ಮರಾಠಿ ಕೈದಿಗಳ ಕವಿತೆಗಳು

Author : ಡಿ.ಎಸ್.ಚೌಗಲೆ

Pages 88

₹ 30.00




Year of Publication: 2004
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಈ ಪುಸ್ತಕದಲ್ಲಿರುವ ಕವಿತೆಯಲ್ಲಿ ಮಾತನಾಡಿದ್ದು ಕಂಬಿ ಹಿಂದಿರುವ ಕೈದಿಗಳು. ಇಲ್ಲಿ ಮೂಡಿ ಬಂದ ಮಾತುಗಳು ಸಮಾಜದಲ್ಲಿ ಯಾವುದೋ ಕಾರಣಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪು ಮಾಡಿಯೋ, ಮಾಡದೆಯೋ ಜೈಲಿನಲ್ಲಿರುವ ಕೈದಿಗಳ ಮಾತುಗಳು ಕಾಣಸಿಗುತ್ತದೆ. ಕೈ‌ದಿಗಳ ಹಿನ್ನೆಲೆ, ಅವರು ಯಾವ ಕಾರಣಕ್ಕೆ ಕಂಬಿಯ ಹಿಂದೆ ಇದ್ದಾರೆ, ಅವರು ಈ ರೀತಿ ಹಾಗಲು ಕಾರಣ , ಅವರ ಅನುಭವ, ನೋವು, ಅವರು ಅನುಭವಿಸಿದ ಕಷ್ಟ, ಹಿಂಸೆ, ಅವರ ಮುಂದೆ ಕನಸು, ಜೀವನದ ಬಗ್ಗೆ ಅವರಿಗೆ ಇರುವ ಹಂಬಲ, ಅವರ ನೋವು ನಲಿವು ಎಲ್ಲವನ್ನು ಇಲ್ಲಿ ಕೊಡಲಾಗಿದೆ. ಕಾಂಬಳೆ ಯವರು ಮಹಾರಾಷ್ಟ್ರದ ಜೈಲಿನಲ್ಲಿರುವ ಕೈದಿಗಳ ಬಗ್ಗೆ ಅವರ ಅನುಭವಗಳನ್ನು ಸಂಗ್ರಹಿಸಿದರೆ , ಅದನ್ನು ಅಚ್ಚುಕಟ್ಟಾಗಿ ಎಸ್.ಚೌಗಲೆಯವರು ಕನ್ನಡಕ್ಕೆ ಅನುವಾದ ಮಾಡಿ ಈ ಕೃತಿಯನ್ನು ರಚಿಸಿದ್ದಾರೆ.

About the Author

ಡಿ.ಎಸ್.ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು.  1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ...

READ MORE

Related Books