಲೇಖಕ ಎಮಿಲಿ ಗ್ರೋಶೋಲ್ಸ್. ಕೃತಿಯ ಕುರಿತು ಲೇಖಕಿ ಸುಮಾ ವೀಣಾ ಅವರು ಹೀಗೆ ಹೇಳಿದ್ದಾರೆ : ಒಟ್ಟು ಮೂವತ್ತು ಕವಿತೆಗಳ ಗುಚ್ಛ ಈ ಶೈಶವ ಕೃತಿ. ಶೈಶವ ಅರ್ಥಾತ್ ಬಾಲ್ಯ ಯಾರದ್ದು? ನಾವು ಸಲುಹುವ ಮಕ್ಕಳದ್ದೊ ಸಾಕುತ್ತಿರುವ ತಾಯಂದಿರದ್ದೋ ಎನ್ನುವ ಭಾವ ಬರುತ್ತದೆ. ಇಲ್ಲಿನ ಬಹುತೇಕ ಕವಿತೆಗಳು ಎರಡು ತಲೆಮಾರಿನ ಬಾಲ್ಯ, ಕಿಶೋರಾವಸ್ಥೆಯನ್ನು ಅನುಸಂಧಾನಿಸುವಂತಿದೆ. ಕವಿತೆಗಳು ಆಯಾ ದೇಶ ಕಾಲ ಸುತ್ತಲಿನ ಪರಿಸರ ಮುಂತಾದವುಗಳನ್ನು ಅನುಸರಿಸಿ ಹುಟ್ಟುತ್ತವೆ ಹಾಗೆ ಅಮೆರಿಕನ್ ಪ್ರಜ್ಞೆಯಲ್ಲಿ ಜನ್ಮಿಸಿದ ಕವಿತೆಗಳ ಭಾವಕ್ಕೆ ಕನ್ನಡದ ಪರಿಮಳವನ್ನು ಅನ್ವಯಿಸಿ ಕವಿತೆಗಳನ್ನು ಕನ್ನಡಿಕರಿಸಿದ ಮೈ. ಶ್ರೀ. ನಟರಾಜರ ಪ್ರತಿಭೆ ,ಕಾವ್ಯಕಾಣ್ಕೆ ಓದುಗರನ್ನು ಬಹುಬೇಗ ಸೆಳೆಯುತ್ತದೆ’ ಎಂದು ಪ್ರಶಂಸಿಸಿದ್ದಾರೆ.

ಕೋವಿಡ್ ಕರಾಳ ಛಾಯೆ, ಎಮಿಲಿ ಗ್ರೋಶೋಲ್ಸ್ ಅವರ ಸಂದೇಶದೊಂದಿಗೆ ಕೃತಿಯ ಪುಟಗಳು ತೆರೆದುಕೊಂಡು ಕೃತಿಯ ಕುರಿತು ಪಿ ಚಂದ್ರಿಕಾರ ಅನಿಸಿಕೆ, ಅದರ ಹಾಗೂ ಹೆಚ್.ಎಸ್. ಶಿವಪ್ರಕಾಶರ ಮುನ್ನುಡಿಯ ಇಂಗ್ಲಿಷ್ ಅನುವಾದದೊಂದಿಗೆ ಶೈಶವ ಸಂಚಯನಗೊಂಡಿದೆ. ಇಲ್ಲಿನ ಕವಿತೆಗಳಿಗೆ ಪೂರಕವಾಗಿ ಎಂಟು ವರ್ಣರಂಜಿತ ಚಿತ್ರಗಳನ್ನು ಅಳವಡಿಸಲಾಗಿದೆ .

 

About the Author

ಮೈ.ಶ್ರೀ. ನಟರಾಜ

ಮೈ.ಶ್ರೀ. ನಟರಾಜ-ಹುಟ್ಟೂರು ಹಾಸನ, ಅರವತ್ತರ ದಶಕದ ಕೊನೆಯಲ್ಲಿ ಅಮೆರಿಕೆಗೆ ತೆರಳಿ, ಅಮೆರಿಕದ ಅಣುಶಕ್ತಿ ನಿಯಂತ್ರಣ ಆಯೋಗದಲ್ಲಿ ರಾಕ್ ಮೆಕ್ಯಾನಿಕ್ಸ್ ವಿಭಾಗಾಧಿಕಾರಿ ಮತ್ತಿತರ ಜವಾಬ್ದಾರಿಗಳೊಂದಿಗೆ ಸೇವೆ ಸಲ್ಲಿಸಿ ನಿವೃತ್ತರಾಗಿ ಮೇರೀಲ್ಯಾಂಡಿನಲ್ಲಿ ಪತ್ನಿ ಗೀತಾರೊಂದಿಗೆ ವಾಸವಿದ್ದಾರೆ. ನಾನೂ ಅಮೆರಿಕನ್ ಆಗಿಬಿಟ್ಟೆ, ಮಧುಚಂದ್ರ, ಸಿರಿಕೇಂದ್ರ (ಕವನ ಸಂಕಲನ), ಮೀನಿನ ಹೆಜ್ಜೆ, ಮತ್ತು ನೇಣು, ಪರದೇಶಿಗಳ ಪಾರ್ಟಿ ಮತ್ತು ಇತರ ಮೂರು ನಾಟಕಗಳು. ಮತ್ತು ಐ ಆ್ಯಮ್ ಬ್ರಾಹ್ಮಣ್ (ನಾಟಕಗಳು), ಜಾಲತರಂಗ, ಮತ್ತು ಜಾಲತರಂಗಿಣಿ (ಅಂಕಣ ಬರಹಗಳು) , ಮಾಯಾವಿ ಸರೋವರ (ಅನುವಾದಿತ ನಾಟಕ) The void and the womb (ಬಯಲು-ಬಸಿರು) ...

READ MORE

Related Books