ಉರ್ದು ಕವಿ ಕೈಫಿ ಅಜ್ಮಿ ಅವರು ಬದಲಾವಣೆಯ ಸುಂಟರಗಾಳಿಯ ಎದೆಯಲ್ಲಿ ಇಟ್ಟುಕೊಂಡವರು. ಅವರ ಕಾವ್ಯ ಭಾಷಿಕ ಅಬ್ಬರದಿಂದ ದೂರ. ಸದಾ ನೆಲಕ್ಕೆ ಅಂಟಿಕೊಂಡೇ ಬರೆದ ಕೈಫಿ ಅವರಿಂದ ಸಹಜವಾಗಿಯೇ ಉರ್ದು ಸಾಹಿತ್ಯ ಸಮೃದ್ಧವಾಗಿದೆ. ಕ್ರಾಂತಿ ಸಂದೇಶದ ಕಾವ್ಯದಲ್ಲೂ ಮಾರ್ದವ ಉರ್ದು ಭಾಷೆಯ ರೂಪಕಗಳಲ್ಲಿ ಹರಳುಗಟ್ಟಿದೆ. ಉರ್ದು ಭಾಷೆಯ ಸೊಗಡು, ಬನಿ, ನಜ್ಮ್ ಅನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ ಅಪರೂಪದ ಕವಿ. ಕಾವ್ಯದಲ್ಲಿ ಸಮುದಾಯದ ಅಸಹಾಯಕ ಮನಸುಗಳ ಯಾತನೆಯನ್ನು ತೆರೆದಿಟ್ಟ ಕೈಫಿ ಅವರ ಕವಿತೆಯು ವೈಯಕ್ತಿಕ ದುಃಖ ದುಮ್ಮಾನಗಳಿಗೆ ಸೀಮಿತಗೊಳ್ಳದ ಅಭಿವ್ಯಕ್ತಿ ಎಂದು ಭಾವಿಸಿದ ಹಾಗಿತ್ತು. ಅವರ ಕಾವ್ಯದಲ್ಲಿ ಕೆಲ ಸಾಲುಗಳು ಖಾಸಗಿ ಬದುಕಿನ ನೆರಳಾಗಿ ಕಂಡರೂ ಅಂತಿಮವಾಗಿ ಅವೆಲ್ಲ ಸಮಾಜದ ಭಾಗವಾಗಿಯೇ ಬಿಡುತ್ತವೆ. ಅವರ ಈ ಶೈಲಿಯಿಂದಾಗಿ ಅವರು ವೈಯಕ್ತಿಕ ನೋವು ಕೂಡ ಸಮುದಾಯ ಕೇಂದ್ರಿತವಾಗಿ ಬದಲಾಗುತ್ತವೆ.
ಉತ್ತರದ ಪ್ರದೇಶದ ಆಜಮ್‌ಗಡ್ ಬಳಿಯ ಮಿಹ್ವಾನ'ದಲ್ಲಿ 1918ರಲ್ಲಿ ಜನಿಸಿದ ಕೈಫಿ ಅವರು 'ಅಜಮ್‌ಗಡ್' ಅನ್ನು ತಮ್ಮ ಬದುಕಿನ ಮುಖ್ಯ ಕೇಂದ್ರವೆಂದು ತಿಳಿದಿದ್ದರು. ಅದಕ್ಕಾಗಿಯೇ ಕೈಫಿ ಅವರು ತಮ್ಮ ಕಾವ್ಯನಾಮದಲ್ಲಿ 'ಅಜ್ಮಿ' ಪದವನ್ನು ಸೇರಿಸಿ ಕೊಂಡರು. ಅವರ ನಿಜವಾದ ಹೆಸರು ಸಯ್ಯದ ಅತಹರ್ ಹುಸೇನ ರಿಜ್ವಿ. 'ಸಾಂಪ್ರದಾಯಕ' ಮತ್ತು 'ಜಮೀನ್ದಾರಿ' ಕುಟುಂಬದಲ್ಲಿ ಜನಿಸಿದ್ದ ಅವರು ತಮ್ಮ ಬದುಕಿನಲ್ಲಿ ಸಂಪ್ರದಾಯ ಮತ್ತು ಜಮೀನ್ದಾರಿಕೆಯನ್ನು ಮೀರಿ ಬದುಕಿದರು.
ಕೈಫಿ ಅಜ್ಮಿಯವರ ಪುತ್ರಿ ಜನಪ್ರಿಯ ಕಲಾವಿದೆ-ನಟಿ ಶಬಾನಾ ಅಜ್ಮಿ ತಮ್ಮ ತಂದೆಯವರನ್ನು ಕುರಿತು ’ಅಪ್ಪ ಯಾವಾಗಲೂ ಉಳಿದವರಿಗಿಂತ ಭಿನ್ನವಾಗಿರುತ್ತಿದ್ದ. ಅವನ ಈ ಭಿನ್ನತೆ ನನ್ನ ಯುವ ತಲೆಗೆ ಅಷ್ಟು ಸ್ಪಷ್ಟವಾಗಿ, ಸರಳವಾಗಿ ತಾಗುತ್ತಲೇ ಇರಲಿಲ್ಲ. ಒಂದು ರೀತಿಯಿಂದ ಅವನ ಈ ಭಿನ್ನತೆ ನನ್ನ ಮನಸ್ಸಿಗೆ ಒಗ್ಗದ ವಿಷಯವಾಗಿತ್ತು. ಅವನು ಎಂದೂ 'ಆಫೀಸಿ'ಗೆ ಹೋಗುತ್ತಿರಲಿಲ್ಲ. ಅಥವಾ ಇತರರ ಗೌರವಾರ್ಹ ತಂದೆಯವರಂತೆ ಸಹಜ ಉಡುಗೆ-ತೊಡುಗೆಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅಂದರೆ ಬಹುಸಂಖ್ಯಾತರು ಪ್ಯಾಂಟುಶರ್ಟು ಧರಿಸಿದರೆ, ಅಪ್ಪನ ಆಯ್ಕೆ ತುಂಬ ಭಿನ್ನವಾಗಿತ್ತು’ ಎಂದು ಬರೆಯುತ್ತಾರೆ.
