ಕುಲುಮೆಯೊಳಗಿನ ಚಿಲುಮೆ

Author : ಸಿ. ನಾಗಣ್ಣ

Pages 82

₹ 60.00




Year of Publication: 2003
Published by: ಶುಭದ ಪ್ರಕಾಶನ
Address: ಜರಗನಹಳ್ಳಿ ಜಿ.ಪಿ.ನಗರ ಅಂಚೆ, ಬೆಂಗಳೂರು- 560078
Phone: 9448356850

Synopsys

‘ಕುಲುಮೆಯೊಳಗಿನ ಚಿಲುಮೆ’ ಸಿ.ನಾಗಣ್ಣ ಅವರು ಅನುವಾದಿಸಿರುವ ಆಫ್ರಿಕಾ ಕವಿತೆಗಳ ಕನ್ನಡಾನುವಾದ. ಈ ಕೃತಿಗೆ ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮುನ್ನುಡಿ ಬರೆದು ‘ವಿಶ್ವಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಸಮರ್ಥವಾಗಿ ಅರಗಿಸಿಕೊಂಡಿರುವ ಕೆಲವೇ ಕನ್ನಡ ವಿದ್ವಾಂಸರಲ್ಲಿ ನಾಗಣ್ಣ ಒಬ್ಬರು ಎಂಬುದು ನನ್ನ ಧೃಡವಾದ ನಂಬಿಕೆ. ಜೊತೆಗೆ ಚಿನು ಅಚಿಬೆಯ ‘ಥಿಂಗ್ಸ್ ಫಾಲ್ ಅಪಾರ್ಟ್ ’ ಕಾದಂಬರಿಯನ್ನು ಕನ್ನಡಕ್ಕೆ ತಂದು ಅಚಿಬೆಯನ್ನು ನಮ್ಮವನನ್ನಾಗಿಸಿದ್ದಾರೆ. ಈಗ ಆಫ್ರಿಕಾದ ಕವಿತೆಗಳನ್ನು ಕನ್ನಡದ ಲಯಕ್ಕೆ ಒಗ್ಗಿಸಿ ಅನ್ಯಧನಿಯ ಆಮದಿನಿಂದ ನಮ್ಮ ಪಾತ್ರ ಕಾವ್ಯದ ಪಾತ್ರ ಹಿಗ್ಗುವ ಪರಿಯನ್ನು ತೋರಿಸಿದ್ದಾರೆ. ಇಂಥಾ ಪ್ರಕ್ರಿಯೆ ಜಾಗೃತವಾಗಿರುವವರೆಗೆ ಸೃಜನಶೀಲತೆಗೆ ಆಲಸ್ಯ ಉಂಟಾಗದು. ಅಜಡವಾದದ್ದನ್ನು ಒಲಿಸಿಕೊಳ್ಳುವುದೇ ಕಲ್ಪನೀಯ ಅನವರತದ ಕೆಲಸವಾಗಿದೆ ಪ್ರತಿಭಟನೆಯ ಕುಲುಮೆಯಲ್ಲಿ ಚೈತನ್ಯದ ಕಿಡಿಗಳನ್ನು ಹಿಡಿದಿಟ್ಟಿರುವ ನಾಗಣ್ಣ ಅಭಿನಂದನಾರ್ಹರಾಗಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

ಈ ಕೃತಿಯಲ್ಲಿ, ಗುಲಾಮರಿಲ್ಲದ ನಾಡಿನಲ್ಲಿ, ಗುಲಾಮಗಿರಿ, ಗಣಿಯಿಂದ ಬಂದವ, ಆಳುವವರ ನಾಡು, ರಾತ್ರಿ, ದುಷ್ಟಾಂತ, ಮಕ್ಕಳಿಲ್ಲದವರಿಗೆ, ಹಸಿವಿನ ಮುಖ, ಉಯ್ಯಾಲೆಯಲ್ಲಿ ಕುಳಿತ ಹುಡುಗ, ತರುಣರನ್ನು ಕಾಣುವಾಗ, ಕಾಲ, ಇದು ನಿಜವಾದರೆ, ಷಂಡನ ಸಮಾಧಾನ, ಪಾಶ್ಚಾತ್ಯ ನಾಗರಿಕತೆ, ಯೆರೂಬಾದ ಜಾನಪದ ಹಾಡು, ಮೊದಲ ನೆರೆ, ನಿನಗೆ ವಂದನೆ ದೇವ, ಎಚ್ಚರ, ಮರಳಿ ಮನೆಗೆ, ಕಪ್ಪು ವ್ಯಕ್ತಿಯ ತೀರ್ಪು, ಪ್ರೇಮ ಕವನ, ಉಸಿರು, ಸೆಟೆದು ನಿಲ್ಲು ಬಲದ ಎದುರು, ಎಲ್ಲಾ ಕಳಕೊಂಡವನು ಸೇರಿದಂತೆ 61 ಕವಿತೆಗಳು ಸಂಕಲನಗೊಂಡಿವೆ.

About the Author

ಸಿ. ನಾಗಣ್ಣ

ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...

READ MORE

Related Books