ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮಲಯಾಳ ಕವಿತಾ ಸಂಕಲನದ ಕನ್ನಡಾನುವಾದ ‘ಕೆ.ಜಿ. ಶಂಕರಪಿಳ್ಳೆಯವರ ಕವಿತೆಗಳು’ ಈ ಕೃತಿಯನ್ನು ಲೇಖಕ, ಅನುವಾದಕ ತೇರಳಿ ಎನ್. ಶೇಖರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೆ.ಜಿ. ಶಂಕರಪಿಳ್ಳೆ ಮಲಯಾಳಂ ಕಾವ್ಯಕ್ಕೆ ಹೊಸ ತಿರುವು ನೀಡಿದ ಕವಿ. ಕೊಚ್ಚಿಯಿಲೆ ವೃಕ್ಷಂಗಳ್, ಕೆ.ಜಿ.ಶಂಕರಪಿಳ್ಳೆಯುಡೆಕವಿತೆಕಳ್ ಮತ್ತು ಪೆಣ್ ವಳಿಕಳ್(ಆ್ಯಂಥಾಲಜಿ) ಇವರ ಮುಖ್ಯ ಕವನ ಸಂಕಲನಗಳು. ಶಂಕರಪಿಳ್ಳೆಯವರ ಕಾವ್ಯಭಾಷೆ ಚರಿತ್ರನಿಷ್ಠವಾಗಿದ್ದು, ವಾಸ್ತವ ಪ್ರಜ್ಞೆಯುಕ್ತ ವಿಕಾಸ ಹೊಂದುವ ಸಂಘರ್ಷವನ್ನು ಅಂತರ್ಗತಗೊಳಿಸಿಕೊಂಡಿದೆ. ಹೊಸ ಕಾವ್ಯ ಶಾಸ್ತ್ರದ ಸಾಧ್ಯತೆಯನ್ನು ತೆರೆದು ತೋರಿಸಿದೆ. ಶಂಕರಪಿಳ್ಳೆಯವರ ಈ ಕಾವ್ಯ ಪ್ರಯೋಗವನ್ನು ಮುಕ್ತಿಬೋಧಾತ್ಮಕವೆಂದು ಕರೆಯಬಹುದಾಗಿದ್ದು, ಅದರ ಮೊಟ್ಟ ಮೊದಲ ಅತ್ಯುತ್ತಮ ಮಾದರಿ ಬಂಗಾಲ್ ಕವಿತೆಯಲ್ಲಿ ದೊರಕಿದೆ. ಚಾರಿತ್ರಿಕ ಸಂವಾದ ಧ್ವನಿ ಪಡೆದ ಇದರ ಭಾಷೆ ಕಾವ್ಯವನ್ನು ಸಾಮಾಜೀಕರಣಗೊಳಿಸಿದೆ. ವಿಶೇಷ ಸಾಮಾಜಿಕ ಸಂದರ್ಭದಲ್ಲಿ ನೆಲೆಗೊಂಡಿರುವ ವ್ಯಕ್ತಿಗಳ ಮೂರ್ತ ಉಚ್ಛಾರಣೆಗಳು, ನೆನಪುಗಳು ಮತ್ತು ಅನುಭವ ತೀವ್ರತೆಗಳು ಪ್ರತ್ಯಕ್ಷವಾಗಿವೆ. ಬಂಗಾಲ್, ಆನಂದ, ಮೌನ, ಬರುವರು ಬರುವರು ಎಂಬ ಪ್ರತೀಕ್ಷೆ, ಕೊಚ್ಚಿಯ ವೃಕ್ಷಗಳು, ತರಾವರಿ ಪೋಜಿನ ಫೋಟೋಗಳು, ಪ್ರಾರ್ಥಿಸುವುದಾದರೆ ಹೀಗೆ ಅಸುಂದರ ಹೀಗೆ ಮೊದಲಾದ ಪ್ರತಿಯೊಂದು ಕವನವೂ ಕಾವ್ಯಪ್ರತಿಮೆಯೂ ಸೈದ್ಧಾಂತಿಕ ಭೌತಿಕ ಮಾಧ್ಯಮವೂ ಆಗಿದೆ. ಈ ಕೃತಿಯಲ್ಲಿ ಶಂಕರಪಿಳ್ಳೆಯವರ 50 ಕವಿತೆಗಳ ಅನುವಾದಿತ ಕವಿತೆಗಳು ಸಂಕಲನಗೊಂಡಿವೆ.
©2025 Book Brahma Private Limited.