ಲೇಖಕಿ ಸುಧಾ ಆಡುಕಳ ಅವರ ಅನುವಾದಿತ ಕೃತಿ-ಹಾಡೇ ಅಂಬೇಡ್ಕರ್. ಮಹಾರಾಷ್ಟ್ರದಲ್ಲಿ ಗ್ರಾಮೀಣ ಮಹಿಳೆಯರು ಜಾನಪದೀಯ ಧಾಟಿಯಲ್ಲಿ ಡಾ. ಬಿ.ಆರ್. ಆಂಬೇಡ್ಕರ್ ಅವರನ್ನು ಕುರಿತು ರಚಿಸಿ, ಹಾಡುತ್ತಿದ್ದ ಹಾಡುಗಳನ್ನು ಸಂಗ್ರಹಿಸಿದ ‘ಪೆರಿ’ ಎಂಬ ಸಂಸ್ಥೆಯ ಈ ಕೃತಿಯನ್ನು ಮೊದಲು ಇಂಗ್ಲಿಷಿಗೆ ಭಾಷಾಂತರಗೊಂಡಿದ್ದು, ತದನಂತರ ಸುಧಾ ಆಡುಕಳ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. ಡಾ. ಅಂಬೇಡ್ಕರ್ ಅವರ ಬದುಕಿನ ಹೋರಾಟದ ದಾರುಣ ಘಟನೆಗಳನ್ನು ಚಿತ್ರಿಸುವ, ಅವುಗಳನ್ನು ಸಮರ್ಥವಾಗಿ ಎದುರಿಸಿದ ಅವರ ಧಿಮಂತಿಕೆ, ದುರ್ಬಲರ ಧ್ವನಿಯಾಗಿ ಬಂದ ಅವರ ವ್ಯಕ್ತಿತ್ವ, ಮಾನವೀಯ ಕಳಕಳಿ ಎಲ್ಲವನ್ನೂ ಹಾಡುಗಳಲ್ಲಿ ಪ್ರಶಂಸಿಸಿದ್ದು, ಡಾ. ಆಂಬೇಡ್ಕರರು ಸಮ ಸಮಾಜ ನಿನರ್ಮಾಣಕ್ಕೆ ನೀಡಿರುವ ಕೊಡುಗೆಗಳನ್ನು ಈ ಹಾಡುಗಳು ಸ್ಮರಿಸಿಕೊಳ್ಳುತ್ತವೆ.
©2025 Book Brahma Private Limited.