ಫಲಸಂಚಯ

Author : ಜಿ. ರಾಮನಾಥ್ ಭಟ್

Pages 290

₹ 135.00




Year of Publication: 2003
Published by: ಗೀತಾ ಬುಕ್ ಹೌಸ್
Address: ಕೆ.ಆರ್. ಸರ್ಕಲ್, ದೇವರಾಜ ಮೊಹಲ್ಲಾ, ಚಾಮರಾಜಪುರ, ಮೈಸೂರು - 570001
Phone: 0821 243 3589,

Synopsys

‘ಫಲಸಂಚಯ’ ಜಿ. ರಾಮನಾಥ ಭಟ್‌ ಅವರ ಅನುವಾದಿತ ಕವನ ಸಂಗ್ರಹವಾಗಿದೆ. ವಿಶ್ವದ ಅಗ್ರಮಾನ್ಯ ಕವಿಯೆಂದು ಮನ್ನಣೆ ಪಡೆದ ಬಂಗಾಲದ ಸಂಚಯ ಕವಿ ರವೀಂದ್ರನಾಥ ಠಾಕೂರರ ಇನ್ನೂರು ಕವನಗಳು ಹಾಗೂ ಮುನ್ನೂರಕ್ಕೂ ಮಿಕ್ಕಿದ ಹನಿಗವನಗಳನ್ನು ಕನ್ನಡದಲ್ಲಿ ಓದುವ ಸುವರ್ಣಾವಕಾಶ, ಶ್ರೇಷ್ಠ ಸಾಹಿತ್ಯವೊಂದರ ಶ್ರೇಷ್ಠ ಅನುವಾದವಾಗಿದ್ದು ಈ ಕೃತಿಯು ಠಾಕೂರರ ಅಸಾಮಾನ್ಯ ಪ್ರತಿಭೆಯನ್ನು ಪರಿಚಯಿಸುತ್ತದೆ

About the Author

ಜಿ. ರಾಮನಾಥ್ ಭಟ್

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಜಿ. ರಾಮನಾಥ ಭಟ್ ಅವರು ಮೈಸೂರು ನಿವಾಸಿಯಾಗಿದ್ದಾರೆ. ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ (1959) ಪಡೆದಿರುವ ಅವರು ಮೂರು ವರ್ಷ ಮಹಾರಾಷ್ಟ್ರದ ಕೊಯ್ನಾ ಜಲ ವಿದ್ಯುತ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದರು. 1962ರಿಂದ ಮೂವತ್ತೈದು ವರ್ಷ ಕರ್ನಾಟಕದ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ 1997ರಲ್ಲಿ ಸ್ವಯಂ ನಿವೃತ್ತರಾದರು. 1986ರಿಂದ ಕೃಷ್ಣರಾಜಸಾಗರದಲ್ಲಿರುವ ಇಂಜಿನಿಯರಿಂಗ್ ಸಿಬ್ಬಂದಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಶಾಲಾ ದಿನಗಳಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿದ್ದ ಅವರು ಅರುವತ್ತರ ದಶಕದಲ್ಲಿ ರವೀಂದ್ರನಾಥ ಠಾಕೂರರ ಸಾಹಿತ್ಯದತ್ತ ಆಕರ್ಷಿತರಾದರು. ಸರ್ಕಾರಿ ಕೆಲಸದಲ್ಲಿದ್ದರೂ ರವೀಂದ್ರನಾಥ ...

READ MORE

Reviews

ಹೊಸತು- 2004- ಜನವರಿ

ವಿಶ್ವದ ಅಗ್ರಮಾನ್ಯ ಕವಿಯೆಂದು ಮನ್ನಣೆ ಪಡೆದ ಬಂಗಾಲದ ಸಂಚಯ ಕವಿ ರವೀಂದ್ರನಾಥ ಠಾಕೂರರ ಇನ್ನೂರು ಕವನಗಳು ಹಾಗೂ ಮುನ್ನೂರಕ್ಕೂ ಮಿಕ್ಕಿದ ಹನಿಗವನಗಳನ್ನು ಕನ್ನಡದಲ್ಲಿ ಓದುವ ಸುವರ್ಣಾವಕಾಶ, ಶ್ರೇಷ್ಠ ಸಾಹಿತ್ಯವೊಂದರ ಶ್ರೇಷ್ಠ ಅನುವಾದವಾಗಿದ್ದು ಈ ಕೃತಿಯು ಠಾಕೂರರ ಅಸಾಮಾನ್ಯ ಪ್ರತಿಭೆ ಯನ್ನು ಪರಿಚಯಿಸುತ್ತದೆ. ಗೀತಾಂಜಲಿ ಮೂಲಕ ಈಗಾಗಲೇ ಇನ್ನೂರು ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ ರಾಮನಾಥ ಭಟ್ ಅವರು ಮೂರನೆಯ ಮತ್ತೊಂದು ಕಂತು ಹೊರತರುವ ಸಾಹಸ ಮಾಡಲಿದ್ದಾರೆ. ಒಟ್ಟಿನಲ್ಲಿ ಠಾಕೂರರ ಗೀತೆಗಳ ರಸದೌತಣ !

Related Books