ಲ್ಯಾಟಿನ್ ಭಾಷೆಯಲ್ಲಿ ರಚನೆಯಾದ ಪ್ರಪ್ರಥಮ ಮಹಾಕಾವ್ಯ, ಲ್ಯಾಟಿನ್ ಮಹಾಕವಿ ವರ್ಜಿಲನ ’ಈನಿಯಡ್’ ಕೃತಿಯನ್ನು ಕೆ.ಎಂ. ಸೀತಾರಾಮಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರವು ತನ್ನ ಗೌರವ ಪ್ರಶಸ್ತಿ ಪುರಸ್ಕೃತರ ಮಾಲೆಯಡಿ ಈ ಕೃತಿಯನ್ನು ಹೊರತಂದಿದೆ.
ಈನಿಯಡ್ ಲ್ಯಾಟಿನ್ ಭಾಷೆಯಲ್ಲಿ ರಚನೆಯಾದ ಪ್ರಪ್ರಥಮ ಮಹಾಕಾವ್ಯ. ಈ ಕಾವ್ಯದ ನಾಯಕ ನಿಯಸ್. ಮಹಾವೀರ ಈನಿಯಸ್ಸನ ಸಾಹಸಗಾಥೆಯನ್ನು ವರ್ಜಿಲನು ಅಪ್ರತಿಮವಾದ ಕಾವ್ಯವಾಗಿ ಬರೆದು ಆ ಮೂಲಕ ರೋಮ್ ಸಾಮ್ರಾಜ್ಯದ ವೈಭವವನ್ನು ಗಗನದೆತ್ತರಕ್ಕೆ ಏರಿಸಿದ. ಪ್ರಾಚೀನತಮವೂ ಪರಮಪವಿತ್ರವೂ ಆದ ರೋಮ್ ಪರಂಪರೆಯ ಸಾಮ್ರಾಟರ ಮೂಲ ಮತ್ತು ಬೆಳವಣಿಗೆಗಳ ಕುರಿತು ಈ ಕಾವ್ಯಗಳಲ್ಲಿ ವಿವರಗಳು ಲಭ್ವವಿದೆ.
©2024 Book Brahma Private Limited.