ಡಾ. ಬಸವರಾಜ ನಾಯ್ಕರ ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ ಕೃತಿ-ಷೇಕ್ಸ್ ಪಿಯರನ ಸುನೀತಮಾಲೆ. ಷೇಕ್ಸ್ ಪಿಯರನು ಬರೆದ ಎಲ್ಲ 154 ಸಾನೆಟ್ಟುಗಳನ್ನು ಅವುಗಳ ವಿಶ್ಲೇಷಣೆಯೊಂದಿಗೆ ಅನುವಾದಿಸಲಾಗಿದೆ. ಎಲಿಜಬೆತ್ ಅವರ ತತ್ವಜ್ಞಾನ, ಮನಸ್ಸು, ಕಲ್ಪನೆ ಇತ್ಯಾದಿಗಳನ್ನು ಇಲ್ಲಿ ಹೆಚ್ಚು ಫೋಕಸ್ ಮಾಡಲಾಗಿದೆ. ಷೇಕ್ಸ್ ಪಿಯರ ಹಾಗೂ ಆತನ ಪ್ರಿಯತಮೆಯ ಮಧ್ಯೆ ಇರುವ ಮಿಲನದ ಪ್ರೀತಿ ಹಾಗೂ ಪ್ರತ್ಯೇಕತೆಯನ್ನು ಈ ಸಾನೆಟ್ಟುಗಳು ಒಳಗೊಂಡಿವೆ. ಸೌಥಾಮ್ಟನ್ -ಷೇಕ್ಸ್ ಪಿಯರನ ಗೆಳೆಯ. ಈತನೊಂದಿಗೆ ಆತನಿಗಿದ್ದ ಪ್ರೇಮ-ತಿರಸ್ಕಾರದ ಸಂಬಂಧ-ಗೌರವವನ್ನೂ ವಿವರಿಸಲಾಗಿದೆ. ಈ ಕೃತಿಯು ಆಂಗ್ಲಭಾಷೆಯ ಎಲ್ಲ ವಿದ್ಯಾರ್ಥಿ-ಅಧ್ಯಾಪಕರಿಗೂ ಪ್ರಯೋಜನವಾಗಿದೆ.
©2025 Book Brahma Private Limited.