ಅಜ್ಮಿಯವರ ಕವಿತೆಗಳನ್ನು ವಿಭಾ/ ರಾಹು ಕನ್ನಡಕ್ಕೆ ಅನುವಾದಿಸಿದ್ದಾರೆ.
(ಹೊಸತು, ಸೆಪ್ಟೆಂಬರ್ 2014, ಪುಸ್ತಕದ ಪರಿಚಯ)
"ನನಗೆ ಒಂಭತ್ತು ತುಂಬುವವರೆಗೆ ನಾವು ಕಮ್ಯುನಿಸ್ಟ್ ಪಕ್ಷದ ರೆಡ್ ಫ್ಲ್ಯಾಗ್ ಹಾಲ್‌ನಲ್ಲಿ ವಾಸವಾಗಿದ್ದವು. ಪ್ರತಿಯೊಬ್ಬ ಕಾಮೇಡ್‌ನ ಕುಟುಂಬಕ್ಕೂ ಒಂದೇ ಒಂದು ಕೋಣೆಯ ಮನೆಯಿತ್ತು. ಆರಂಭದಲ್ಲಿ ಅಪ್ಪ ಗಳಿಸುತ್ತಿದ್ದಲ್ಲ ವನ್ನೂ ಕಮ್ಯುನಿಸ್ಟ್ ಪಕ್ಷಕ್ಕೆ ಕೊಡುತ್ತಿದ್ದರು. ತಿರುಗಿ ಕಮ್ಯುನಿಸ್ಟ್ ಪಕ್ಷದಿಂದ ಪಡೆಯುತ್ತಿದ್ದ ಮಾಸಿಕ ಆಲೋಯನ್ಸ್ ರೂ. ನಲವತ್ತು ... ಅವ್ವ ಅಪ್ಪನನ್ನು ಪ್ರೀತಿಸಿದ್ದುದು ಅವನೊಬ್ಬ ಕವಿ, ಸತ್ವತಃ ಜನತೆಯ ವ್ಯಕ್ತಿ ಎಂಬುದು. ತತ್ಕಾರಣ, ಅವನು ತನ್ನ ಕುಟುಂಬದ ಖಾಸಗಿ ಆಸ್ತಿಯಾಗಿರುವ ಬದಲು ವಿಶಾಲ ಜನತೆಯ ಸೊತ್ತಾಗಿ ಪರಿಣಮಿಸಿದ..." ಭಾರತದ ಪ್ರತಿಭಾವಂತ, ಪ್ರಖ್ಯಾತ ನಟಿ ಶಬಾನಾ ಅಜ್ಜಿ ತನ್ನ ಅಪ್ಪ ಈ ದೇಶ ಕಂಡ ಮಹಾನ್ ಕವಿ ಕೃಷಿ ಅಷ್ಟೆ ಕುರಿತು ಬರೆದ ಮಾತುಗಳಿವು. ಇಂಥ ಅನೇಕ ಅವಿಸ್ಮರಣೀಯ ನೆನಪುಗಳ ವಿವರಗಳನ್ನು ಶಬಾನಾ ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ವಿವರವಾಗಿ ರಾಹು ಕನ್ನಡಕ್ಕೆ ಅನುವಾದಿಸಿದ್ದಾರೆ. 'ಇದಕ್ಕೆ ಧರ್ಮವೆನ್ನಿ, ಅಥವಾ ನೀತಿಯೆ ನಮಗೆ ಕಲಿಸುತ್ತ ನಡೆದಿದ್ದೀರಿ ನೀವು ಆತ್ಮಹತ್ಯೆಯ ಕಲೆ, ನಾನದ ಆಹಿಂಸೆಯ ಪಾಠ ಜನಕೆ ಹೇಳಿಕೊಡಲು ಅದೇ ಜಗತ್ತು ನನಗೆ ಘಾಸಿ ನೀಡಿತು', 'ನನ್ನದೆಂದು ನೀವು ಲೂಟಿ ಮಾಡಿದ ವಸ್ತು, ಓ ನೆರೆಯವರೆ, ಅದು ನಿಮ್ಮ ಮರ್ಯಾದೆ ಯಲ್ಲದೆ ಬೇರೇನೂ ಅಲ್ಲ. ಇಂಥ ಅದ್ಭುತ ಮೌಲಿಕ ಸಾಲುಗಳನ್ನುಳ್ಳ ಕೃಷಿಯ ಹಲವಾರು ಕವನಗಳನ್ನು ಅನುವಾದಿಸಿದ್ದಾರೆ ಕನ್ನಡದ ಕವಯಿತ್ರಿ ವಿಭಾ, ಸೂರಸಂಪ ಕೃಷಿಯ ಕುರಿತು, ಪೂರ್ಣಿಮೆಯಂಥ ಶಬಾನಾ ಬರೆದಿದ್ದಾರೆ.
©2024 Book Brahma Private Limited.