‘ಕ್ಷಿತಿಜ’ ಲೇಖಕ, ಅನುವಾದಕ ಪ್ರಮೋದ ಮುತಾಲಿಕ ಅವರ ಜಗತ್ತಿನ ಕೆಲ ಶ್ರೇಷ್ಠ ಕವನಗಳ ಕನ್ನಡ ಅನುವಾದ. ಈ ಕೃತಿಗೆ ಡಾ. ಪುರುಷೋತ್ತಮ ಬಿಳಿಮಲೆ ಅವರು ಬೆನ್ನುಡಿ ಬರೆದು ‘ಪ್ರಮೋದ ಮುತಾಲಿಕರು ಕ್ಷಿತಿಜದ ಮೂಲಕ ವಿಶ್ವ ಸಾಹಿತ್ಯದ ಕೆಲವು ಕವಿತೆಗಳನ್ನು ಕನ್ನಡಕ್ಕೆ ತಂದು ನಮ್ಮ ಅರಿವಿನ ವಲಯಗಳನ್ನು ವಿಸ್ತರಿಸಿದ್ದಾರೆ. ಕೃತಿಯಲ್ಲಿ ಮೂಲ ಕವಿಗಳ ಬಗ್ಗೆ ಸಂಕ್ಷಿಪ್ತ ವಿವರಗಳನ್ನೂ, ಅವರ ಕವಿತೆಗಳ ಸಮಕಾಲೀನ ಮಹತ್ವವನ್ನೂ, ಕವಿಯ ಭಾವಚಿತ್ರ ಸಮೇತ ನೀಡಿ ಉಪಕರಿಸಿದ್ದಾರೆ. ಅನುವಾದಕ್ಕೆ ಕವಿಗಳನ್ನು ಆಯ್ದುಕೊಳ್ಳುವಲ್ಲಿಯೇ ತಮ್ಮ ವಿಶಿಷ್ಟ ಪ್ರತಿಭೆ ಮೆರೆದಿದ್ದಾರೆ. ಅತ್ಯುತ್ತಮ ಕವಿತೆಗಳನ್ನು ಆಯ್ದು ಅವುಗಳನ್ನು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಮಾಯಾ ಎಂಜಿಲೊ, ಸೋಜರ್ನರ್ ಟ್ರುಥ್, ಗ್ಯಾಬ್ರಿಯೆಲ್ ಒಕಾರಾ, ವೊಲ್ ಸೋಯಿಂಕಾ, ಪೀಟರ್ ಪೋರ್ಟರ್, ವಿಲ್ಫ್ರೆಡ್ ಓವೆನ್, ಬೆರ್ಟೊಲ್ಟ್ ಬ್ರೆಕ್ಟ್, ರಾಬರ್ಟ್ ಸದೆ, ಡಬ್ಲ್ಯೂ.ಎಚ್. ಆಡೆನ್, ಡಬ್ಲ್ಯೂ. ಬಿ ಯೇಟ್ಸ್, ಕ್ಯಾಥ್ಲೀಕ್ ಓ ಮೀಯರ, ಲ್ಯಾಂಗ್ಸ್ಟಾನ್ ಹ್ಯೂಸ್, ಪ್ಯಾಬ್ಲೋ ನೆರೂಡ, ಚಾರ್ಲ್ಸ್ ಬುಕೌಸ್ಕಿ, ಶೆಲ್ ಸಿಲ್ವೆರ್ಸ್ಟಾನ್, ಶೆರ್ಮನ್ ಅಲೆಕ್ಸಿ, ಸಿಲ್ವಿಯಾ ಪ್ಲಾತ್, ಓಗ್ಡೆನ್ ನ್ಯಾಶ್, ಅರುಣ್ ಕೋಲಟ್ಕರ್, ನಿಸಿಂ ಇಜಿಕಿಲ್, ಕೇಕಿ ದಾರುವಾಲಾ, ವಿಕ್ರಂ ಸೇಠ್, ಜೀವ ಪಟೇಲ್, ಲಾರೆನ್ಸ್ ಡನ್ಬರ್, ಈ.ಎ. ರಾಬಿನ್ಸನ್, ನಿಕ್ಕಿ ಗಿಯೋವನ್ನಿ, ವಿಲಿಯಂ ಶೇಕ್ಸ್ ಪಿಯರ್, ಜಾನ್ ಡನ್, ಎಡ್ಮಂಡ್ ಸ್ಪೆನ್ಸರ್, ವಿಲಿಯಂ ಬ್ಲೆಕ್, ಕಾಲಿ ಸಿಬ್ಬರ್ , ಕ್ರಿಸ್ಟಿನಾ ರೊಸ್ಸೆಟ್ಟಿ, ಡಬ್ಲ್ಯೂ ಎಚ್.ಡೇವಿಸ್, ರುಡ್ಯಾರ್ಡ್ ಕಿಪ್ಲಿಂಗ್, ಖಲೀಲ್ ಗಿಬ್ರಾನ್, ಎಲಾ ವಿಲ್ಕೋಕ್ಸ್, ರಾಬರ್ಟ್ ಫ್ರಾಸ್ಟ್ ಮತ್ತು ಹೆನ್ರಿ ಸ್ಕಾಟ್ ಅವರ ಪರಿಚಯದೊಂದಿಗೆ ಕವಿತೆಗಳನ್ನು ಅನುವಾದಿಸಿದ್ದಾರೆ.
©2024 Book Brahma Private Limited.