ಆಧುನಿಕೋತ್ತರ ಬಂಗಾಲಿ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿರುವ ಮೂವರು ಹೆಸರಾಂತ ಸಾಹಿತಿಗಳೂ, ಅನುವಾದಕರೂ, ಕವಿಗಳೂ ಆಗಿರುವ ಮೀರಾ ಚಕ್ರವರ್ತಿ, ಎಂ.ಆರ್. ಕಮಲ, ಎಲ್.ಎನ್. ಮುಕುಂದರಾಜ್ , ಅನುವಾದಿಸಿದ್ದಾರೆ.
’ಜೀರೋ ಪಾಯಿಂಟ್’ ಕೃತಿಯು ಮೂಲ ಬಂಗಾಲಿ ಕಾವ್ಯದ ಕನ್ನಡ ರೂಪಾಂತರ. ಇಲ್ಲಿರುವ ಎಲ್ಲಾ ಕವಿತೆಗಳು ಪ್ರಸಿದ್ದ ಬಂಗಾಲಿ ಸಾಹಿತಿಗಳಾದ ರಜತ್ ಶುಭ್ರ ಗುಪ್ತಾ, ಪ್ರಭಾತ್ ಚೌಧುರಿ, ರತನ್ ದಾಸ್, ಕಾಜಲ್ ಸೇನ್, ರಾಮ್ ಕಿಶೋರ್ ಭಟ್ಟಾಚಾರ್‍ಯ, ಅಮಿತಾಬ್ ಗುಪ್ತಾ, ಸುಜೀತ್ ಸರ್ಕಾರ್ , ನಾಸೀರ್ ಹುಸೇನ್ , ರಮಾ ಘೋಷ್, ಮತಿ ಮುಖ್ಯೋಪಾಧ್ಯಾಯ , ಇನ್ನೂ ಅನೇಕರ ರಚನೆಯನ್ನು ಕನ್ನಡೀಕರಿಸಲಾಗಿದೆ.
ಪುಸ್ತಕ ಶೀರ್ಷಿಕೆಯನ್ನು ಹೊತ್ತ ’ಜೀರೊ ಪಾಯಿಂಟ್’ ಈ ಪುಸ್ತಕದ ಮೊದಲ ಕಾವ್ಯವಾಗಿದೆ.
ಬಯಕೆಯ ಭಾಷೆ, ಮೀನಿನ ಅನ್ನ ಜೀವನ, ನಕ್ಷತ್ರ ನಗರಿಯ ಕಿನ್ನರಿ ಕಥೆ, ಸನ್ಯಾಸ, ಬೇಜವಬ್ದಾರಿಯ ಮಾತು, ತನ್ನದೇ ಆದ ಬಿಸಿಲಿಗಾಗಿ, ಪಿಕ್ ನಿಕ್ ಪಾರ್ಟಿ, ಪದಾವಳಿ ಒಪ್ಪಂದ, ಬೆಂಕಿಯ ರುಜು, ಹೀಗೆ ಸುಮಾರು ನಲವತ್ತೊಂಭತ್ತು ಕವಿತೆಗಳ ಗುಚ್ಛ ಇಲ್ಲಿದೆ.
©2025 Book Brahma Private Limited.