ಕವಿ ಎಂ.ಎನ್. ವ್ಯಾಸರಾವ್ ಅವರನುವಾದಿತ ಕವನ ಸಂಕಲನ ‘ಚಂಡಿದಾಸನ ಪ್ರೇಮ ಕವಿತೆಗಳು’. ಕವಿ ದೇಬೆನ್ ಭಟ್ಟಾಚಾರ್ಯ ಅವರು ಮೂಲ ಬಂಗಾಳಿಯಿಂದ ಇಂಗ್ಲಿಷ್ ಅನುವಾದ ಹಾಗೂ ಪ್ರಸ್ತಾವನೆಯನ್ನು ಮಾಡಿದ್ದಾರೆ. ಚಂಡಿದಾಸ ಬಂಗಾಳದ ಮಧ್ಯಯುಗೀನ ಭಕ್ತಿ ಕವಿ. ರಾಧಾ-ಕೃಷ್ಣರ ಪ್ರೇಮ ರೂಪಕದಲ್ಲಿ ಭಕ್ತಿಯನ್ನು ನೀವೇದಿಸುವ ಚಂಡೀದಾಸ ಕಳೆದ ಐದು ಶತಮಾನಗಳಲ್ಲಿ ಬಂಗಾಳವನ್ನು ಃಆಗೂ ಭಾರತೀಯ ಕಾವ್ಯ ಪರಂಪರೆಯ ಂಏಲೆ ಹಲವು ರೀತಿಯ ಪ್ರಭಾವ ಬೀರಿದ ಕವಿ. ಭಾರತೀಯ ಪರಂಪರೆ ಹಾಗೂ ಭಕ್ತಿ ಕಾವ್ಯದ ಅಧ್ಯಯನ ಚಂಡಿದಾಸನ ಕಾವ್ಯವಿಲ್ಲದೆ ಪುರ್ಣವಾಗದು. ಭಕ್ತ ಸತಿ-ದೇವ (ಲಿಂಗ) ಪತಿ ಎಂಬ ಕನ್ನಡ ಭಕ್ತಿ ಖಾವ್ಯ ಗ್ರಹಿಕೆಗೆ ಪೂರಕವಾಗಿ ಕನ್ನಡ ಓದುಗರಿಗೆ ಚಂಡಿದಾಸನ ಕಾವ್ಯದ ಪರಿಚಯವಾದರೆ ಉತ್ತಮ ಎಂಬ ಅಭಿಪ್ರಾಯದಿಂದ ಈ ಅನುವಾದಕ್ಕೆ ತೊಡಗಿಕೊಂಡಿತು ಎಂಬುದಾಗಿ ಗೌರವ ನಿರ್ದೇಶಕರು ಎಸ್. ಆರ್. ವಿಜಯಶಂಕರ ಅವರು ಕೃತಿಯಲ್ಲಿ ಬರೆದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಚಂಡಿದಾಸನ ಪ್ರೇಮ ಕವಿತೆಗಳು, ದ್ವಿಜ ಚಂಡಿದಾಸ, ಬಡು ಚಂಡಿದಾಸ, ಹಾಗೂ ಸಹಜ ಗೀತೆಗಳು ಎಂಬಂತೆ ವಿಭಾಗಗಳಿವೆ. 105 ಅನುವಾದಿತ ಕವನಗಳು ಈ ಕೃತಿಯಲ್ಲಿವೆ.
©2024 Book Brahma Private Limited.