ವಿರಹಿಗಳ ಹೃದಯ ವೀಣೆಯನ್ನು ಅನಾದಿಕಾಲದಿಂದಲೂ ಮೀಟಿ, ನೋವಿನಲ್ಲಿಯೂ ನಲಿವಿನ ಝೇಂಕಾರವನ್ನು ಹೊರ ಹೊಮ್ಮಿಸಿದ ಸಂದೇಶವಾಗಿದೆ 'ಮೇಘದೂತ'. ಈ ಶೃಂಗಾರ ಕಾವ್ಯವನ್ನು ಶ್ಲೋಕ, ಪದ್ಯಾನುವಾದ ಹಾಗೂ ಮನೋಹರವಾದ ವ್ಯಾಖ್ಯಾನಗಳ ಮೂಲಕ ವಿಷ್ಣು ಜೋಶಿ ಕಟ್ಟಿಕೊಟ್ಟಿದ್ದಾರೆ.
ವಿರಹದಲ್ಲಿ ಪರಸ್ಪರ ಒಲವು ಬಲವಾಗಿ ನಿಂತರೆ, ಬತ್ತದೇ ಇದ್ದರೆ, ಎಣ್ಣೆ ತೀರಿದ ದೀಪದಂತೆ ಆರದೇ ಇದ್ದರೆ, ಮಧುರ, ಮೃದುಲ ಶಂಗಾರ ಭಾವನೆ ಅದೆಷ್ಟು ಅಪ್ಯಾಯಮಾನ ಎನ್ನುವುದರ ಕುರಿತು ಇಲ್ಲಿ ವಿವರಿಸಿದ್ದಾರೆ. ಕಾಳಿದಾಸ ಮೇಘದೂತ ಕಾವ್ಯದ 111 ಶ್ಲೋಕಗಳನ್ನು ವಿಷ್ಣು ಜೋಶಿ ಕನ್ನಡಕ್ಕೆ ಅನುವಾದಿಸಿ ಇಲ್ಲಿ ಕೊಟ್ಟಿದ್ದಾರೆ.
©2025 Book Brahma Private Limited.